Guru Raghavendra: ಮಂತ್ರಾಲಯದಲ್ಲಿ ರಾಯರ 427ನೇ ವರ್ಧಂತಿ ಉತ್ಸವದ ಸಂಭ್ರಮ; 150 ವಿದ್ವಾಂಸರಿಂದ ಗಾನಸುಧೆ

ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆದಿದ್ದು, ಉತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಭಕ್ತರು ಭಕ್ತಿಭಾವದಿಂದ ಆಗಮಿಸಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿಗಳು

ಶ್ರೀ ರಾಘವೇಂದ್ರ ಸ್ವಾಮಿಗಳು

  • Share this:
ಮಂತ್ರಾಲಯ: ಭಕ್ತರನ್ನು ಕಾಯುವ ಕಾಮಧೇನು, ಕಲಿಯುಗದ (Kaliyuga) ಪ್ರತ್ಯಕ್ಷ ದೈವ, ಮಂತ್ರಾಲಯ (Mantralaya) ಮಹಾಮಠದ (Math) ಶ್ರೀ ಗುರು ರಾಘವೇಂದ್ರ ಸ್ವಾಮಿಗಳ (Sri Guru Raghavendra Swamy) 427ನೇ ವರ್ಧಂತಿ ಉತ್ಸವ (Anniversary Celebration) ಇಂದು ನಡೆಯುತ್ತಿದೆ. ಮಂತ್ರಾಲಯದ ಶ್ರೀ ಮಠದಲ್ಲಿ ಸಂಭ್ರಮ ಮನೆ ಮಾಡಿದೆ. ಗುರು ವೈಭವೋತ್ಸವದ ಕೊನೆಯ ದಿನವಾದ ಇಂದು ವಿವಿಧ ಸೇವೆಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮುಂಜಾನೆಯಿಂದಲೇ ವಿವಿಧ ಸೇವೆಗಳು, ಧಾರ್ಮಿಕ ಪೂಜಾ ಕೈಂಕರ್ಯ ನಡೆಯುತ್ತಿದ್ದು, ಇಂದು ಇಡೀ ದಿನ ರಾಯರ ಆರಾಧನೆ ನಡೆಯಲಿದೆ. ಈ ಅಪರೂಪದ ಕ್ಷಣ ಕಣ್ತುಂಬಿಕೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಲೇ ಇದ್ದಾರೆ.

ತಿರುಪತಿ ತಿಮ್ಮಪ್ಪನ ಶೇಷವಸ್ತ್ರ ಸಮರ್ಪಣೆ

ಶ್ರೀ ಗುರು ರಾಯರ ವರ್ಧಂತಿ ಉತ್ಸವದ ಅಂಗವಾಗಿ ತಿರುಪತಿಯ ಟಿಟಿಡಿ ಅಧಿಕಾರಿಗಳು ತಿರುಪತಿ ಶ್ರೀನಿವಾಸ ದೇವರ ಶೇಷವಸ್ತ್ರ ತೆಗೆದುಕೊಂಡು ಬಂದಿದ್ದಾರೆ. ಮೆರವಣಿಗೆ ಮೂಲಕ ಮಂತ್ರಾಲಯ ಮಠಕ್ಕೆ ಆಗಮಿಸಿ, ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಶೇಷ ವಸ್ತ್ರ ಹಸ್ತಾಂತರಿಸಿದರು. ಹರಿವಾಣದಲ್ಲಿ ಇರಿಸಿದ್ದ ಶೇಷವಸ್ರ್ರವನ್ನು ಶಿರದ ಮೇಲಿಟ್ಟುಕೊಂಡ ಶ್ರೀಗಳು ಆನಂತರ ರಾಯರ ಸನ್ನಿಧಿಗೆ ಸಮರ್ಪಿಸಿದರು.

ಶ್ರೀ ಮಠದಲ್ಲಿ ವಿವಿಧ ಪೂಜಾ ಕಾರ್ಯಕ್ರಮ

ಇಂದು ಮಂತ್ರಾಲಯ ಮಠದಲ್ಲಿ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಇಂದು ಇಡೀ ದಿನ ವಿವಿಧ ಪೂಜಾ ಕೈಂಕರ್ಯ ನಡೆಯಲಿದೆ. ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆದಿದ್ದು, ಉತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಭಕ್ತರು ಭಕ್ತಿಭಾವದಿಂದ ಆಗಮಿಸಿದ್ದಾರೆ.

ಇದನ್ನೂ ಓದಿ: Shani: ಶನಿ ದೇವನ ಮೂರ್ತಿಯನ್ನು ಮನೆಯಲ್ಲಿ ಪೂಜಿಸಬೇಡಿ; ಕಾರಣ ಇದು

ರಾಘವೇಂದ್ರ ಸ್ವಾಮಿಗಳ ಚಿನ್ನದ ರಥೋತ್ಸವ

ಇಂದು ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ನೆರವೇರಲಿದೆ. ಇನ್ನು ಶ್ರೀ ಮಠದಲ್ಲಿ ಇಂದು ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ಅಷ್ಟಾಕ್ಷರಿ ಮತ್ತು ಗುರುರಾಯರ ಸೋತ್ರ, ಕವಚ ಪರಾಯಣ ನಡೆಯಲಿದೆ.  ಇನ್ನು ಭಕ್ತರು ನೀಡಿದ ದೇಣಿಗೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳ್ಳಿ ಆಭರಣ ಗುರುಗಳಿಗೆ ಸಮರ್ಪಿಸಲಾಗಿದೆ.

150 ವಿದ್ವಾಂಸರಿಂದ ಏಕ ಕಾಲದಲ್ಲಿ ಗಾಯನ

ನಾದ ಪ್ರಿಯ ರಾಘವೇಂದ್ರ ಸ್ವಾಮಿಗಳ 427 ನೇ ವರ್ಧಂತಿ ಉತ್ಸವ ಹಿನ್ನೆಲೆಯಲ್ಲಿ ಸಂಗೀತ ಸೇವೆ ನಡೆಯಲಿದೆ.  ಸ್ವತಃ ವೈಣಿಕರಾಗಿ, ಸಂಗೀತ ಪ್ರೇಮಿಯಾಗಿದ್ದ ಗುರು ರಾಯರಿಗೆ ತಮಿಳುನಾಡಿನ ನಾದಾಹಾರ ಟ್ರಸ್ಟನಿಂದ‌ ಸಂಗೀತ ಸೇವೆ ಸಲ್ಲಿಸಲಾಗುತ್ತಿದೆ.

ಶ್ರೀ ಮಠದ ಆವರಣದಲ್ಲಿ ಮೊಳಗಲಿದೆ ಗಾನ ಸುಧೆ

ಚೆನ್ನೈನ ನಾದಾಹಾರ ಟ್ರಸ್ಟ್ ಕಳೆದ 18 ವರ್ಷಗಳಿಂದ ಸಂಗೀತ ಸೇವೆ ಮಾಡುತ್ತಿದೆ. ಇಂದು 150 ವಿದ್ವಾಂಸರಿಂದ ಏಕ ಕಾಲಕ್ಕೆ ಗಾಯನ ಮಾಡಿ ಸಂಗೀತ ಸೇವೆ ಸಮರ್ಪಣೆ ಆಗಲಿದೆ.  ರಾಯರ 427 ನೇ ವರ್ಧಂತಿ ಮಹೋತ್ಸವಕ್ಕೆ ಸಾಕ್ಷಿಯಾದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ಸಂಗೀತ ನಾಧ ಸುಧೆ ಮೊಳಗಲಿದೆ.

ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳು

ಹಿಂದೂ ಧರ್ಮದ ಸನ್ಯಾಸಿಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಮುಖರು. ಮಧ್ವಾಚಾರ್ಯರ ಅನುಯಾಯಿಗಳಾಗಿದ್ದ ರಾಯರು, ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

ಇದನ್ನೂ ಓದಿ: Shiva Worship: ಸೋಮವಾರದಂದೇ ಶಿವನನ್ನು ಪೂಜಿಸುವ ಕಾರಣ ಇದು!

ಶ್ರೀಗಳ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೆಟ್ಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ.
Published by:Annappa Achari
First published: