ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಪ್ರಭಾವಿಗಳಿಗೂ ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿರುವ ಯುವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರಿತು ಹೊಸ ಹೊಸ ವಿಷಯಗಳು ಹೊರ ಬೀಳುತ್ತಿವೆ. ಸಿಸಿಬಿ ವಶದಲ್ಲಿರುವ ವಂಚಕ ಯುವರಾಜ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ. ಈ ಪ್ರಕರಣದಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿರಾಜ್ ಅವರ ಹೆಸರು ಕೇಳಿ ಬಂದಿದೆ. ಈ ವಿಷಯವಾಗಿ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿವೆ. ಅಲ್ಲದೆ ಈ ಹಿಂದೆ ಸಿಸಿಬಿ ಪೊಲೀಸರು ನಟಿ ರಾಧಿಕಾ ಅವರ ಸಹೋದರ ರವಿರಾಜ್ ಅವರನ್ನು ಈ ಪ್ರಕರಣದ ಸಂಬಂಧ ವಿಚಾರಣೆಗೆ ಕರೆದಿದ್ದರು. ಇದೇ ಪ್ರಕರಣದಲ್ಲಿ ಈಗ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದಂತೆ ದಾಖಲೆಗಳು ಸಿಸಿಬಿ ಪೊಲೀಸರ ಕೈ ಸೇರಿವೆ ಎನ್ನಲಾಗುತ್ತಿದೆ. ಇದರಿಂದಾಗಿ ಈಗ ರಾಧಿಕಾ ಕುಮಾರಸ್ವಾಮಿ ಆತಂಕದಲ್ಲಿದ್ದಾರಂತೆ.
ವಂಚಕ ಸ್ವಾಮಿ ಯುವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದು, ಯುವರಾಜ್ ಅವರಿಗೂ ತಮ್ಮ ಕುಟುಂಬಕ್ಕೂ ಇರುವ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
![Radhika Kumaraswamy, Sandalwood Sweety nanna Jodi Kannada Movie, YouTube, Police Complaint]()
ನಟಿ ರಾಧಿಕಾ ಕುಮಾರಸ್ವಾಮಿ
ಯುವರಾಜ್ ಅವರು ಜ್ಯೋತಿಷಿಗಳು, 18 ವರ್ಷಗಳಿಂದ ಅವರ ಪರಿಚಯ ನಮ್ಮ ಕುಟುಂಬಕ್ಕೆ ಇದೆ. ಅವರು ಹೇಳುತ್ತಿದ್ದ ಭವಿಷ್ಯದ ಬಗ್ಗೆ ನಮ್ಮ ಪೋಷಕರಿಗೆ ನಂಬಿಕೆ ಇತ್ತು. ಅದನ್ನು ಹೊರತು ಪಡಿಸಿ ಅವರೊಂದಿಗೆ ಯಾವುದೇ ರೀತಿಯ ವ್ಯಾವಹಾರಿಕ ಸಂಬಂಧ ಮಾಡಿಲ್ಲ ಎಂದಿದ್ದಾರೆ. ಅವರ ಬಂಧನವಾದಾಗಲೇ ತನಗೆ ತಿಳಿದಿದ್ದು ಅವರು ವಂಚನೆಯ ಆರೋಪ. ನನ್ನ ತಂದೆ ಬದುಕಿದ್ದಾಗ ಅವರು ಮನೆಗೆ ಬರುತ್ತಿದ್ದರು ಎಂದಿದ್ದಾರೆ ರಾಧಿಕಾ.
ಇದನ್ನೂ ಓದಿ: DBoss Darshan: ಫೇಸ್ಬುಕ್ನಲ್ಲಿ ಲೈವ್ ಬರಲಿದ್ದಾರೆ ದರ್ಶನ್: ಸಿಗಲಿದೆಯಾ ರಾಬರ್ಟ್ ಕುರಿತಾದ ಸಿಹಿ ಸುದ್ದಿ..!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಅಣ್ಣನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆದರೆ, ನನ್ನನ್ನು ಕರೆದಿಲ್ಲ. ಒಂದು ವೇಳೆ ಸಿಸಿಬಿ ಪೊಲೀಸರು ನನ್ನನ್ನು ವಿಚಾರಣೆಗೆ ಕರೆದರೆ ನಾನು ಹಾಜರಾಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ ನಟಿ.
ಯುವರಾಜ್ ಅವರು ವಂಚಿಸಿದ್ದಾರೆ ಎನ್ನಲಾಗುತ್ತಿರುವ ಹಣ ರಾಧಿಕಾ ಅವರ ಖಾತೆ ಸೇರಿದೆ ಎಂದೂ ಅನುಮಾನಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ನಟಿ, ಅವರೊಂದಿಗೆ ಸಿನಿಮಾ ಮಾಡುವ ಮಾತುಕತೆಯಾಗಿತ್ತು.2020ರ ಮಾರ್ಚ್ ತಿಂಗಳಿನಲ್ಲಿ ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಮುಂಗಡವಾಗಿ 15 ಲಕ್ಷ ಹಣವನ್ನು ಅವರ ಖಾತೆಯಿಂದ ನನ್ನ ಬ್ಯಾಂಕ್ ಖಾತೆಗೆ ಹಾಕಿದ್ದರು. ಅದನ್ನು ಬಿಟ್ಟರೆ ಬೇರೆ ಯಾವ ವ್ಯವಹಾರವೂ ಅವರೊಂದಿಗೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಯಶ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ಚಿತ್ರಮಂದಿರದಲ್ಲಿ ಕೆಜಿಎಫ್ 2 ಟೀಸರ್ ರಿಲೀಸ್
ನನ್ನನ್ನು ರಾಜಕೀಯಕ್ಕೆ ಬನ್ನಿ ಎನ್ನುತ್ತಿದ್ದರು ಯುವರಾಜ್. ಆದರೆ ಸಿನಿಮಾ ನನ್ನ ಧ್ಯೇಯವಾಗಿತ್ತು. ಹಾಗಾಗಿ ಸಿನಿಮಾ ಮುಗಿಯಲಿ ನೋಡೋಣ ಎಂದಿದ್ದೆ. ಆದರೆ ಅವರ ಬಂಧನವಾದಾಗ ನಿಜಕ್ಕೂ ಶಾಕ್ ಆಯಿತು ಎಂದು ಹೇಳಿದ್ದಾರೆ ರಾಧಿಕಾ ಕುಮಾರಸ್ವಾಮಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ