• Home
  • »
  • News
  • »
  • state
  • »
  • Rahul Gandhi: ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ರಾಹುಲ್ ಭೇಟಿ; ಕೇಂದ್ರ ಸರ್ಕಾರದ ಧೋರಣೆಗೆ ಕಿಡಿ

Rahul Gandhi: ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ರಾಹುಲ್ ಭೇಟಿ; ಕೇಂದ್ರ ಸರ್ಕಾರದ ಧೋರಣೆಗೆ ಕಿಡಿ

ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ರಾಹುಲ್ ಭೇಟಿ

ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ರಾಹುಲ್ ಭೇಟಿ

ಹುಬ್ಬಳ್ಳಿಯ ರಾಷ್ಟ್ರಧ್ವಜ ಘಟಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಕೇಂದ್ರ ಸರ್ಕಾರ ಧ್ವಜ ಸಂಹಿತೆ ತಿದ್ದುಪಡಿ ತಂದಿರೋ ಹಿನ್ನೆಲೆಯಲ್ಲಿ ಭೇಟಿ ನೀಡಿ, ಸಿಬ್ಬಂದಿಯ ಜೊತೆ ಚರ್ಚಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Share this:

ಹುಬ್ಬಳ್ಳಿಯ (Hubballi) ಬೆಂಗೇರಿಯಲ್ಲಿರುವ ರಾಷ್ಟ್ರ ಧ್ವಜ ಉತ್ಪಾದನಾ ಕೇಂದ್ರಕ್ಕೆ (National Flag Manufacturing Unit) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ದೇಶದ ಏಕೈಕ ರಾಷ್ಟ್ರ ಧ್ವಜ ಉತ್ಪಾದನಾ ಕೇಂದ್ರದ ಎಂಬ ಹೆಗ್ಗಳಿಕೆ ಬೆಂಗೇರಿ ಕೇಂದ್ರದ್ದಾಗಿದ್ದು, ಕೇಂದ್ರ ಸರ್ಕಾರದ ಧ್ವಜ ಸಂಹಿತೆ ತಿದ್ದುಪಡಿ ಹಿನ್ನೆಲೆಯಲ್ಲಿ ರಾಹುಲ್  ಗಾಂಧಿ (Rahul Gandhi) ಭೇಟಿ ಮಹತ್ವ ಪಡೆದುಕೊಂಡಿದೆ. ರಾಷ್ಟ್ರ ಧ್ವಜ ತಯಾರಿಕ ಘಟಕದ ಸಿಬ್ಬಂದಿಯ ಜೊತೆ ಮಾತನಾಡಿದ ರಾಹುಲ್, ರಾಷ್ಟ್ರ ಧ್ವಜ ತಯಾರಿಕೆಯ ವಿವರಗಳನ್ನು ಪಡೆದರು.


ರಾಹುಲ್ ಗಾಂಧಿಗೆ ಮನವಿ ಪತ್ರ ಸಲ್ಲಿಕೆ


ಈ ವೇಳೆ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಪ್ರತಿನಿಧಿಗಳು ರಾಹುಲ್ ಗಾಂಧಿಗೆ ಮನವಿ ಪತ್ರ ಸಲ್ಲಿಸಿ, ರಾಷ್ಟ್ರ ಧ್ಜಜ ಉತ್ಪಾದನಾ ಕೇಂದ್ರ ಉಳಿಸಲು ಹೋರಾಟ ಮಾಡುವಂತೆ ಮನವಿ ಮಾಡಿದರು ಧ್ವಜ ಸಂಹಿತೆ ತಿದ್ದುಪಡಿ ವಿರುದ್ಧ ಸಂಸತ್ ನಲ್ಲಿ ಧ್ವನಿ ಎತ್ತುವುದಾಗಿ ಸಿಬ್ಬಂದಿಗೆ ಭರವಸೆ ನೀಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಧ್ವಜ ಸಂಹಿತೆ ತಿದ್ದುಪಡಿಗೆ ಆಕ್ರೋಶ ವ್ಯಕ್ತಪಡಿಸಿದರು.


ಶ್ರೀಮಂತ ಉದ್ಯಮಿಗಳಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರ ಈ ರೀತಿ ಮಾಡ್ತಿದೆ. ಬಿಜೆಪಿಯವರಿಗೆ ಗುಡಿ ಕೈಗಾರಿಕೆ ಸಣ್ಣ ಕೈಗಾರಿಕೆಗಳು ಬೇಕಾಗಿಲ್ಲ. ಖಾದಿ ಕಾರ್ಮಿಕರ ಹಣವನ್ನ ತೆಗೆದುಕೊಂಡು ದೊಡ್ಡವರ ಜೇಬಿಗೆ ಹಾಕುತ್ತಿದೆ. ಇಂಥವರ ಹಣ ಕಿತ್ತುಕೊಂಡು ದೊಡ್ಡ ಶ್ರೀಮಂತರ ಜೇಬಿಗೆ ಹಾಕ್ತಿದೆ. ಖಾದಿ ಮತ್ತು ಚರಕ ದೇಶದ ರಾಷ್ಟ್ರ ಪ್ರೇಮದ ಸಂಕೇತವಾಗಿದೆ.
ಇವು ಭಾರತ ದೇಶವನ್ನು ಪ್ರತಿನಿಧಿಸ್ತಿವೆ.
ಆದರೆ ಕೇಂದ್ರ ಸರ್ಕಾರದಿಂದ ಇದಕ್ಕೆ ತದ್ವಿರುದ್ಧದ ಧೋರಣೆ ವ್ಯಕ್ತವಾಗ್ತಿದೆ. ಕೇಂದ್ರದಿಂದ ರಾಷ್ಟ್ರ ಧ್ವಜ ಸಮಿತಿ ತಿದ್ದುಪಡಿಯಿಂದಷ್ಟೇ ತಪ್ಪಾಗಿಲ್ಲ. ನೋಟ್ ಬ್ಯಾನ್, ಜಿ.ಎಸ್.ಟಿ. ಕಾಯ್ದೆ, ಕೃಷಿ ಕಾಯ್ದೆ ತಿದ್ದುಪಡಿಗಳಲ್ಲಿಯೂ ಇಂಥದೇ ಧೋರಣೆ ಹೊಂದಿದೆ. ಜನ ಸಾಮಾನ್ಯರ ದುಡ್ಡನ್ನು ಕೆಲವೇ ಶ್ರೀಮಂತರ ಜೇಬಿಗೆ ಹಾಕ್ತಿದೆ. ಎಲ್ಲದರಲ್ಲಿಯೂ ಸುಲಿಗೆ ನಡೆದಿದೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.


ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮುಖಂಡರಾದ ರಜತ್ ಉಳ್ಳಾಗಡ್ಡಿಮಠ ಮತ್ತಿತತರು ಉಪಸ್ಥಿತರಿದ್ದರು.


ಬೂಟುಗಾಲಿನಲ್ಲಿ ರಾಷ್ಟ್ರ ಧ್ವಜ ತಯಾರಿಕಾ ಘಟಕಕ್ಕೆ ಎಂಟ್ರಿ


ಹುಬ್ಬಳ್ಳಿ ಪೊಲೀಸರಿಗೆ ಕನಿಷ್ಠ ಸೌಜನ್ಯ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ರಾಷ್ಟ್ರಧ್ವಜಕ್ಕೆ ಪೊಲೀಸ್ ಸಿಬ್ಬಂದಿ ಕವಡೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಅನ್ನೋ ಮಾತು ಕೇಳಿಬಂದಿದೆ. ಶೂ ತೆರೆಯದೇ ಪೊಲೀಸರು ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ ಕಾಲಿಟ್ಟಿದ್ದು ಕಂಡು ಬಂದಿತು. ಧ್ವಜ ತಯಾರಿಕಾ ಕೇಂದ್ರದಲ್ಲಿ ಚಪ್ಪಲಿ, ಶೂ ಹಾಕಿಕೊಂಡು ಪ್ರವೇಶಿಸುವಂತಿಲ್ಲ‌. ಇದು ಧ್ವಜ ಸಂಹಿತೆಯಲ್ಲೂ ಕೂಡ ಇತ್ತು. ರಾಷ್ಟ್ರ ಧ್ವಜದ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಇಲ್ಲಿ ಪಾದರಕ್ಷೆ, ಶೂ ನಿಷೇಧ ಹೇರಲಾಗಿದೆ. ಅದು ತಿಳಿಯದೇ ಪೊಲೀಸ್ ಅಧಿಕಾರಿಗಳು ಬೂಟುಗಾಲಲ್ಲಿ ಒಳ ಪ್ರವೇಶಿಸಿದ್ದಾರೆ.
ಡಿಸಿಪಿ ಸಾಹಿಲ್ ಬಾಗ್ಲಾ, ಸೌತ್ ಎಸಿಪಿ ಆರ್.ಕೆ. ಪಾಟೀಲ್, ಪಿಐ ಬಸವರಾಜ ಕಾಮನಬೈಲ್ ಅವರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಲಾಗಿದೆ. ಇದೇ ನಾ ಖಾಕಿ, ರಾಷ್ಟ್ರಧ್ವಜಕ್ಕೆ ಕೊಡುವ ಗೌರವ ಅನ್ನೋ ಪ್ರಶ್ನೆ ಕೇಳಿಬಂದಿದೆ. ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜ ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಭದ್ರತೆ ಪರಿಶೀಲನೆಗೆ ಶೂ ಹಾಕಿಕೊಂಡೇ ಅಧಿಕಾರಿಗಳು ಕೇಂದ್ರದ ಒಳಗೆ ಹೋಗಿದ್ದರು.


ಇದನ್ನೂ ಓದಿ: Siddaramotsava: ಸಿದ್ದರಾಮೋತ್ಸವದಲ್ಲಿ ಡ್ಯಾಮೇಜ್ ಕಂಟ್ರೋಲ್ ಯತ್ನ; ರಾಹುಲ್, ಡಿಕೆ, ಸಿದ್ದು ಬಾಯಲ್ಲಿ ಒಗ್ಗಟ್ಟಿನ ಮಂತ್ರ


ರಾಹುಲ್ ಭದ್ರತೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಅಪಘಾತ


ರಾಹುಲ್ ಗಾಂಧಿ ಭದ್ರತೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿ ಬೈಕ್ ಅಪಘಾತವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಬಸವರಾಜ ಗಾಯಗೊಂಡ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಕಲಘಟಗಿಯಿಂದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯತ್ತ  ಬರುತ್ತಿದ್ದಾಗ ಘಟನೆ ನಡೆದಿದೆ.


ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಬೈಕ್ ಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿತ್ತು. ಕೆಳಗೆ ಬಿದ್ದು ಬಸವರಾಜ ತಲೆಗೆ ಗಂಭೀರ ಗಾಯಗೊಂಡಿದ್ದು,  ಕೂಡಲೇ ಸ್ಥಳೀಯರಿಂದ ಗಾಯಾಳು ಬಸವರಾಜನ್ನು ರಕ್ಷಣೆ ಮಾಡಿದ್ದಾರೆ. ನಂತರ ಬಸವರಾಜರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:Pavana HS
First published: