ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka assembly election) ಇಂದು ಮುಗಿದಿದೆ. ರಾಜ್ಯದ ವಿವಿಧ ಕ್ಷೇತ್ರಗಳ, ವಿವಿಧ ಪಕ್ಷಗಳ ಒಟ್ಟು 2615 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ (ballot box) ಭದ್ರವಾಗಿದೆ. ಮತದಾನ ಮುಗಿಯುತ್ತಿದ್ದಂತೆ ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷಾ ಫಲಿತಾಂಶವೂ (Exit Poll) ಹೊರಬಿದ್ದಿದೆ. 9 ಸರ್ವೆ ಫಲಿತಾಂಶಗಳು ಕಾಂಗ್ರೆಸ್‌ಗೆ (Congress) ಮುನ್ನಡೆ ಅಂತ ಹೇಳುತ್ತಿವೆ. ಇದರಿಂದ ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಎನ್ನುವಂತೆ, ಫಲಿತಾಂಶ ಬರುವ ಮುನ್ನವೇ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ರೇಸ್ (CM race) ಜೋರಾಗಿದೆ!
ಅಲರ್ಟ್ ಆದ ಕಾಂಗ್ರೆಸ್
ಸಮೀಕ್ಷೆಗಳು ಕಾಂಗ್ರೆಸ್‌ಗೆ ಅಧಿಕಾರ ಬರುವ ಸಾಧ್ಯತೆ ಇದೆ ಅಂತ ಹೇಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಣದೀಪ್ ಸುರ್ವೇಜಾಲ ಅವರನ್ನು ಬೆಂಗಳೂರಿಗೆ ಕಳಿಸಿದ್ದಾರೆ.
ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಮುನ್ನಡೆ ಅಂತ ಬಂದಿರೋದ್ರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸುರ್ಜೆವಾಲಗೆ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿಗೆ ಸುರ್ವೆವಾಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಆಗಮನಲಿದ್ದಾರೆ. ಇಬ್ಬರು ನಾಯಕರು ಬೆಂಗಳೂರಿಗೆ ಆಗಮನದ ಬೆನ್ನಲ್ಲೆ ಸಭೆ ಖರ್ಗೆ ನೇತ್ರತ್ವಲ್ಲಿ ಕೈ ಹಿರಿಯ ನಾಯಕರ ಸಭೆ ನಡೆಯಲಿದೆ.
ಕಾಂಗ್ರೆಸ್‌ಗೆ ಸಮೀಕ್ಷೆಗಳಲ್ಲಿ ಮುನ್ನಡೆ ಹಿನ್ನೆಲೆ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಲೆಕ್ಕಾಚಾರ ಆರಂಭವಾಗಿದೆ. ಸಿಎಂ ರೇಸ್ ನಲ್ಲಿ ಇರೋ ಡಿಕೆಶಿ ಹಾಗೂ ಸಿದ್ದರಾಮಯ್ಯ ಹೈ ಅಲರ್ಟ್ ಆಗಿದ್ದಾರೆ. ಫಲಿತಾಂಶದ ಮೊದಲೇ ನಾಯಕರಿಬ್ಬರು ಗೆಲ್ಲುವ ಅಭ್ಯರ್ಥಿಗಳ ಬೆನ್ನು ಬಿದ್ದಿದ್ದಾರೆ.
ಫೋನ್ ಕರೆಗಳಲ್ಲಿ ಬ್ಯುಸಿಯಾದ ನಾಯಕರು!
ಸಮೀಕ್ಷೆ ಫಲಿತಾಂಶದ ಬೆನ್ನತ್ತಿದ ನಾಯಕರು ಗೆಲ್ಲುವ ಸಾಧ್ಯತೆ ಇರೋ ಅಭ್ಯರ್ಥಿಗಳ ಓಲೈಕೆಯಲ್ಲಿ ತೊಡಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಗೆಲ್ಲುವ ಅಭ್ಯರ್ಥಿಗಳಿಗೆ ಕರೆ ಮಾಡಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Karnataka Exit Poll 2023 LIVE Updates: ಎಕ್ಸಿಟ್ ಪೋಲ್ನಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟು ಜನ ಮತ? ಫುಲ್ ಅಪ್ಡೇಟ್ಸ್
ಯಾರ್ಯಾರಿಗೆ ಕರೆ?
ಗೆಲುವಿನ ಸಾಧ್ಯತೆ ಬಗ್ಗೆ ಚರ್ಚೆ ನಡೆಸಿರುವ ಉಭಯ ನಾಯಕರು, 50-50 ಇದ್ದ ಕ್ಷೇತ್ರಗಳ ಅಭ್ಯರ್ಥಿಗಳು, ಟಫ್ ಪೈಟ್ ಇದ್ದ ಕ್ಷೇತ್ರಗಳ ಅಭ್ಯರ್ಥಿಗಳು, ಹೈವೋಲ್ಟೇಜ್ ಕ್ಷೇತ್ರಗಳ ಫಲಿತಾಂಶದ ಅಭ್ಯರ್ಥಿಗಳಿಗೆ ಕರೆ ಮಾಡಿ, ಗೆಲ್ಲುವ ಲೆಕ್ಕಚಾರ ಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ