ನನ್ನನ್ನೇ ಯಾವ ಜಾತಿ ಎಂದು ಕೇಳಿದ್ದರು; ಅಸ್ಪೃಶ್ಯತೆ ನೋವು ತೋಡಿಕೊಂಡ ಮಾಜಿ ಸಂಸದ ಧ್ರುವನಾರಾಯಣ

ಆ ಸಂದರ್ಭದಲ್ಲಿ ಶಾಲೆಯಲ್ಲಿ ಇದ್ದ ಏಕೈಕ ದಲಿತ ವಿದ್ಯಾರ್ಥಿ ನಾನಾಗಿದ್ದೆ. ಆ ಸಂದರ್ಭದಲ್ಲಿ ನಾನು ಏನು ಉತ್ತರಿಸಲಾಗದೆ ಶಾಲಾ ಕೊಠಡಿಗೆ ಹೋಗಿದ್ದೇ ಎಂದು ನೋವಿನಿಂದ ಹೇಳಿ, ದಲಿತನಾಗಿರುವ ನನಗೆ ಅಸ್ಪೃಶ್ಯತೆ ಅನುಭವ ಆಗಿದೆ. ಬಿಜೆಪಿಯ ನಾಯಕರು ಅಸ್ಪೃಶ್ಯತೆ ಬಗ್ಗೆ ಸುಮ್ಮನೆ ಮಾತನಾಡುತ್ತಾರೆ. ಅವರ್ಯಾರಿಗೂ ಈ ರೀತಿ ಅನುಭವ ಆಗಿಲ್ಲ ಎಂದರು.

news18-kannada
Updated:December 28, 2019, 6:12 PM IST
ನನ್ನನ್ನೇ ಯಾವ ಜಾತಿ ಎಂದು ಕೇಳಿದ್ದರು; ಅಸ್ಪೃಶ್ಯತೆ ನೋವು ತೋಡಿಕೊಂಡ ಮಾಜಿ ಸಂಸದ ಧ್ರುವನಾರಾಯಣ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಆರ್.ಧ್ರುವನಾರಾಯಣ.
  • Share this:
ಮೈಸೂರು: ಅಸ್ಪೃಶ್ಯತೆ ನೋವುಂಡವರಿಗೆ ಮಾತ್ರ ಅದರ ನೋವು ಗೊತ್ತು. ನಾನು ಬಾಲ್ಯದಲ್ಲಿ ಅಸ್ಪೃಶ್ಯತೆಯ ಶೋಷಣೆಗೆ ಒಳಗಾಗಿದ್ದೇ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ನೋವಿನಿಂದ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಾಮರಾಜನಗರದ ಮಾಜಿ ಸಂಸದರಾಗಿರುವ ಆರ್.ಧ್ರುವನಾರಾಯಣ ಅವರು, ನಾನು ಸಹ ಅಸ್ಪೃಶ್ಯತೆಯ ಶೋಷಣೆಗೆ ಒಳಗಾಗಿದ್ದೇನೆ. ಅಸ್ಪೃಶ್ಯತೆ ನೋವು ಹೇಗಿರುತ್ತೆ ಅಂತ ನನಗೆ ಗೊತ್ತಿದೆ ಎಂದು ಹೇಳುವ ಮೂಲ ಅಸ್ಪೃಶ್ಯತೆ ಬಗ್ಗೆ ಬಾಲ್ಯದ ನೋವು ಬಿಚ್ಚಿಟ್ಟರು.

ನಾನು ಸೆಂಟ್‌ ಫಿಲೋಮಿನ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾಗ ಅಸಪೃಶ್ಯತೆ ನೋವಿಗೆ ಒಳಗಾಗಿದ್ದೆ.  5ನೇ ತರಗತಿ ಓದುತ್ತಿದ್ದ ನಾನು ಹಾಸ್ಟೆಲ್‌ಗೆ ಹೋದ ಮೊದಲ ದಿನವೇ ನನ್ನ ಜಾತಿ ಕೇಳಿದ್ದರು. ಹಾಸ್ಟೆಲ್‌ಕೋಣೆಯಲ್ಲಿ ಬ್ಯಾಗ್ ಇಟ್ಟು ಬರುತ್ತಿದ್ದ ನನಗೆ ವಿದ್ಯಾರ್ಥಿಯೊಬ್ಬ ನೀನು ಯಾವ ಜಾತಿಯವನು ಎಂದು ನೇರವಾಗಿ ಕೇಳಿದ್ದ. ಆ ಸಂದರ್ಭದಲ್ಲಿ ಶಾಲೆಯಲ್ಲಿ ಇದ್ದ ಏಕೈಕ ದಲಿತ ವಿದ್ಯಾರ್ಥಿ ನಾನಾಗಿದ್ದೆ. ಆ ಸಂದರ್ಭದಲ್ಲಿ ನಾನು ಏನು ಉತ್ತರಿಸಲಾಗದೆ ಶಾಲಾ ಕೊಠಡಿಗೆ ಹೋಗಿದ್ದೇ ಎಂದು ನೋವಿನಿಂದ ಹೇಳಿ, ದಲಿತನಾಗಿರುವ ನನಗೆ ಅಸ್ಪೃಶ್ಯತೆ ಅನುಭವ ಆಗಿದೆ. ಬಿಜೆಪಿಯ ನಾಯಕರು ಅಸ್ಪೃಶ್ಯತೆ ಬಗ್ಗೆ ಸುಮ್ಮನೆ ಮಾತನಾಡುತ್ತಾರೆ. ಅವರ್ಯಾರಿಗೂ ಈ ರೀತಿ ಅನುಭವ ಆಗಿಲ್ಲ ಎಂದರು.

ಬಿಎಸ್‌ಸಿ ಅಗ್ರಿಕಲ್ಚರ್‌ ಪದವೀಧರರಾಗಿರುವ ಮಾಜಿ ಸಂಸದ ಆರ್‌.ಧ್ರುವನಾರಾಯಣ  ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದವರು. ದಲಿತ ಮೀಸಲಾತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ನಿಷ್ಠಾವಂತ ಸಂಸದ ಎಂದೇ ಖ್ಯಾತಿಗಳಿಸಿದ್ದ ಧ್ರುವನಾರಾಯಣ 2019ರ ಲೋಕಸಭೆಯಲ್ಲಿ ತನ್ನ ರಾಜಕೀಯ ಗುರುಗಳಾದ ವಿ. ಶ್ರೀನಿವಾಸ್‌ಪ್ರಸಾದ್‌ ವಿರುದ್ದ ಪರಾಭವಗೊಂಡಿದ್ದರು. ದಲಿತ ರಾಜಕೀಯ ನಾಯಕರ ಪಟ್ಟಿಯಲ್ಲೂ ಮುಂಚೂಣಿಯಲ್ಲಿರುವ ಧ್ರುವನಾರಾಯಣ ಅವರು 5 ರಿಂದ 10 ನೇ ತರಗತಿಯನ್ನು ಮೈಸೂರಿನ ಸೆಂಟ್ ಫಿಲೋಮಿನ ಶಾಲೆನಲ್ಲಿ ಓದಿದ್ದಾರೆ. ವಸತಿ ಶಾಲೆಯಾಗಿದ್ದರಿಂದ ಹಾಸ್ಟೆಲ್‌ನಲ್ಲಿ ವಾಸವಿದ್ದ ಅವರು ಹಾಸ್ಟೆಲ್‌ಗೆ ಕಾಲಿಟ್ಟ ಮೊದಲ ದಿನವೇ ಅಸ್ಪೃಶ್ಯತೆಯ ಅನುಭವ ಆಗಿತ್ತಂತೆ.  ದಾಖಲಾತಿ ಪಡೆದು ತನಗೆ ನಿಯೋಜಿಸಿದ್ದ ಕೋಣೆಯಲ್ಲಿ ಲಗೇಜುಗಳನ್ನು ಇಟ್ಟು ಕೋಣೆಯಿಂದ ಹೊರಬರುತ್ತಿದ್ದಂತೆ ಹಾಸ್ಟೆಲ್‌ನ ಸಹ ವಿದ್ಯಾರ್ಥಿ ಏಕಾಏಕಿ ನಿನ್ನ ಜಾತಿ ಯಾವುದು ಎಂದು ಕೇಳಿದ್ದನಂತೆ. ಆ ಕ್ಷಣ ಅವಾಕ್ಕಾಗಿ ನಿಂತು ಏನನ್ನು ಪ್ರತಿಕ್ರಿಯಿಸಲಾಗದೆ ಹೊರಟು ಹೋದ  ಧ್ರುವನಾರಾಯಣ ಇಂದು ದೊಡ್ಡ ರಾಜಕೀಯ ನಾಯಕನಾಗಿ ಬೆಳೆದು ನಿಂತಿದ್ದಾರೆ. ಆದರೆ ದಲಿತನಾಗಿ ಹುಟ್ಟಿದ್ದಕ್ಕೆ ನಾನು ಸಹ ಶೋಷಣೆಗೆ ಒಳಗಾಗಿದ್ದೆ ಅನ್ನೋದು ಅವರ ನೋವಿನ ಮಾತುಗಳು.

ಇದನ್ನು ಓದಿ: ಕ್ರೈಸ್ತರ ಭಾವನೆಗಳಿಗೆ ಬೆಲೆ ಕೊಡದ ನೀವ್ಯಾಕೆ ಮಕ್ಕಳನ್ನು ಮಿಷನರಿ ಶಾಲೆಗಳಲ್ಲಿ ಓದಿಸುತ್ತೀರಿ?; ಬಿಜೆಪಿಗರಿಗೆ ಮಾಜಿ ಸಂಸದ ಪ್ರಶ್ನೆ

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಅಸ್ಪೃಶ್ಯತೆಯ ಅನುಭವ ಆಗಿತ್ತು. ಹಲವು ಬಾರಿ ಸಿದ್ದರಾಮಯ್ಯ ತನ್ನ ಭಾಷಣದಲ್ಲೇ ಈ ಮಾತುಗಳನ್ನು ವ್ಯಕ್ತಪಡಿಸಿದ್ದರು. ಪಕ್ಕದ ಊರಿಗೆ ಚಪ್ಪಲಿ ಹಾಕಿಕೊಂಡು ಹೋಗಿದ್ದಾಗ ತನ್ನನ್ನು ಚಪ್ಪಲಿ ಬಿಟ್ಟು ಊರಿನ ಒಳಗೆ ಬಾ ಎಂದಿದ್ದ ಊರಿನ ಸ್ಥಳೀಯರ ಮಾತು ಧಿಕ್ಕರಿಸಿ ಆ ಊರಿಗೆ ಹೋಗದೆ ವಾಪಸ್ಸಾಗಿದ್ದ ಘಟನೆಯನ್ನು ಸಾರ್ವಜನಿಕ ಭಾಷಣದಲ್ಲಿ ಜನರಿಗೆ ತಿಳಿಸಿದ್ದರು. ಅಂದು ನಾವು ಕೀಳು ಜಾತಿಯವರು ಎಂಬ ಕಾರಣಕ್ಕೆ ನಮ್ಮನ್ನು ದೂರ ಇಡುತ್ತಿದ್ದ ಜನರ ಮುಂದೆ ನಾವು ಬೆಳೆದು ನಿಂತೆವು. ಅದಕ್ಕಾಗಿ ನಾವು ಯಾವಾಗಲೂ ಶೋಷಿತರ ಪರ ಇರ್ತೇವೆ ಎಂದು ಸಿದ್ದರಾಮಯ್ಯ ತಮ್ಮ ಭಾಷಣಗಳಲ್ಲಿ ಹೇಳುತ್ತಾರೆ.
First published:December 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ