ರದ್ದಿಯಿಂದ ಬುದ್ದಿಯ ಕಡೆಗೆ... ಶಾಂತತಾಯಿ ವೃದ್ಧಾಶ್ರಮದ ವಿಶೇಷ ಕಾರ್ಯ..!

news18
Updated:June 29, 2018, 10:46 AM IST
ರದ್ದಿಯಿಂದ ಬುದ್ದಿಯ ಕಡೆಗೆ...  ಶಾಂತತಾಯಿ ವೃದ್ಧಾಶ್ರಮದ ವಿಶೇಷ ಕಾರ್ಯ..!
news18
Updated: June 29, 2018, 10:46 AM IST
- ಚಂದ್ರಕಾಂತ್  ಸುಗಂಧಿ, ನ್ಯೂಸ್ 18 ಕನ್ನಡ 

ಬೆಳಗಾವಿ ( ಜೂನ್ 29) :  ಹಳೇ ಪೇಪರ್, ಮ್ಯಾಗಜಿನ್ ನಾವು ಯಾವುದೇ ಕೆಲಸಕ್ಕೆ ಬರಲ್ಲ ಎಂದು ರದ್ದಿಗೆ ಹಾಕುತ್ತೇವೆ. ಆದರೇ ಬೆಳಗಾವಿಯ ಸಂಸ್ಥೆಯೊಂದು ರದ್ದಿ ಪೇಪರ್ ಸಂಗ್ರಹಿಸಿ, ನೂರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗಿದೆ. ಸಂಗ್ರಹಿಸಿದ ನಿರುಪಯುಕ್ತ ಪೇಪರ್ ಮಾರಾಟ ಮಾಡಿ ವಿದ್ಯಾರ್ಥಿಗಳ ಲಕ್ಷಾಂತರ ರೂಪಾಯಿ ಫೀ ತುಂಬಿದೆ. ಅಷ್ಟಕ್ಕೂ ಈ ಅದು ಹೇಗೆ ಸಾಧ್ಯ ಅಂತೀರಾ ಈ ಸ್ಟೋರಿ ಓದಿ

ನಿಮ್ಮ ಮನೆಯಲ್ಲಿ ಇರುವ ಹಳೆಯ ಪೇಯರ್, ಮ್ಯಾಗಜಿನ್ ಗಳನ್ನು ನಾವು ಯಾವುದೇ ಪ್ರಯೋಜನಕ್ಕೆ ಬರಲ್ಲ ಎಂದು ಅಂದುಕೊಂಡಿರುತ್ತೆವೆ. ಹೀಗೆ ಚಿಲ್ಲರೆ ಹಣಕ್ಕೆ ಅವುಗಳನ್ನು ಮಾರಾಟ ಸಹ ಮಾಡುತ್ತೇವೆ. ಆದರೆ ಕುಂದಾ ನಗರಿ ಬೆಳಗಾವಿಯಲ್ಲಿ ಸಂಸ್ಥೆಯೊಂದು ಹೀಗೆ ಅನುಪಯುಕ್ತ ಪೇಪರ್ ಸಂಗ್ರಹಿಸಿದೆ. ಅಷ್ಟೇ ಅಲ್ಲ ವೆಸ್ಟ್ ಪೇಪರ್ ಮಾರಾಟ ಮಾಡಿದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದೆ.

ಈ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಸ್ಥೆ ಬಳಸುತ್ತಿದೆ. ನಗರದ ಗುಡ್ ಶೆಡ್ ರಸ್ತೆಯ ಶಾಂತತಾಯಿ ವೃದ್ಧಾಶ್ರಮ ಸಂಸ್ಥೆ ಈ ರೀತಿ ವಿನೂತನ ಕಾರ್ಯಮಾಡಿ ಯಶಸ್ಸು ಸಾಧಿಸಿದೆ. ಕಳೆದ 5 ವರ್ಷಗಳ ಹಿಂದೆ ಆರಂಭವಾದ ರದ್ದಿಯಿಂದ ಬುದ್ಧಿಕಡೆ ಎಂಬ ಕಾರ್ಯಕ್ರಮ ಇಂದು ನಗರದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ. ಈ ವರ್ಷ ರದ್ದಿ ಮಾರಾಟ ಮಾಡಿ 2.25 ಲಕ್ಷ ಹಣ ಸಂಗ್ರಹಿಸಿದರು. ಈ ಹಣದಲ್ಲಿ 127 ಬಡ, ನಿರ್ಗತಿಕ ವಿದ್ಯಾರ್ಥಿಗಳ ಶುಲ್ಕ ಭರಿಸಿದ್ದಾರೆ.

ಶುಲ್ಕ ಕಟ್ಟಲು ಸಾಧ್ಯವಿಲ್ಲದೇ ವಿದ್ಯಾಭ್ಯಾಸ ನಿಲ್ಲಿಸುವ ಸ್ಥಿತಿಯಲ್ಲಿರುವ ಬಡ ಮಕ್ಕಳ ಸಹಾಯಕ್ಕೆ ಸಂಸ್ಥೆ ನಿಂತಿದೆ. 1ನೇ ತರಗತಿಯಿಂದ ಸ್ನಾತಕೋತ್ತರ ಪಧವಿ ವರೆಗೆ ವಿದ್ಯಾರ್ಥಿಗಳು ಸಂಸ್ಥೆಯ ನೆರವು ಪಡೆದುಕೊಂಡಿದ್ದಾರೆ.

ಕಳೆದ 5 ವರ್ಷಗಳಿಂದ ರದ್ದಿಯಿಂದು ಬುದ್ದಿ ಕಡೆ ಯೋಜನೆ ಜಾಲ್ತಿಯಲ್ಲಿದೆ. ಈ ವರೆಗೆ 19 ಲಕ್ಷ ಹಣವನ್ನು 360 ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಭರಿಸಲಾಗಿದೆ. ಹೀಗೆ ಸಂಸ್ಥೆಯಿಂದ ನೆರವು ಪಡೆದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿ ತಿಳಿಯಲು ಜತೆಗೆ ಮುಂದಿನ ದಿನಗಳಲ್ಲಿ ಅವರಿಗೆ ಹೇಗೆ ನೆರವಾಗಲು ಸಾಧ್ಯ ಎಂಬ ಅರಿತುಕೊಳ್ಳಲು ಸಂಸ್ಥೆಯ ಸಭೆಯೊಂದನ್ನು ನಡೆಸಿತು. ಸಭೆಯಲ್ಲಿ ನಿರ್ದೇಶಕರು, ವಿದ್ಯಾರ್ಥಿಗಳು ಪಾಲ್ಗೊಂಡಿದರು.

ಸಂಸ್ಥೆಯಿಂದ ನೆರವು ಪಡೆದ ವಿದ್ಯಾರ್ಥಿಗಳು ಈಗ ಹಲವು ಉನ್ನತ ವ್ಯಾಸಂಗ ಮುಗಿಸಿದ್ದು ಹೆಮ್ಮೆಯಾಗಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ವಿಜಯ ಮೋರೆ.

ರದ್ದಿಯಿಂದ ಬುದ್ದಿ ಕಡೆಗೆ ಈ ಕಾರ್ಯಕ್ರಮ ಯಶಸ್ವಿ ಕಂಡಿದ್ದು, ಈಗಾಗಲೇ ನಗರ ನೂರಾರು ಜನ, ಸಂಘ, ಸಂಸ್ಥೆಗಳು ತಮ್ಮ ರದ್ದಿಯನ್ನು ಶಾಂತಾಯಿ ವೃದ್ಧಾಶ್ರಮ ಸಂಸ್ಥೆಗೆ ಸ್ವಯ ಪ್ರೇರಣೆಯಿಂದ ನೀಡುತ್ತಿವೆ.

ಇದೀಗ ಸಂಸ್ಥೆ ಹೇಳೆಯ ವಸ್ತುಗಳನ್ನು ಸಂಗ್ರಹಿಸಲು ನಿರ್ಧಿಸಿದೆ. ಹೀಗೆ ಸಂಗ್ರಹಿಸಿದ ವಸ್ತುಗಳನ್ನು ಅನಾಥಾಶ್ರಮದ, ನಿರ್ಗತಿಕರಿಗೆ ನೀಡಲು ಮುಂದಾಗಿದೆ. ಈ ಸಂಸ್ಥೆಯ ಈ ಕಾರ್ಯವು ಯಶಸ್ವು ಸಾಧಿಸಲಿ. ಬೆಳಗಾವಿಯ ಜನರು ಈ ಉತ್ತಮ ಕಾರ್ಯಕ್ಕೆ ಮತ್ತಷ್ಟು ಬೆಂಬಲ ನೀಡಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

 
First published:June 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ