ಬೆಂಗಳೂರು: ಕರ್ನಾಟಕ (Karnataka) ಸಿಎಂ ಯಾರು ಆಗಲಿದ್ದಾರೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಇದರ ನಡುವೆಯೇ ಸಿಎಂ ಆಯ್ಕೆ ಕುರಿತಂತೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ಗೆ ತಿಳಿಸಿದ್ದೇವೆ ಎಂದು ಕಾಂಗ್ರೆಸ್ (Congress) ನಾಯಕರು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಸಿದ್ದರಾಮಯ್ಯ (Siddaramaiah) ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಇದರ ನಡುವೆ ಇಂದು ದೆಹಲಿಗೆ (Delhi) ತೆರಳಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಪ್ರವಾಸ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಟ್ಟೆ ನೋವಿನ ಕಾರಣ ಡಿಕೆ ಶಿವಕುಮಾರ್ ಅವರ ಪ್ರವಾಸ ರದ್ದಾಗಿದೆ ಎನ್ನಲಾಗಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ನನಗೆ ಹೊಟ್ಟೆ ಸಮಸ್ಯೆ ಆಗಿದೆ. ಡಾಕ್ಟರ್ (Doctor) ಒಂದು 10 ನಿಮಷ ಬರುತ್ತೇನೆ ಎಂದು ಹೇಳಿದ್ದಾರೆ. ಸ್ವಲ್ಪ ಜ್ವರ ಕೂಡ ಬಂದಿದೆ. ಸ್ವಲ್ಪ ನನ್ನನ್ನೂ ಫ್ರೀ ಬಿಟ್ಟರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನನಗೆ ರೆಸ್ಟ್ ಬೇಕು ನನ್ನನ್ನು ಬಿಟ್ಟು ಬಿಡಿ ಎಂದು ಡಿಕೆ ಮನವಿ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನನ್ನನ್ನು ಬಂಡೆ ಅಂತಾ ನೀವು ಕರೆದಿದ್ದೀರಿ. ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನನ್ನ ನೇಣುಗಂಬ ಆದರೂ ಮಾಡಿಕೊಳ್ಳಿ. ಜಲ್ಲಿಜಲ್ಲು, ಚಪ್ಪಡಿ ಆದರೂ ಮಾಡಿಕೊಳ್ಳಿ. ನನ್ನ ಬಳಿ ನಂಬರ್ ಇಲ್ಲ, ಅದಕ್ಕೆ ಐ ಆ್ಯಮ್ ಸಿಂಗಲ್ ಎಂದೆ. ನಾನು ಯಾರನ್ನೂ ದೆಹಲಿಗೆ ಕರೆದುಕೊಂಡು ಹೋಗಲ್ಲ. ನನಗೆ ಯಾರ ಶಾಸಕರ ಬೆಂಬಲವು ಇಲ್ಲ. ನನಗೆ ರೆಸ್ಟ್ ಬೇಕು ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Bhavani Revanna: ಎಲೆಕ್ಷನ್ ಮುಗಿದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಭವಾನಿ ರೇವಣ್ಣ
ಇದಕ್ಕೂ ಮುನ್ನ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರ ಒಂದೊಂದು ಮಾತುಗಳು ಹರಿತವಾದ ಖಡ್ಗದಂತಿತ್ತು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ತಿಲ್ಲ ಅನ್ನೋ ಸಿಟ್ಟು, ಬೇಸರ ಬಂಡೆ ಮನಸ್ಸನ್ನ ನುಚ್ಚು ನೂರು ಮಾಡಿ ಇಂಥಾ ಹೇಳಿಕೆ ಕೊಡುವಂತೆ ಮಾಡಿತ್ತು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ