• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election: 4 ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದ ರಾಹುಲ್​ ಗಾಂಧಿಗೆ ಮಳೆ ಕಾಟ!

Karnataka Election: 4 ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದ ರಾಹುಲ್​ ಗಾಂಧಿಗೆ ಮಳೆ ಕಾಟ!

ರಾಹುಲ್​ ಗಾಂಧಿ ಭರ್ಜರಿ ಪ್ರಚಾರ

ರಾಹುಲ್​ ಗಾಂಧಿ ಭರ್ಜರಿ ಪ್ರಚಾರ

ಕರ್ನಾಟಕ ಚುನಾವಣೆಗೆ ಬಂದು ಕರ್ನಾಟಕದ ಬಗ್ಗೆ ಮಾತಾಡಲ್ಲ. ಬದಲಿಗೆ ನಿಮ್ಮ ಬಗ್ಗೆ ಮಾತಾಡ್ತೀರಿ. ಕರ್ನಾಟಕದಲ್ಲಿ 3 ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

  • Share this:

ಬೆಂಗಳೂರು: ಈ ಸಲ ಕಾಂಗ್ರೆಸ್ (Congress)​​ ಅಧಿಕಾರಕ್ಕೆ ಬರುತ್ತೆ ಅನ್ನೋದು ವಿಶ್ವಾಸದಲ್ಲಿ ಕಾಂಗ್ರೆಸ್​ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದು, ಇಂದು ರಾಹುಲ್ ​ಗಾಂಧಿ (Rahul Gandhi) ಅವರು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿ ಪ್ರಚಾರ ನಡೆಸಿದ್ದಾರೆ. ಆದರೆ, ರಾಹುಲ್ ಗಾಂಧಿಯವರನ್ನು ಮಳೆ (Rain) ಇನ್ನಿಲ್ಲದಂತೆ ಕಾಡಿತು. ಮಳೆ ಬಂದಿದ್ದಕ್ಕೆ ಚಾಮರಾಜನಗರದಲ್ಲಿ (Chamarajanagar) ಹೆಲಿಕಾಪ್ಟರ್ ಇಳಿಸಲು ಆಗಲಿಲ್ಲ. ಆದ್ದರಿಂದ ಅರಸೀಕೆರೆಯಿಂದ ಮೈಸೂರಿಗೆ (Mysuru) ಬಂದು, ಅಲ್ಲಿಂದ ಕಾರಿನಲ್ಲಿ ಬಂದರು. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಚಾಮರಾಜನಗರ ಭೇಟಿಯೇ ರದ್ದಾಯಿತು. ಆದರೂ ಸಮಾವೇಶದಲ್ಲಿ ಮಾತಾಡಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ಕಿಡಿಕಾರಿದರು.


ಕರ್ನಾಟಕ ಚುನಾವಣೆಗೆ ಬಂದು ಕರ್ನಾಟಕದ ಬಗ್ಗೆ ಮಾತಾಡಲ್ಲ


ಹಾಸನಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ ಶಿವಲಿಂಗೇಗೌಡ ಪರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ತೆನೆ ಇಳಿಸಿ ಕೈ ಹಿಡಿದಿರುವ ಕೆ.ಎಂ ಶಿವಲಿಂಗೇಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದರು. ಈ ಮೂಲಕ ನಿನ್ನೆ ಹಾಸನದಲ್ಲಿ ಪ್ರಚಾರ ಮಾಡಿದ್ದ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟರು.


ಇದನ್ನೂ ಓದಿ: Karnataka Election 2023: APL-BPL ಕಾರ್ಡ್​​ದಾರರಿಗೆ ಮನೆ ನಿರ್ಮಾಣ, ಉಚಿತ ಗ್ಯಾಸ್, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಕೆಜಿಎಫ್​ ಬಾಬು ಪ್ರಣಾಳಿಕೆಯಲ್ಲಿ ಭರ್ಜರಿ ಘೋಷಣೆ


ಕರ್ನಾಟಕ ಚುನಾವಣೆಗೆ ಬಂದು ಕರ್ನಾಟಕದ ಬಗ್ಗೆ ಮಾತಾಡಲ್ಲ. ಬದಲಿಗೆ ನಿಮ್ಮ ಬಗ್ಗೆ ಮಾತಾಡ್ತೀರಿ. ಕರ್ನಾಟಕದಲ್ಲಿ 3 ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ? ಮುಂದಿನ 5 ವರ್ಷದಲ್ಲಿ ಏನು ಮಾಡ್ತೀರಿ ಹೇಳಿ ಎಂದು ಹಾಸನದಲ್ಲಿ ನಿನ್ನೆ ಪ್ರಚಾರ ಮಾಡಿದ್ದ ಮೋದಿಗೆ ಟಾಂಗ್​​ ಕೊಟ್ಟರು.




ಚಾಮರಾಜನಗರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಎಲ್ಲಾ ನಾಯಕರ ಹೆಸರನ್ನು ಹೇಳುತ್ತೆ, ಆದರೆ ಬಿಜೆಪಿ ನರೇಂದ್ರ ಮೋದಿ ಅವರ ಹೆಸರನ್ನು ಬಿಟ್ಟು ಬೇರೆ ಹೆಸರು ಹೇಳುತ್ತಿಲ್ಲ. ಯಡಿಯೂರಪ್ಪ ಅಂತಹ ನಾಯಕರ ಹೆಸರನ್ನು ಹೇಳುತ್ತಿಲ್ಲ. ಮೋದಿಯವರೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ನಿಲ್ಲಿಸಿ, ಜನರ ಬಗ್ಗೆ ಮಾತನಾಡಲು ಶುರು ಮಾಡಿ.

top videos


    ಬಿಜೆಪಿಗೆ 40ನೇ ನಂಬರ್ ಬಗ್ಗೆ ಬಹಳ ಪ್ರೀತಿ ಆಸೆ , ಏನು ಮಾಡಿದರು 40% ಕಮಿಷನ್ ಪಡೆಯುತ್ತಾರೆ. ಹಾಗಾಗಿ ನೀವು ಅವರಿಗೆ 40 ಸ್ಥಾನ ಮಾತ್ರ ನೀಡಿ, ಕಾಂಗ್ರೆಸ್ ‌ಗೆ 150 ಸ್ಥಾನ ನೀಡಿ. ನಮ್ಮ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಭ್ರಷ್ಟಾಚಾರಿ ಅಲ್ಲ, ಅವರ ಹತ್ತಿರ ನೂರಾರು ಕೋಟಿ ಇಲ್ಲ. ಅದರೆ ಬಿಜೆಪಿ ಅಭ್ಯರ್ಥಿ ಸಚಿವರಾಗಿದ್ದವರು, ಶ್ರೀಮಂತ ರಾಗಿದ್ದಾರೆ ಎಂದು ಹೇಳಿದ್ದಾರೆ.

    First published: