ಕೆಲಸ ಕೊಡಿಸುವುದಾಗಿ ಶ್ರೀಲಂಕಾ ಮತ್ತು ಅರಬ್​​​ ರಾಷ್ಟ್ರಗಳಿಗೆ ಯುವತಿಯರ ಸಾಗಾಟ; ಕಿಡಿಗೇಡಿ​​ ಬಂಧನ

ಇಲ್ಲಿಯವರೆಗೂ ಅರಬ್ ದೇಶಗಳಿಗೆ 60ಕ್ಕೂ ಹೆಚ್ಚು ಯುವತಿಯರ ಸಾಗಾಣೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಯುವತಿಯರು ಕುವೈತ್​ಗೆ ಹೋಗುತ್ತಿದ್ದಂತೆಯೇ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದ ಈ ಕಿಡಿಗೇಡಿ.

news18-kannada
Updated:November 19, 2019, 1:53 PM IST
ಕೆಲಸ ಕೊಡಿಸುವುದಾಗಿ ಶ್ರೀಲಂಕಾ ಮತ್ತು ಅರಬ್​​​ ರಾಷ್ಟ್ರಗಳಿಗೆ ಯುವತಿಯರ ಸಾಗಾಟ; ಕಿಡಿಗೇಡಿ​​ ಬಂಧನ
ಇಲ್ಲಿಯವರೆಗೂ ಅರಬ್ ದೇಶಗಳಿಗೆ 60ಕ್ಕೂ ಹೆಚ್ಚು ಯುವತಿಯರ ಸಾಗಾಣೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಯುವತಿಯರು ಕುವೈತ್​ಗೆ ಹೋಗುತ್ತಿದ್ದಂತೆಯೇ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದ ಈ ಕಿಡಿಗೇಡಿ.
  • Share this:
ಬೆಂಗಳೂರು(ನ.19): ಇತ್ತೀಚೆಗೆ ಮಾನವ ಕಳ್ಳ ಸಾಗಣೆ ಬಹುದೊಡ್ಡ ಜಾಲವಾಗಿದೆ. ಕೆಲಸ ಕೊಡಿಸುವುದಾಗಿ ಹೇಳಿ ಕಿಡಿಗೇಡಿಗಳು ಮಕ್ಕಳ ಹಾಗೂ ಮಹಿಳೆಯರನ್ನು ಗೌಪ್ಯವಾಗಿ ವಿದೇಶಕ್ಕೆ ಸಾಗಿಸುತ್ತಾರೆ. ಬಳಿಕ ಇಂತಹ ಕುಕೃತ್ಯಕ್ಕೆ ಬಲಿಯಾಗುವ ಹೆಣ್ಣುಮಕ್ಕಳನ್ನು ನಕಾರಾತ್ಮಕ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ಇಂತಹುದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ವಿದೇಶದಲ್ಲಿ ಉದ್ಯೋಗ ಹುಡುಕುತ್ತಿರುವ ಹೆಣ್ಣುಮಕ್ಕಳಿಗೆ ಕೈತುಂಬ ಸಂಬಳದ ಆಫರ್ ನೀಡುತ್ತಾರೆ. ಊಟ, ವಸತಿ ಎಲ್ಲಾ ಉಚಿತ ಎಂದು ಕಾಗೆ ಹಾರಿಸುತ್ತಾರೆ. ಕೊನೆಗೂ ವಿದೇಶಕ್ಕೆ ಅವರದ್ದೇ ದುಡ್ಡಿನಲ್ಲಿ ಕಳಿಸಿಕೊಡುತ್ತಾರೆ. ಹೀಗೆ ಯಾರದರೂ ಈ ಕೀಚಕನ ಕೈಗೆ ಸಿಕ್ಕಿ ವಿದೇಶಕ್ಕೆ ಹೊರಟರೆ, ಅಂತಹ ಹೆಣ್ಣುಮಕ್ಕಳ ಕಥೆಯಷ್ಟೇ. ಹೀಗೆ ಬೆಂಗಳೂರಿನಲ್ಲೂ ಕಿಡಿಗೇಡಿಯೋರ್ವ ದುಬೈನಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿದ್ದಾನೆ. ಇವನ ಟ್ರಾಪ್​ಗೆ ಬಿದ್ದ ಯುವತಿಯರ ಬೆಂಗಳೂರಿನಿಂದ ದುಬೈಗೆ ಸಾಗಿಸಲು ಮುಂದಾಗಿಸಿದ್ಧಾನೆ. ಆದರೆ, ಈ ಕೀಚಕನನ್ನು ಪೊಲೀಸರು ಕೆಂಪೇಗೌಡ ಏರ್​​​ಪೋರ್ಟ್​​ನಲ್ಲಿ ರೆಂಡ್​​ಹ್ಯಾಂಡ್​​ ಆಗಿ ಬಂಧಿಸಿದ್ಧಾರೆ.

ಮಾನವ ಕಳ್ಳಸಾಗಾಣೆ ಜಾಲದ ಕಿಂಗ್​ಪಿನ್ ಅರೆಸ್ಟ್ ಮಾಡಿದ್ದಾರೆ. ಆಂಧ್ರ ಮೂಲದ ನರಸಿಂಹ ಎಂಬಾತನ ಬಂಧಿಸಿದ್ಧಾರೆ. ಈತ ಅರಬ್ ರಾಷ್ಟ್ರಗಳಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯರ ಬಳಿ ಲಕ್ಷ ಲಕ್ಷ ಪೀಕುತ್ತಿದ್ದ. ಚೆನ್ನೈ, ಬೆಂಗಳೂರು ಏರ್​​ಪೋರ್ಟ್​​ ಮೂಲಕ ಶ್ರೀಲಂಕಾಗೆ ಶಿಫ್ಟ್ ಮಾಡುತ್ತಿದ್ದ. ಶ್ರೀಲಂಕಾದಿಂದ ಅರಬ್ ರಾಷ್ಟ್ರಗಳಿಗೆ ರವಾನೆ ಮಾಡುತ್ತಿದ್ದ. ಏಜೆಂಟ್ ಮೂಲಕ ಯುವತಿಯರನ್ನ ಕಳಿಸುತ್ತಿದ್ದ ನರಸಿಂಹನ ಗ್ಯಾಂಗ್​​ನಲ್ಲಿ 15 ಜನ ಕೀಚಕರು ಇದ್ದಾರೆ.

ಇದನ್ನೂ ಓದಿ: ತಾರಕಕ್ಕೇರಿದ ಜೆಎನ್​​ಯು ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ಪೊಲೀಸ್​ ಲಾಠಿ ಪ್ರಹಾರ: ಕೇಂದ್ರದ ವಿರುದ್ಧ ವಿಪಕ್ಷಗಳ ಕಿಡಿ

ಈ ಹಿಂದೆ ಆಂಧ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ನರಸಿಂಹ ಈಗ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ. ಕಳೆದೊಂದು ತಿಂಗಳಿಂದ ಈತನ ಚಲನವಲನದ ಮೇಲೆ ನಿಗಾ ಇರಿಸಿದ್ದ ಪೊಲೀಸರು ಇಬ್ಬರು ಯುವತಿಯರನ್ನ ಕರೆದೊಯ್ಯಬೇಕಾದರೆ ಬಂಧಿಸಿದ್ದಾರೆ.

ಇಲ್ಲಿಯವರೆಗೂ ಅರಬ್ ದೇಶಗಳಿಗೆ 60ಕ್ಕೂ ಹೆಚ್ಚು ಯುವತಿಯರ ಸಾಗಾಣೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಯುವತಿಯರು ಕುವೈತ್​ಗೆ ಹೋಗುತ್ತಿದ್ದಂತೆಯೇ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದ ಈ ಕಿಡಿಗೇಡಿ. ಒಬ್ಬೊಬ್ಬ ಯುವತಿಗೆ ಒಂದೊಂದು ನಂಬರ್ ಕೊಡುತ್ತಿದ್ದ. ಇದೀಗ ಪೊಲೀಸರು ಈತನೊಂದಿಗೆ ಇದ್ದ 15 ಮಂದಿಗೆ ಬಲೆ ಬೀಸಿದ್ಧಾರೆ.
-----------
First published: November 19, 2019, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading