News18 India World Cup 2019

ರಾಜ್ಯ ರಾಜಕೀಯದಲ್ಲಿ ಆರ್. ಶಂಕರ್ ಹೊಸ ದಾಖಲೆ; ಒಂದೇ ಸರ್ಕಾರದಲ್ಲಿ 2 ಬಾರಿ ಸಚಿವರಾದ ರಾಣೆಬೆನ್ನೂರು ಶಾಸಕ

ಸಚಿವ ಸಂಪುಟ ಸೇರಿದ ರಾಣಿಬೆನ್ನೂರು ಕ್ಷೇತ್ರದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಶಾಸಕ ಆರ್​. ಶಂಕರ್​ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಒಂದೇ ಸರ್ಕಾರದಲ್ಲಿ ಒಂದೇ ವರುಷದಲ್ಲಿ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಶಂಕರ್​ ಹೊಸ ದಾಖಲೆ ಬರೆದಿದ್ದಾರೆ. 

Latha CG | news18
Updated:June 14, 2019, 3:41 PM IST
ರಾಜ್ಯ ರಾಜಕೀಯದಲ್ಲಿ ಆರ್. ಶಂಕರ್ ಹೊಸ ದಾಖಲೆ; ಒಂದೇ ಸರ್ಕಾರದಲ್ಲಿ 2 ಬಾರಿ ಸಚಿವರಾದ ರಾಣೆಬೆನ್ನೂರು ಶಾಸಕ
ನೂತನ ಸಚಿವ ಆರ್.​ ಶಂಕರ್
Latha CG | news18
Updated: June 14, 2019, 3:41 PM IST
ಬೆಂಗಳೂರು(ಜೂನ್ 14): ಇಂದು ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇಬ್ಬರು ಪಕ್ಷೇತರ ಶಾಸಕರು ರಾಜ್ಯ ಸಂಪುಟ ದರ್ಜೆಯಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದಾರೆ. ರಾಣಿಬೆನ್ನೂರು ಕ್ಷೇತ್ರದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಶಾಸಕ ಆರ್​. ಶಂಕರ್ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್​. ನಾಗೇಶ್ ಸಚಿವರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್​ ವಾಲ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಸಚಿವ ಸಂಪುಟ ಸೇರಿದ ರಾಣಿಬೆನ್ನೂರು ಕ್ಷೇತ್ರದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ಶಾಸಕ ಆರ್​. ಶಂಕರ್​ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಒಂದೇ ಸರ್ಕಾರದಲ್ಲಿ ಒಂದೇ ವರುಷದಲ್ಲಿ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಶಂಕರ್​ ಹೊಸ ದಾಖಲೆ ಬರೆದಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವರಾಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಇದೊಂದು ದಾಖಲೆಯಾಗಿದೆ. ಶಂಕರ್​​ ಆರಂಭದಲ್ಲಿ ಸಚಿವರಾಗಿ ಅರಣ್ಯ ಖಾತೆ ನಿಭಾಯಿಸಿ, ಕೆಲ ತಿಂಗಳ ಬಳಿಕ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ಕೆಲವೇ ತಿಂಗಳ ಬಳಿಕ ಮತ್ತೆ ಸಚಿವರಾಗಿ ಶಂಕರ್​ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ಶಂಕರ್​​ ಒಂದೇ ಸಿಎಂ ಸರ್ಕಾರದಲ್ಲಿ ಎರಡನೇ ಬಾರಿ ಸಚಿವರಾಗಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಸಚಿವ ಆರ್.ಶಂಕರ್, "ಕ್ಷೇತ್ರದ ಜನತೆಗೆ ಹೆಚ್ಚಿನ ಕೆಲಸ ಮಾಡಲು ಸರ್ಕಾರ ಶಕ್ತಿ ಕೊಟ್ಟಿದೆ. ಅದರಂತೆ ನಾನು ಕೆಲಸ‌ ಮಾಡುತ್ತೇನೆ. ಒಳ್ಳೆಯ ಖಾತೆ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ. ಅದರಂತೆಯೇ ಯಾವುದೇ ಖಾತೆ ಕೊಟ್ಟರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ," ಎಂದು ಹೇಳಿದರು.

ಇದೇ ವೇಳೆ ಸಚಿವ ಆರ್. ಶಂಕರ್ ಪತ್ನಿ ಧನಲಕ್ಷ್ಮೀ ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿದರು. "ಮತ್ತೊಮ್ಮೆ ಸಚಿವರಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಯಾವ ಖಾತೆ ಸಿಕ್ಕಿದರೂ ಅವರು ಜನರ ಸೇವೆ ಮಾಡಲು ಸಿದ್ಧರಿದ್ದಾರೆ ‌ಹಾಗೂ ಉತ್ತಮ ಕೆಲಸ ಮಾಡುತ್ತಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...