ಪ್ರಧಾನಿಯಾಗಲಿ ಎಂದು ಪೂಜೆ ಸಲ್ಲಿಸಿ ತಂದಿದ್ದ ಬಿಲ್ವಪತ್ರೆ ನಿರಾಕರಿಸಿದ ರಾಹುಲ್ ಗಾಂಧಿ


Updated:February 13, 2018, 4:44 PM IST
ಪ್ರಧಾನಿಯಾಗಲಿ ಎಂದು ಪೂಜೆ ಸಲ್ಲಿಸಿ ತಂದಿದ್ದ ಬಿಲ್ವಪತ್ರೆ ನಿರಾಕರಿಸಿದ ರಾಹುಲ್ ಗಾಂಧಿ
ಬಿಲ್ವಪತ್ರೆ ನಿರಾಕರಿಸಿದ ರಾಹುಲ್ ಗಾಂಧಿ

Updated: February 13, 2018, 4:44 PM IST
- ಕೃಷ್ಣ ಜಿ.ವಿ, ನ್ಯೂಸ್ 18 ಕನ್ನಡ

ಕಲ್ಬುರ್ಗಿ(ಫೆ.13): ರಾಜ್ಯ ಚುನಾವಣಾ ಕಣದಲ್ಲೀಗ ರಾಹುಲ್ ಗಾಂಧಿ ನಾನ್ ವೆಜ್ ತಿಂದಿದ್ದು ಮತ್ತು ಟೆಂಪಲ್ ರನ್​ನದ್ದೇ ದೊಡ್ಡ ಸುದ್ದಿ. ಇದೀಗ, ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ವ್ಯಕ್ತಿಯೊಬ್ಬ ಪೂಜೆ ಮಾಡಿಸಿ ಕವರ್​ನಲ್ಲಿ ಬಿಲ್ವಪತ್ರೆ ತಂದು ಕೊಟ್ಟಾಗ, ಬಿಲ್ವ ಪತ್ರೆ ತೆಗೆದುಕೊಳ್ಳಲು ರಾಹುಲ್ ಗಾಂಧಿ ಹಿಂದೇಟು ಹಾಕಿದ ಘಟನೆ ನಡೆದಿದೆ.

ಕಲ್ಬುರ್ಗಿಯ ನಡೆದ ಸಂವಾದ ಕಾರ್ಯಕ್ರಮದ ಸಂದರ್ಭ ಈ ಘಟನೆ ನಡೆದಿದೆ. ಇಂದು ಮಹಾ ಶಿವರಾತ್ರಿ ಹಿನ್ನೆಲೆ ಕೋರಂಟಿ ಶಿವದೇವಾಲಯದಲ್ಲಿ ವಿಶೇಷ ಪೂಜೆ ಮಾಡಿ ಪ್ರಸಾದ ತಂದಿದ್ದ ವಾಮನ ಕಟ್ಡಿ ಎಂಬಾತ ತಂದಿದ್ದ ಬಿಲ್ವಪತ್ರೆ ಪ್ರಸಾದವನ್ನ ಕವರ್​ನಲ್ಲಿಟ್ಟು ಸಂವಾದ ಮುಗಿಸಿ ಹೊರಡುತ್ತಿದ್ದ ರಾಹುಲ್ ಗಾಂಧಿಗೆ ಕೊಡಲು ಮುಂದಾಗಿದ್ದಾರೆ. ಈ ಸಂದರ್ಭ ಕವರ್ ಕಂಡು ವಿಚಲಿತರಾದ ರಾಹುಲ್ ಗಾಂಧಿ, ವಾಪಸ್ ವಾಮನಕಟ್ಟಿ ಕೈಗೆ ಕವರ್ ಇಟ್ಟು ಮುಂದೆ ತೆರಳಿದ್ದಾರೆ.

ಜನಾಶೀರ್ವಾದ ಯಾತ್ರೆಯ ಅಂತಿಮ ದಿನದ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇವತ್ತು ಕಲ್ಬುರ್ಗಿ, ಜೇವರ್ಗಿ, ಬೀದರ್ ಮುಂತಾದ ಕಡೆ ಪ್ರಚಾರ ನಡೆಸುತ್ತಿದ್ದಾರೆ.

ರಾಹುಲ್ ಗಾಂಧಿ ನಿನ್ನೆ ಜವಾರಿ ಕೋಲೀ ತಿಂದು ನರಸಿಂಹ ಸ್ವಾಮಿ ದೇಗುಲಕ್ಕೆ ತೆರಳಿದ್ದಾರೆ ಎಂದು ಸ್ವತಃ ಮಾಜಿ ಸಿಎಂ ಯಡಿಯೂರಪ್ಪ ಟ್ವಿಟ್ ಮಾಡುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಇದೀಗ, ಬಿಲ್ವ ಪತ್ರೆ ವಿಷಯವನ್ನ ಬಿಜೆಪಿ ಯಾವ ಹಂತಕ್ಕೆ ಕೊಂಡೊಯ್ಯಲಿದೆಯೋ ಕಾದು ನೋಡಬೇಕಿದೆ.

 
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ