ಇಂದು ಬೀದರ್​ಗೆ ರಾಹುಲ್​ ಗಾಂಧಿ; ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್​ ವೇದಿಕೆ ಸಜ್ಜು

news18
Updated:August 13, 2018, 10:48 AM IST
ಇಂದು ಬೀದರ್​ಗೆ ರಾಹುಲ್​ ಗಾಂಧಿ; ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್​ ವೇದಿಕೆ ಸಜ್ಜು
news18
Updated: August 13, 2018, 10:48 AM IST
ಬಸವರಾಜ್​ ಕಡಗಂಚಿ, ನ್ಯೂಸ್​ 18 ಕನ್ನಡ

ಬೀದರ್​ (ಆ.13): ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಇಂದು ಬೀದರ್​ನಲ್ಲಿ ಆಯೋಜಿಸಿರುವ ಜನಧ್ವನಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಭಾಗವಹಿಸಲಿದ್ದಾರೆ.

ಇಡೀ ನಗರ ನವವಧುವಿನಂತೆ ಸಿಂಗಾರಗೊಂಡಿದ್ದು ಕಾಂಗ್ರೆಸ್​ ನಾಯಕರ ದಂಡೇ ಜನ ಧ್ವನಿ ಸಮಾವೇಶದಲ್ಲಿ ಭಾಗವಹಿಸುತ್ತಿದೆ. ಕಾಂಗ್ರೆಸ್​ ಯುವರಾಜ ರಾಹುಲ್ ಗಾಂಧಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್​ಗೆ ಪ್ರತಿಭಟನೆಯ ಬಿಸಿ ಕೂಡಾ ತಟ್ಟಲಿದೆ. ಇತ್ತ ದಲಿತ ಮುಖ್ಯಮಂತ್ರಿ ಘೋಷಣೆ ಮಾಡಬೇಕೆಂದು ದಲಿತ ಸಂಘಟನೆಯಯವರು ರಾಹುಲ್ ಕಪ್ಪು ಬಾವುಟ ಪ್ರದರ್ಶಿಸುವ ಸೂಚನೆ ಸಿಕ್ಕಿದ್ದು ರಾಜ್ಯ ಗುಪ್ತಚರ ಇಲಾಖೆ ಅಲರ್ಟ್ ಆಗಿರುವಂತೆ ಬೀದರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಿಗಿ ಭದ್ರತೆಗೆ ವ್ಯವಸ್ಥೆ:

ರಾಹುಲ್ ಗಾಂಧಿ ಬೀದರ್ ಸಮಾವೇಶದಲ್ಲಿ ಭಾಗವಹಿಸುತ್ತಿರುವುದರಿಂದ ಈಗಾಗಲೇ ರಾಜ್ಯಕ್ಕೆ ದಲಿತ ಸಿಎಂ ಘೋಷಣೆ ಮಾಡುವಂತೆ ಆಗ್ರಹಿಸಿ ಕೆಲ ದಲಿತ ಸಂಘಟನೆಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಕಪ್ಪು ಬಣ್ಣದ ಬಟ್ಟೆ ತೊಟ್ಟವರಿಗೆ ಸಮಾವೇಶ ನಡೆಯುವ ಸಭಾಂಗಣದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕಪ್ಪು ಶರ್ಟ್, ಕಪ್ಪು ಪ್ಯಾಂಟ್ ತೊಟ್ಟರೂ, ಕಪ್ಪು ಬಣ್ಣದ ಕರ್ಚೀಫ್​, ಸಾಕ್ಸ್​ ಹಾಕಿಕೊಂಡವರಿಗೆ ಕೂಡ ಕಾರ್ಯಕ್ರಮ ನೋಡಲು ಪೊಲೀಸರು ಅವಕಾಶ ನೀಡುತ್ತಿಲ್ಲ.ಎಸ್​ಪಿಜಿ ಸೂಚನೆ ಮೇರೆಗೆ ಕಪ್ಪು ಬಣ್ಣದ ಎಲ್ಲ ಬಟ್ಟೆಗಳನ್ನು ಪೊಲೀಸರು ನಿರ್ಬಂಧಿಸುತ್ತಿದ್ದಾರೆ.

ಬೀದರ್ ನಗರದಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಹಿರಿಯ ಪೋಲೀಸ್ ಅಧಿಕಾರಿಗಳ ತಂಡ ನಗರದ ಭದ್ರತೆಯ ಪರೀಶಿಲನೆ ನಡೆಸುತ್ತಿದ್ದಾರೆ. ಬೀದರ್, ಕಲ್ಬುರ್ಗಿ, ಯಾದಗಿರಿಯಿಂದ 4 ಸಾವಿರಕ್ಕೂ ಅಧಿಕ ಪೋಲೀಸರನ್ನು ನಿಯೋಜನೆ ಮಾಡಲಾಗಿದ್ದು, ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ರಾಹುಲ್ ಕಾರ್ಯಕ್ರಮಕ್ಕಾಗಿ ನಗರದ ಜವಾಹರಲಾಲ್ ನೆಹರು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ  ಎನ್ನಲಾಗುತ್ತಿದೆ.

ರಾಜ್ಯ ಕಾಂಗ್ರೆಸ್​ ನಾಯಕರು ಭಾಗಿ:
Loading...

ಈ ಕಾರ್ಯಕ್ರಮದಲ್ಲಿ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವೀರಪ್ಪ ಮೊಯಿಲಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಇಂದು ನವದೆಹಲಿಯಿಂದ ನೇರವಾಗಿ 11 ಗಂಟೆಗೆ ಬೀದರ್​ಗೆ ಬರುವ ರಾಹುಲ್ ಗಾಂಧಿ ಮಧ್ಯಾಹ್ನ 2 ಗಂಟೆಯವರೆಗೂ ಜನ ದ್ವನಿ ಸಮಾವೇಶದಲ್ಲಿ ಭಾಗವಹಿಸಿ ನಂತರ ತೆಲಂಗಾಣಕ್ಕೆ ತೆರಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ಕಳೆದ 4 ದಿನದಿಂದ ಬೀದರ್ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಕಾರಂಜಾ ಡ್ಯಾಂ ನ ಸಂತ್ರಸ್ಥರು ಪ್ರತಿಭಟನೆ ಮಾಡುತ್ತಿದ್ದು ನಮಗೆ ಸೂಕ್ತ ಪರಿಹಾರ ನೀಡುವಂತೆ ರಾಹುಲ್ ಗಾಂಧಿ ನಗರಕ್ಕೆ ಬಂದಾಗಿ ಪ್ರತಿಭಟನೆ ಮಾಡುವ ಸೂಚನೆಯನ್ನು ನೀಡಿದ್ದಾರೆ ಹೀಗಾಗಿ ರಾಹುಲ್ ಗಾಂಧಿಗೆ ಯಾವುದೇ ರೀತಿಯ ಪ್ರತಿಭಟನೆಯ ಬಿಸಿ ತಟ್ಟದಂತೆ ನೋಡಿಕೊಳ್ಳಲು ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.

ಲೋಕ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೀದರ್​ನಿಂದಲೇ ಚುನಾವಣೆಯ ಪ್ರಚಾರ ಆರಂಭಿಸಲಿರುವ ರಾಹುಲ್ ಗೆ ಈ ಸಮಾವೇಶದಲ್ಲಿಯೇ ದಲಿತ ಮುಖ್ಯಮಂತ್ರಿಯನ್ನು ಘೋಷಣೆ ಮಾಡಬೇಕೆಂದು ಕೆಲ ದಲಿತ ಪರ ಸಂಘಟನೆಯವರು ಒತ್ತಾಯಿಸಲಿದ್ದಾರೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...