• Home
  • »
  • News
  • »
  • state
  • »
  • Bharat Jodo Yatra: ವಾಟರ್ ಟ್ಯಾಂಕ್ ಏರಿ ರಾಹುಲ್ ಗಾಂಧಿ ಭಾಷಣ, ಕೈ ನಾಯಕನಿಂದ ಕನ್ನಡದ ಗುಣಗಾನ!

Bharat Jodo Yatra: ವಾಟರ್ ಟ್ಯಾಂಕ್ ಏರಿ ರಾಹುಲ್ ಗಾಂಧಿ ಭಾಷಣ, ಕೈ ನಾಯಕನಿಂದ ಕನ್ನಡದ ಗುಣಗಾನ!

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಮರನಹಳ್ಳಿಯಲ್ಲಿ ಇಂದು ರಾಹುಲ್ ಗಾಂಧಿಗೆ ಬೆಲ್ಲದ ಆರತಿ ಮಾಡಿ ಪುಟಾಣಿಗಳು ಸ್ವಾಗತ ಕೋರಿದರು. ಈ ವೇಳೆ ನೆರೆದಿದ್ದ ಜನರನ್ನು ನೋಡಿ ರಾಹುಲ್ ಗಾಂಧಿ ವಾಟರ್ ಟ್ಯಾಂಕ್ ಹತ್ತಿ, ಅಲ್ಲಿಂದಲೇ ಭಾಷಣ ಮಾಡಿದರು.

  • News18 Kannada
  • Last Updated :
  • Chitradurga, India
  • Share this:

ಮೊಳಕಾಲ್ಮೂರು, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು (Molakalmuru) ತಾಲೂಕಿನಲ್ಲಿ ಇಂದು ಕಾಂಗ್ರೆಸ್‌ನ (Congress) ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಶೇಂಗಾ ಹೊಲಕ್ಕೆ (groundnut field) ಭೇಟಿ ನೀಡಿ, ರೈತರೊಂದಿಗೆ ಮಾತನಾಡಿದರು. ದೇಶಕ್ಕೆ ಅನ್ನ ನೀಡುವ ಅನ್ನದಾತರಿಂದ ಬಿಜೆಪಿ ಹಣ ಸಂಗ್ರಹಿಸುತ್ತಿದ್ದರೆ, ಭಾರತ್ ಜೋಡೋ ಯಾತ್ರೆ ರೈತರ ಪರ ಧ್ವನಿ ಎತ್ತುತ್ತಿದೆ. ರೈತರ ಜೊತೆ ಇದ್ದೆವು, ಇದ್ದೇವೆ ಮತ್ತು ಇರುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಮೊಳಕಾಲ್ಮೂರಿನಲ್ಲಿ ವಾಟರ್ ಟ್ಯಾಂಕ್ (Water Tank) ಮೇಲೆ ಹತ್ತಿ ರಾಹುಲ್ ಗಾಂಧಿ ಭಾಷಣ (Rahul Gandhi Speech) ಮಾಡಿದ್ದು ವಿಶೇಷವಾಗಿತ್ತು.


ವಾಟರ್ ಟ್ಯಾಂಕ್ ಮೇಲೆ ನಿಂತು ರಾಹುಲ್ ಗಾಂಧಿ ಭಾಷಣ


ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಮರನಹಳ್ಳಿಯಲ್ಲಿ ಇಂದು ರಾಹುಲ್ ಗಾಂಧಿಗೆ ಬೆಲ್ಲದ ಆರತಿ ಮಾಡಿ ಪುಟಾಣಿಗಳು ಸ್ವಾಗತ ಕೋರಿದರು. ಈ ವೇಳೆ ನೆರೆದಿದ್ದ ಜನರನ್ನು ನೋಡಿ ರಾಹುಲ್ ಗಾಂಧಿ ವಾಟರ್ ಟ್ಯಾಂಕ್ ಹತ್ತಿ, ಅಲ್ಲಿಂದಲೇ ಭಾಷಣ ಮಾಡಿದರು.
ರಾಹುಲ್ ಜೊತೆಗೆ ವಾಟರ್ ಟ್ಯಾಂಕ್ ಏರಿದ ಸಿದ್ದರಾಮಯ್ಯ


ರಾಹುಲ್ ಗಾಂಧಿ ನೀರಿನ  ಟ್ಯಾಂಕರ್ ಹತ್ತಿದ್ದಕ್ಕೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಫುಲ್ ಖುಷಿಯಾದರು. ರಾಹುಲ್ ಬರುತ್ತಾರೆ ಅಂತ ಕಾಂಗ್ರೆಸ್ ಕಾರ್ಯಕರ್ತರು ವಾಟರ್ ಟ್ಯಾಂಕ್ ಮೇಲೆ ಕುಳಿತಿದ್ದರು. ರಾಹುಲ್ ಗಾಂಧಿ ಬರುತ್ತಿದ್ದಂತೆ ಜೋರು ಶಿಳೆ  ಹೊಡೆಯುತ್ತ ರಾಹುಲ್ ಪರ ಘೋಷಣೆ ಕೂಗಿದ್ರು. ಈ ವೇಳೆ ಕಾರ್ಯಕರ್ತರನ್ನು ನೋಡಿ ಏಕಾಏಕಿ ವಾಟರ್ ಟ್ಯಾಂಕ್ ಏರಿದ ರಾಹುಲ್ ಗಾಂಧಿ, ಕಾಂಗ್ರೆಸ್ ಬಾವುಟ ಹಾರಿಸಿದರು. ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಕೂಡ ವಾಟರ್ ಟ್ಯಾಂಕ್ ಮೇಲೆ ಹತ್ತಿದ್ರು.


ಇದನ್ನೂ ಓದಿ: Uday Garudachar: ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳು ಜೈಲು! ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕೆ ಕೋರ್ಟ್‌ ಶಿಕ್ಷೆ


ಕನ್ನಡದ ಬಗ್ಗೆ ರಾಹುಲ್ ಗಾಂಧಿ ಮಾತು


ಇನ್ನು ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ರು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರದ್ದು ಕೆಟ್ಟ ಸಿದ್ದಾಂತ, ಬಿಜೆಪಿ, ಆರ್ ಎಸ್ ಎಸ್ ಅವರಿಗೆ ಕನ್ನಡ ಎರಡನೇ ದರ್ಜೆ ಭಾಷೆಯಾಗಿದೆ ಅಂತ ಆರೋಪಿಸಿದ್ರು. ಕರ್ನಾಟಕದಲ್ಲಿ ಪ್ರಥಮ ಭಾಷೆ ಕನ್ನಡವಾಗಿದೆ. ಕರ್ನಾಟಕದ ಮಕ್ಕಳು ಪರೀಕ್ಷೆಗಳನ್ನ ಕನ್ನಡದಲ್ಲಿಯೇ ಬರೆಯಲು ಅವಕಾಶ ಇರುತ್ತೆ, ಕರ್ನಾಟಕದಲ್ಲಿ ಕನ್ನಡ ಭಾಷೆ, ಕೇರಳದಲ್ಲಿ ಮಲೆಯಾಳಂ, ತಮಿಳುನಾಡಿನಲ್ಲಿ ತಮಿಳು ಭಾಷೆ ಮಾತನಾಡ್ತಾರೆ, ಆಯಾ ಭಾಷೆಗಳ ಸ್ವಾತಂತ್ರ್ಯ ಇದೆ, ಬಿಟ್ಟುಬಿಡಿ ಅಂತ ರಾಹುಲ್ ಹೇಳಿದ್ರು.


ಇದನ್ನೂ ಓದಿ: Karnataka Assembly Elections: ಗಾಂಧಿನಗರದ ಗಲ್ಲಿಯೊಳಗೆ ಹೇಗಿದೆ ಚುನಾವಣಾ ಕಾವು? ಈ ಬಾರಿ ಗೆಲ್ಲೋದು ಕೈ-ಕಮಲ-ದಳವೋ?


ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಇರಬೇಕು


ಯಾತ್ರೆ ವೇಳೆ ಕೆಲವು ಜನರು, ಯುವಕರು ನನ್ನನ್ನು ಭೇಟಿ ಮಾಡಿದ್ರು, ಜನರು 40 ಪರ್ಸೆಂಟ್ ಕಮಿಷನ್ ಸರ್ಕಾರದ ಬಗ್ಗೆ ಮಾತನಾಡಿದ್ರು, ಈ ಸರ್ಕಾರವನ್ನು ಯಾಕೆ ಸಹಿಸಿಕೊಳ್ಳಬೇಕು ಅಂತಿದ್ದಾರೆ ಅಂತ ಹೇಳಿದ್ರು. ಇನ್ನು ಕನ್ನಡದಲ್ಲಿ ಪರೀಕ್ಷೆ ಬರೆಯುವ ಬಗ್ಗೆ ಯುವಕರು ಅಭಿಪ್ರಾಯ ಹಂಚಿಕೊಂಡ್ರು, ಕರ್ನಾಟಕದಲ್ಲಿ ಕನ್ನಡ ಕ್ಕೆ ಆದ್ಯತೆ ಇರಬೇಕು. ಆದರೆ ಆರ ಎಸ್ ಎಸ್ ಕನ್ನಡ ವಿರೋಧಿ ಆಗಿದೆ, ಆರ್ ಎಸ್ ಎಸ್ ಹಿಂದಿ ಹೇಳಿಕೆ ಮಾಡುತ್ತಿದೆ. ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕು, ಬಿಜೆಪಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಅಂತ ಆರೋಪಿಸಿದ್ರು.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು