ದೇಶಕ್ಕಾಗಿ ರಾಹುಲ್ ಗಾಂಧಿ ಜೀವ ಬಿಟ್ಟರು; ಕಾಂಗ್ರೆಸ್ ನಾಯಕನ ಯಡವಟ್ಟು

ದೇಶಕ್ಕಾಗಿ ಇಂದಿರಾಗಾಂಧಿ ಸತ್ತೋದ್ರು, ರಾಹುಲ್ ಗಾಂಧಿನೂ ಸತ್ತೋದ್ರು!!! ಸೋನಿಯಾ ಗಾಂಧಿ ಪದವಿ ತ್ಯಾಗಮಾಡಿದ್ರು ಎಂದು ಮೈಮರೆತು ಮಾಧ್ಯಮಗಳಿಗೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

Latha CG | news18
Updated:February 4, 2019, 5:24 PM IST
ದೇಶಕ್ಕಾಗಿ ರಾಹುಲ್ ಗಾಂಧಿ ಜೀವ ಬಿಟ್ಟರು; ಕಾಂಗ್ರೆಸ್ ನಾಯಕನ ಯಡವಟ್ಟು
ಗೋಪಾಲಸ್ವಾಮಿ-ರಾಹುಲ್​ ಗಾಂಧಿ
  • News18
  • Last Updated: February 4, 2019, 5:24 PM IST
  • Share this:
ಹಾಸನ,(ಫೆ.04): ಹಾಸನ ವಿಧಾನ ಪರಿಷತ್​ ಸದಸ್ಯ ಗೋಪಾಲಸ್ವಾಮಿ ಮಾತಿನ ಬರದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯನ್ನೇ ಸಾಯಿಸಿದ್ದಾರೆ. ಹಾಸನದ ಈದ್ಗಾ ಮೈದಾನ ವಿಚಾರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗೋಪಾಲಸ್ವಾಮಿ ಮಧ್ಯಮಗಳೊಂದಿಗೆ ಮಾತನಾಡುವಾಗ ಯಡವಟ್ಟು ಮಾಡಿಕೊಂಡಿದ್ದಾರೆ.

'ದೇಶಕ್ಕಾಗಿ ಇಂದಿರಾಗಾಂಧಿ ಸತ್ತೋದ್ರು, ರಾಹುಲ್ ಗಾಂಧಿನೂ ಸತ್ತೋದ್ರು!!! ಸೋನಿಯಾ ಗಾಂಧಿ ಪದವಿ ತ್ಯಾಗಮಾಡಿದ್ರು' ಎಂದು ಮೈಮರೆತು ಮಾಧ್ಯಮಗಳಿಗೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

ಸರ್ಕಾರ ರಸ್ತೆಗಾಗಿ ಈದ್ಗಾ ಭೂಮಿ ಭೂ ಸ್ವಾಧೀನ ಮಾಡಿಕೊಂಡ ಹಿನ್ನೆಲೆ ಬದಲಿ ಭೂಮಿ ನೀಡುವಂತೆ ಹೋರಾಟ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದ ವಿರುದ್ದವೇ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ  ಭಾಗಿಯಾಗಿದ್ದರು.

 ಬಿಜೆಪಿಯ ನಾಲ್ವರು ಶಾಸಕರು ಜೆಡಿಎಸ್​ ಸಂಪರ್ಕದಲ್ಲಿ; ಸದ್ದಿಲ್ಲದೆ ನಡೆದಿದೆಯಾ 'ಆಪರೇಷನ್​ ತೆನೆ'.?

ಮುಸ್ಲಿಂ ಪರವಾಗಿ ಹಾಸನ ಜಿಲ್ಲಾ ಕಾಂಗ್ರೆಸ್ಸಿಗರು ಧರಣಿ ಕುಳಿತಿದ್ದಾರೆ. ಮತ್ತೆ ಬಹಿರಂಗವಾಗಿ ಜೆಡಿಎಸ್ ವಿರುದ್ದ ಕಾಂಗ್ರೆಸ್ ಹೋರಾಟ ಶುರುವಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ದ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಧರಣಿಯಲ್ಲಿ ಬಾಗೂರು ಮಂಜೇಗೌಡ, ಮಾಜಿ ಸಂಸದ ಹೆಚ್.ಕೆ.ಜವರೇಗೌಡ , ಜಿಲ್ಲಾ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಸಚಿವ ಎಚ್​.ಡಿ.ರೇವಣ್ಣ ವಿರುದ್ಧ ಕಾಂಗ್ರೆಸ್​ ನಾಯಕರ ಮುನಿಸು ಮುಂದುವರೆದಿದೆ. ನಾವು 80 ಸೀಟು, ನೀವು 37 ಸೀಟು ಪಡೆದಿದ್ದೀರಿ. ಇದು ನೆನಪಿರಲಿ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈದ್ಗಾ ಮೈದಾನಕ್ಕೆ ಪರಿಹಾರ ನೀಡುವಂತೆ ಸಚಿವ ರೇವಣ್ಣ ವಿರುದ್ಧ ಕಾಂಗ್ರೆಸ್ಸಿಗರು ಹೋರಾಟ ಮಾಡುತ್ತಿದ್ದಾರೆ.

First published: February 4, 2019, 4:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading