ಮೂರು ರಾಜ್ಯ ವಿಜಯ ನಂತರ ಖಡಕ್ ಆದ ರಾಹುಲ್ ಗಾಂಧಿ, ಬಂಡಾಯಗಾರರಿಗೆ ಕೊಕ್

ಇನ್ನು ಸಂಪುಟದಿಂದ ರಮೇಶ್ ಜಾರಕಿಹೊಳಿ‌ ಕೈಬಿಡಲು ನಿರ್ಧಾರ ಮಾಡಲಾಗಿದೆ. ರಾಹುಲ್ ಗಾಂಧಿ ನೇತೃತ್ವದ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಮೇಶ್​​ ಜಾರಕಿಹೊಳಿ ಇತ್ತೀಚೆಗೆ ಕಾಂಗ್ರೆಸ್​​ನಲ್ಲಿ ಭಿನ್ನಮತಕ್ಕೆ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಬದಲು ಸತೀಶ್ ಜಾರಕಿಹೊಳಿಗೆ ಅವಕಾಶ ನೀಡಬೇಕೆ ಎಂದು ಸಿದ್ದರಾಮಯ್ಯನವರು ಸಲಹೆ ನೀಡಿದ್ದಾರೆ. ಇದಕ್ಕೆ ರಾಹುಲ್​​ ಗಾಂಧಿಯವರು ತಲೆದೂಗಿದ್ದಾರೆ ಎಂದು ತಿಳಿದು ಬಂದಿದೆ.

Ganesh Nachikethu
Updated:December 22, 2018, 9:34 AM IST
ಮೂರು ರಾಜ್ಯ ವಿಜಯ ನಂತರ ಖಡಕ್ ಆದ ರಾಹುಲ್ ಗಾಂಧಿ, ಬಂಡಾಯಗಾರರಿಗೆ ಕೊಕ್
ಸಿದ್ದರಾಮಯ್ಯ- ರಮೇ
Ganesh Nachikethu
Updated: December 22, 2018, 9:34 AM IST
ನವದೆಹಲಿ(ಡಿ.21): ಮೈತ್ರಿ ಸರಕಾರದ ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ 6 ಸ್ಥಾನಗಳ ಭರ್ತಿ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಇಂದು ದೆಹಲಿಯ ರಾಹುಲ್​​ ನಿವಾಸದಲ್ಲಿ ಚರ್ಚೆ ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್​​ ನಾಯಕರು ಭಾಗಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜತೆ ರಾಹುಲ್​​ ಗಾಂಧಿ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಹುಲ್​ ಗಾಂಧಿ ಅವರಿಗೆ ಸಂಪುಟ ವಿಸ್ತರಣೆ ಪಟ್ಟಿ ಸೇರಿದೆ. ಈ ಬಗ್ಗೆ ಚರ್ಚಿಸುತ್ತಿರುವ ರಾಹುಲ್​​ ಗಾಂಧಿ ಅವರು,​ ವಿ. ಮುನಿಯಪ್ಪಗೆ ಸಿಎಂ‌ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ರಾಜ್ಯ ನಾಯಕರು ಕೂಡ ಮುನಿಯಪ್ಪ ವಿಷಯದಲ್ಲಿ ಒಮ್ಮತದ ತೀರ್ಮಾನ ವ್ಯಕ್ತಪಿಡಿಸಿದ್ಧಾರೆ. ರಾಜ್ಯ ನಾಯಕರು ತೆಗೆದುಕೊಂಡು ಹೋಗಿರುವ ಪಟ್ಟಿಗೆ ರಾಹುಲ್​​ ಗಾಂಧಿ ಅಂತಿಮ ಮುದ್ರೆ ಹಾಕುವುದೊಂದೇ ಬಾಕಿ ಎನ್ನಲಾಗಿದೆ.

ಇನ್ನು ಸಂಪುಟದಿಂದ ರಮೇಶ್ ಜಾರಕಿಹೊಳಿ‌ ಕೈಬಿಡಲು ನಿರ್ಧಾರ ಮಾಡಲಾಗಿದೆ. ರಾಹುಲ್ ಗಾಂಧಿ ನೇತೃತ್ವದ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಮೇಶ್​​ ಜಾರಕಿಹೊಳಿ ಇತ್ತೀಚೆಗೆ ಕಾಂಗ್ರೆಸ್​​ನಲ್ಲಿ ಭಿನ್ನಮತಕ್ಕೆ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಬದಲು ಸತೀಶ್ ಜಾರಕಿಹೊಳಿಗೆ ಅವಕಾಶ ನೀಡಬೇಕೆ ಎಂದು ಸಿದ್ದರಾಮಯ್ಯನವರು ಸಲಹೆ ನೀಡಿದ್ದಾರೆ. ಇದಕ್ಕೆ ರಾಹುಲ್​​ ಗಾಂಧಿಯವರು ತಲೆದೂಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಕೆಜಿಎಫ್ ಬರಿಗಣ್ಣಿಗೆ ಕಾಣುವ ಸಿನಿಮಾ ಅಲ್ಲ’: ‘ನಿಸ್ಸಂಶಯವಾಗಿ ಒಂದು ಮಹಾಕಾವ್ಯ; ಇಲ್ಲಿದೆ ದಿನೂ ರಿವ್ಯೂ

ಹಾಗೆಯೇ ಅರಣ್ಯ ಸಚಿವ ಶಂಕರ್ ಕೈ ಬಿಡಲು ನಿರ್ಧಾರ ಮಾಡಲಾಗಿದೆಯಂತೇ. ಇಲ್ಲಿಯವರೆಗೂ ಕಾಂಗ್ರೆಸ್ ಸಹ ಸದಸ್ಯ ಪಡೆಯದೇ ಇದ್ದ ಕಾರಣಕ್ಕೆ ಶಂಕರ್ ಬದಲಿಗೆ, ಎಸ್. ಶಿವಳ್ಳಿಗೆ ಅವಕಾಶ ನೀಡಬೇಕು. ಕುರುಬ ಕೋಟಾದ ಅಡಿ ಎಂಟಿಬಿ ನಾಗರಾಜ್​ಗೂ ಅವಕಾಶ ಕೊಡಿ ಎಂದು ಶಿವಳ್ಳಿ, ಎಂಟಿಬಿ ನಾಗರಾಜ್ ಪರ ಪ್ರಬಲ ವಾದ ಮಂಡಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯನವರು.

ಬಳ್ಳಾರಿಯಲ್ಲಿ 8 ರ ಪೈಕಿ ಕಾಂಗ್ರೆಸ್​ 6 ಸ್ಥಾನ ಗೆದ್ದಿತ್ತು. ಕಡೆಗೂ ಬಂಡಾಯಗಾರರಿಗೆ ಖಡಕ್ ಸಂದೇಶ ರವಾನೆ ಮಾಡಿದೆ. ಬಂಡಾಯದ ಭಾವುಟ ಹಾರಿಸಿದ್ದ ಎಲ್ಲರಿಗೂ ಸಂದೇಶ ರವಾನಿಸಿದ್ದು, ರಮೇಶ್ ಜಾರಕಿಹೊಳಿಗೆ ಕೋಕ್ ನೀಡಿದೆ. ಸಹ ಸದಸ್ಯ ಪಡೆಯದಿದ್ದ ಶಂಕರ್, ಬಂಡಾಯ ಸಾರಿದ್ದ ನಾಗೇಂದ್ರ, ಆನಂದ್ ಸಿಂಗ್, ಡಾ. ಸುಧಾಕರ್​ಗೂ ಹಾಗೆಯೇ  ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದ ಪ್ರತಾಪಗೌಡ ಪಾಟೀಲ್ ನೀಡಿಲ್ಲ ಸಚಿವ ಸ್ಥಾನ.

ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಬೇಕಿತ್ತು. ಈ ಉದ್ದೇಶದಿಂದ ರಹೀಂ ಖಾನ್​ಗೆ ಸಚಿವ ಸ್ಥಾನ ನೀಡಲು ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೇವರ್ಗಿ ಶಾಸಕ ಅಜಯ್ ಸಿಂಗ್​ಗೆ ದೆಹಲಿ ಪ್ರತಿನಿಧಿ ಸ್ಥಾನ ನೀಡುವ ಜೊತೆಗೆ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದೆ. ಇದೇ ವೇಳೆ ಇಬ್ಬರನ್ನು ಕೈಬಿಟ್ಟು ಎಂಟು ಮಂದಿ‌ ಹೊಸಬರಿಗೆ ಅವಕಾಶ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಹತ್ತಿರದಿಂದ ಬಲ್ಲವರು.
Loading...

ಇದನ್ನೂ ಓದಿ: 100 ಕೋಟಿ ಭಾರತೀಯರ ಮೇಲೆ ಗೂಢಾಚರ್ಯೆ ಮಾಡಿ, ಬೆದರಿದ ಸರ್ವಾಧಿಕಾರಿ ರೀತಿ ವರ್ತಿಸುತ್ತಿರುವ ಮೋದಿ - ರಾಹುಲ್ ಗಾಂಧಿ

ಖಾಲಿ ಇರುವ ಆರು ಸ್ಥಾನಗಳನ್ನು ತುಂಬಲು ನಿರ್ಧಾರ, 8 ಸಂಸದೀಯ ಕಾರ್ಯದರ್ಶಿಗಳ ನೇಮಕ, ಓರ್ವ ರಾಜಕೀಯ ಕಾರ್ಯದರ್ಶಿ ಸ್ಥಾನ ತುಂಬಲು ನಿರ್ಧಾರ, ಎಸ್​​ಸಿ ಎಡಗೈ ಸಮುದಾಯದಿಂದ ಆರ್.ಬಿ. ತಿಮ್ಮಾಪುರ್​​ಗೆ ಸ್ಥಾನ, ಎಸ್ ಟಿ ಸಮುದಾಯದ ಪೈಕಿ ತುಕಾರಾಂ ಗೆ ಅವಕಾಶ, 20 ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಈ ಎಲ್ಲದರ ಬಗ್ಗೆಯೂ ಚರ್ಚಿಸಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಗೆ ರಾಹುಲ್​​ ಒಪ್ಪಿಗೆ ನೀಡಿದ್ದಾರೆಂದು ಗೊತ್ತಾಗಿದೆ.

ಮಂತ್ರಿ ಪಟ್ಟಿ ಹೀಗಿದೆ?: ಶಾಸಕ ಶಿವಳ್ಳಿ, ಎಂಟಿಬಿ ನಾಗರಾಜ್, ತುಕಾರಾಂ, ಬಿ.ಸಿ. ಪಾಟೀಲ್/ ಎಂ.ಬಿ.ಪಾಟೀಲ್, ಪರಮೇಶ್ವರ ನಾಯಕ್, ಸತೀಶ್ ಜಾರಕಿಹೊಳಿ, ತಿಮ್ಮಾಪುರ
ರಹೀಂಖಾನ್...

---------------
KGF MOVIE: ನ್ಯೂಸ್18 ಕನ್ನಡದ ಜೊತೆ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಮಾತು
-
First published:December 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...