Congress Protest: ಇಡಿ ಮುಂದೆ ಹಾಜರಾದ ರಾಹುಲ್ ಗಾಂಧಿ; ಇತ್ತ ಕಾಂಗ್ರೆಸ್ ಪ್ರತಿಭಟನೆ

ಲಾಲ್ ಬಾಗ್ ಮುಖ್ಯ ಗೇಟ್ ಸರ್ಕಲ್ ಬಳಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಹಿನ್ನೆಲೆ ಪ್ರತಿಭಟನಾಕಾರರ ವಾಹನಗಳನ್ನು ನಿಲುಗಡೆ ಮಾಡಲು ಲಾಲ್ ಬಾಗ್ ಒಳಗೆ ಅವಕಾಶ ನೀಡಲಾಗಿದೆ. ಸ್ಥಳದಲ್ಲಿ ದಕ್ಷಿಣ ಡಿಸಿಪಿ ಹರೀಶ್ ಪಾಂಡೆ ಅವರೇ ಟ್ರಾಫಿಕ್ ನಿರ್ವಹಣೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement directorate) ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi), ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಕೊರೊನಾ ಸೋಂಕು ತಗುಲಿದ ಹಿನ್ನೆಲೆ  ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ರಾಹುಲ್ ಗಾಂಧಿ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇಡಿ ನೋಟಿಸ್ ಗೆ (ED Notice) ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಇಂದು ಬೆಂಗಳೂರಿನ (Bengaluru) ಲಾಲ್ ಬಾಗ್ ಗೇಟ್ ಬಳಿ ಸೇರಿದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶಾಂತಿ ನಗರದಲ್ಲಿರುವ ಇಡಿ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಲಾಲ್ ಬಾಗ್ ಮುಖ್ಯ ಗೇಟ್ ಸರ್ಕಲ್ ಬಳಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಹಿನ್ನೆಲೆ ಪ್ರತಿಭಟನಾಕಾರರ ವಾಹನಗಳನ್ನು ನಿಲುಗಡೆ ಮಾಡಲು ಲಾಲ್ ಬಾಗ್ ಒಳಗೆ ಅವಕಾಶ ನೀಡಲಾಗಿದೆ. ಸ್ಥಳದಲ್ಲಿ ದಕ್ಷಿಣ ಡಿಸಿಪಿ ಹರೀಶ್ ಪಾಂಡೆ ಅವರೇ ಟ್ರಾಫಿಕ್ ನಿರ್ವಹಣೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.

ಇದು ಬಿಜೆಪಿಯ ಷಡ್ಯಂತ್ರ

ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ನಮ್ಮ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಲಾಗಿದೆ. ಇದನ್ನು ವಿರೋಧಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಇದು ರಾಷ್ಟ್ರದಲ್ಲಿ ಬಿಜೆಪಿ ನಡೆಸುತ್ತಿರುವ ಷಡ್ಯಂತ್ರ ಎಂದು ಆರೋಪಿಸಿದರು.

ಇದನ್ನೂ ಓದಿ:  Minister Munirathna: ಸಚಿವ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು; ಯಾಕೆ ಗೊತ್ತಾ?

ಕೇಂದ್ರ ಸರ್ಕಾರ ನಿರಂತರವಾಗಿ ಇಡಿ, ಐಟಿ, ಸಿಬಿಐ ದುರ್ಬಳಕೆ ಮಾಡಿಕೊಂಡು ಹಲವು ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಹಾಕಿ ಹೆದರಿಸುವ ಕೆಲಸವಾಗುತ್ತಿದೆ. ನಮ್ಮ ನಾಯಕರು ರಾಹುಲ್ ಗಾಂಧಿ ಹೆದರುವುದಿಲ್ಲ. ಕೇಂದ್ರ ಸರ್ಕಾರ ಬೇಕು ಅಂತಾನೇ ಈ ರೀತಿ ಮಾಡುತ್ತಿದೆ.

ಮೋದಿ ವೇಷಧಾರಿಗೆ ಬಾರಕೋಲ್ ಏಟು

ನಾವು ಯಾವುದಕ್ಕೂ ಹೆದರುವುದಿಲ್ಲ ಹೋರಾಟ ಮಾಡುತ್ತೇವೆ. ಹೊಡಿ ಹೊಡಿ ಮೋದಿ ಬಡಿ ಎಂದು ವ್ಯಕ್ತಿಯನ್ನು ಅರೆ ಬೆತ್ತಲೆ ಮಾಡಿ ಬಾರುಕೋಲ್ ನಿಂದ ಏಟು ನೀಡಲಾಯ್ತು. ಮೋದಿ ವೇಷ ಧಾರಿಗೆ ಬಾರ್ ಕೋಲ್ ನಿಂದ ಏಟು ಕೊಟ್ಟ ಕಾರ್ಯಕರ್ತರ ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಸುಳ್ಳು ಆರೋಪದ ಮೇಲೆ ಇಡಿ ಉಪಯೋಗಿಸಿಕೊಂಡು ಸೋನಿಯಾ ಗಾಂಧಿಗೆ ತೊಂದರೆ ಕೊಡುತ್ತಿದ್ದಾರೆ. ಬ್ರಿಟಿಷರ ಗುಂಡಿಗೆ ಎದೆ ಕೊಟ್ಟಿದ್ದ ಕಾಂಗ್ರೆಸ್ ನಾಯಕರು ಇಡಿ, ಐಟಿ, ಸಿಬಿಐಗೆ ಹೆದರುವುದಿಲ್ಲ ಎಂದರು.

ನಾವು ಅಧಿಕಾರಕ್ಕೆ ಬರುತ್ತೇವೆ

ಸೋನಿಯಾ ಗಾಂಧಿ, ರಾಹುಲ್ ಗಾಂಧಿನ ಮುಟ್ಟಿದ್ರೆ ಏನಾಗುತ್ತೆ ಅನ್ನೋದನ್ನ ನೀವು ಊಹೆನೂ ಮಾಡೋಕೆ ಆಗಲ್ಲ. 2023 ರಲ್ಲಿ ನಾವು ಗೆದ್ದು ಅಧಿಕಾರಕ್ಕೆ ಬರುತ್ತವೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಅವರೇ ಇದು ನಿಮಗೆ ಎಚ್ಚರಿಕೆ. ನಮ್ಮ ನಾಯಕರನ್ನು ಮುಟ್ಟಿದ್ರೆ ನಾವು ಅಧಿಕಾರಕ್ಕೆ ಬಂದು ನಿಮ್ಮನ್ನು ಒದ್ದು ಒಳಗೆ ಹಾಕ್ತೇವೆ ಎಂದು ಹೇಳಿದರು.

ಸುಳ್ಳು ಆಪಾದನೆಯ ಮೇಲೆ ಸೋನಿಯಾ, ರಾಹುಲ್ ಗಾಂಧಿ ಮೇಲೆ ತಲೆಕೆಟ್ಟ ಸುಬ್ರಹ್ಮಣ್ಯ ಸ್ವಾಮಿ ಕಂಪ್ಲೆಂಟ್ ಕೊಟ್ಟಿದ್ದರು. ಇಂತಹ ಬಹಳ ಸ್ವಾಮಿಗಳನ್ನು ನಾವು ನೋಡಿದ್ದೇವೆ. ಸುಬ್ರಹ್ಮಣ್ಯ ಸ್ವಾಮಿಯನ್ನು ಬಳಸಿಕೊಂಡು ಮೋದಿ ಹಾಗೂ ಅಮಿತ್ ಶಾ ಅವರು ಸೋನಿಯಾ, ರಾಹುಲ್‌ ಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಕಾಂಗ್ರೆಸ್ ನಿಮ್ಮ ಹಾಗೆ ಕುತಂತ್ರಿ ಹೇಡಿ ಪಕ್ಷ ಅಲ್ಲ. ಸೋನಿಯಾ, ರಾಹುಲ್ ಮುಟ್ಟಿದ್ರೆ ಏನ್ ಆಗುತ್ತೆ ಅಂತ ತೋರಿಸುವುದಕ್ಕೆ ಸೇರಿದ್ದೇವೆ. ಇಂದಿರಾಗಾಂಧಿ ಅವರನ್ನು ಮುಟ್ಟಿದಾಗ ಏನ್ ಆಯ್ತು ಎಚ್ಚರಿಕೆ ಕೊಡುತ್ತಿದ್ದೇವೆ . ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅವಾಗ ನಾವು ತೋರಿಸುತ್ತೇವ ಎಂದು ಎಚ್ಚರಿಕೆ ನೀಡಿದರು.
Published by:Mahmadrafik K
First published: