ಸಂಪುಟ ವಿಸ್ತರಣೆ ವಿಳಂಬಕ್ಕೆ ಬಿಸಿ ಪಾಟೀಲ್ ಬೇಸರ‌; ಲಕ್ಷ್ಮಣ್ ಸವದಿ ರಾಜೀನಾಮೆ ಪಡೆಯಲು ಆರ್.ಶಂಕರ್ ಆಗ್ರಹ

ಸಂಪುಟ ವಿಸ್ತರಣೆ ಸಂಬಂಧ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಆರ್ ಶಂಕರ್,  ಇಂದು ಸಿಎಂ ವಿದೇಶ ಪ್ರವಾಸದಿಂದ ವಾಪಸ್​ ಬರುತ್ತಿದ್ದಾರೆ. ಬಂದ ಕೂಡಲೇ ಸಂಪುಟ ವಿಸ್ತರಣೆ ಆಗುತ್ತೆ. ಹಿಂದೆ ಮಂತ್ರಿ ಸ್ಥಾನ ತ್ಯಾಗ ಮಾಡಿ, ಸರ್ಕಾರ ರಚನೆಗೆ ಕಾರಣ ಆಗಿದ್ದೇನೆ.  ಹೀಗಾಗಿ ನನಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ಆರ್.ಶಂಕರ್ ಮತ್ತು ಬಿ.ಸಿ.ಪಾಟೀಲ್.

ಆರ್.ಶಂಕರ್ ಮತ್ತು ಬಿ.ಸಿ.ಪಾಟೀಲ್.

  • Share this:
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಶಾಸಕ ಬಿ.ಸಿ.ಪಾಟೀಲ್ ಬೇಸರ ಹೊರಹಾಕಿದ್ದಾರೆ. ಅಲ್ಲದೇ,  ರಿಜ್ವಾನ್ ಅರ್ಷದ್ ಅವರಿಂದ ತೆರವಾಗಿರುವ ವಿಧಾನ ಪರಿಷತ್​ ಸ್ಥಾನವನ್ನು ತನಗೆ ನೀಡಬೇಕು. ಬೇಕಿದ್ದರೆ ಲಕ್ಷ್ಮಣ್ ಸವದಿಯಿಂದ ಸಿಎಂ ರಾಜೀನಾಮೆ ಪಡೆಯಲಿ ಎಂದು ಅನರ್ಹ ಶಾಸಕ ಆರ್. ಶಂಕರ್​ ಒತ್ತಾಯಿಸಿದ್ದಾರೆ. 

ಶಾಸಕ ಭವನದಲ್ಲಿ ಮಾತನಾಡಿದ ಶಾಸಕ ಬಿಸಿ ಪಾಟೀಲ್, 17 ಜನರಿಗೂ ಅಧಿಕಾರ ಕೊಡುವುದಾಗಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ದಾವೋಸ್​ನಿಂದ ಸಿಎಂ ಬಂದ ನಂತರ ಅವರೆ ಸ್ಪಷ್ಟತೆ ಕೊಡುತ್ತಾರೆ. ತಡವಾಗಿರುವುದರ ಬಗ್ಗೆ ಬೇಸರ ಇದೆ. ಆದಷ್ಟು ಬೇಗ ಹೈಕಮಾಂಡ್ ನಿರ್ಧಾರ ಮಾಡಲಿದೆ ಅಂತ ಭಾವಿಸಿದ್ದೇನೆ. ಸಚಿವ ಸ್ಥಾನ ಸಿಗದ ಬಗ್ಗೆ ನೋವಾಗಿದೆ. ನಮಗಿಂತ ಹೆಚ್ಚು ರಾಜ್ಯದ ಜನತೆಗೆ ನೋವಾಗಿದೆ. 16, 17 ಜನ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ. ಆಡಳಿತ ಚುರುಕು ಮಾಡಬೇಕಿದೆ. ಹೀಗಾಗಿ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಅಮಿತ್ ಶಾ ಅವರ ಜೊತೆ ನೇರವಾಗಿ ಚರ್ಚೆ ಮಾಡಲು ಆಗಲ್ಲ.  ಅದಕ್ಕೆ ಬೇರೆ ರೀತಿಯ ಹಂತ ಇರುತ್ತೆ. ರಾಜ್ಯ ಬಿಜೆಪಿ ಅಧ್ಯಕ್ಷರ ಜೊತೆ ಸಿಎಂ ಯಡಿಯೂರಪ್ಪ ಚರ್ಚೆ ಮಾಡ್ತಾರೆ. ಜೆಪಿ ನಡ್ಡಾ ಅವರು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿ ಅವರಿಗಿದೆ. ಯಡಿಯೂರಪ್ಪ ಅವರು ಬಂದ ತಕ್ಷಣ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮಂಗಳೂರು ಬಾಂಬ್​ ಪ್ರಕರಣ ಸಂಬಂಧ ಎಚ್​.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಹಳ ಬಾಲಿಶವಾಗಿದೆ. ಒಂದು‌ ಬಾಂಬ್ ಘಟನೆಯನ್ನು ಅಣಕು ಪ್ರದರ್ಶನ ಅಂತ ಹೇಳಿದ್ದಾರೆ. ರಾಜಕೀಯಕ್ಕಾಗಿ ಪೊಲೀಸರ ಕಾರ್ಯ ವೈಖರಿಯನ್ನು ಅಳೆಯೋ‌ ಕೆಲಸ ಮಾಡಬಾರದು. ಮಾಜಿ ಪ್ರಧಾನಿಗಳ ಮಕ್ಕಳಾದವರು, ಸಿಎಂ ಆಗಿದ್ದವರು ಜವಾಬ್ದಾರಿಯುತ ಹೇಳಿಕೆ ನೀಡಬೇಕು ಎಂದು ಬಿ.ಸಿ.ಪಾಟೀಲ್ ತಿರುಗೇಟು  ನೀಡಿದರು.

ಸಂಪುಟ ವಿಸ್ತರಣೆಗೆ ಆರ್ ಶಂಕರ್ ಆಗ್ರಹ

ಸಂಪುಟ ವಿಸ್ತರಣೆ ಸಂಬಂಧ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಆರ್ ಶಂಕರ್,  ಇಂದು ಸಿಎಂ ವಿದೇಶ ಪ್ರವಾಸದಿಂದ ವಾಪಸ್​ ಬರುತ್ತಿದ್ದಾರೆ. ಬಂದ ಕೂಡಲೇ ಸಂಪುಟ ವಿಸ್ತರಣೆ ಆಗುತ್ತೆ. ಹಿಂದೆ ಮಂತ್ರಿ ಸ್ಥಾನ ತ್ಯಾಗ ಮಾಡಿ, ಸರ್ಕಾರ ರಚನೆಗೆ ಕಾರಣ ಆಗಿದ್ದೇನೆ.  ಹೀಗಾಗಿ ನನಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ದಲಿತರ ಪರ ದ್ವನಿ ಎತ್ತಿದರೆ ನನ್ನ ವಿರುದ್ಧವೇ ಮೊಕದ್ದಮೆ ದಾಖಲು ಮಾಡ್ತೀರ?; ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿ

ರಿಜ್ವಾನ್ ಅರ್ಷದ್ ಅವರಿಂದ ತೆರವಾಗಿರುವ ವಿಧಾನ ಪರಿಷತ್​ ಸ್ಥಾನವನ್ನು ನನಗೆ ಕೊಡಬೇಕು. ಬೇಕಿದ್ದರೆ ಲಕ್ಷ್ಮಣ್ ಸವದಿಯಿಂದ ಸಿಎಂ ರಾಜೀನಾಮೆ ಪಡೆಯಲಿ. ಅವರಿಂದ ರಾಜೀನಾಮೆ ಪಡೆದು ಮತ್ತೆ ಜೂನ್​ಗೆ ಎಂಎಲ್ಸಿ ಮಾಡಿ, ಮಂತ್ರಿ ಮಾಡಲಿ. ಆದರೆ ಈಗ ಖಾಲಿ ಇರುವ ಸ್ಥಾನವನ್ನು ಮಾತ್ರ ನನಗೆ ಕೊಡಬೇಕು. ಈಗಾಗಲೇ ಈ ಮಾತನ್ನು ರಮೇಶ್ ಜಾರಕಿಹೊಳಿ ಅವರು ಸಿಎಂಗೆ ತಿಳಿಸಿದ್ದಾರೆ. ಸಿಎಂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.  ಸಿಎಂ ಮೇಲೆ ನನಗೆ ನಂಬಿಕೆ ಇದೆ. ಈ ಬಾರಿಯೇ ನನಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ.  ಸಿಎಂ ದಾವೊಸ್​ನಿಂದ ಬಂದ ಕೂಡಲೇ ಅವರನ್ನು ಭೇಟಿ ಮಾಡ್ತೀನಿ. ಜೊತೆಗೆ ನಾವೆಲ್ಲರೂ ಸೇರಿ ಸಭೆ ಮಾಡುತ್ತೇವೆ ಎಂದು ಆರ್. ಶಂಕರ್ ಹೇಳಿದರು.
First published: