Siddaramaiah ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ - ಮಾಜಿ ಸಿಎಂ ವಿರುದ್ಧ ಆರ್​. ಅಶೋಕ್ ವಾಗ್ದಾಳಿ

Karnataka Politics: ಇನ್ನು ಮೊನ್ನೆ ಇಬ್ರಾಹಿಂ ಅವರು ಕಾಂಗ್ರೆಸ್​ ತೊರೆದಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ಮಾಧ್ಯಮದ ಮುಂದೆ ಬಂದು ಮಾತನಾಡಲು ಕಾಂಪಿಟೇಶನ್ ನಡೆಸ್ತಿದ್ದಾರೆ. ಶಿವಕುಮಾರ್ ಪಾದಯಾತ್ರೆ ಮಾಡ್ತಿದ್ರೆ ಇತ್ತ ಸಿದ್ದರಾಮಯ್ಯನವರು ಶಾಸಕರನ್ನ ಗುಂಪುಕಟ್ಟಿಕೊಂಡು ಸಭೆ ಮಾಡುತ್ತಿದ್ದಾರೆ. ಇಬ್ಬರು ಪ್ರಚಾರವನ್ನ ಕಾಂಪಿಟೇಶನ್ ರೀತಿ ಮಾಡುತ್ತಿದ್ದಾರೆ ಎಂದು ಅಶೋಕ್​ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

 ಆರ್ ಅಶೋಕ್

ಆರ್ ಅಶೋಕ್

  • Share this:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಎಲ್ಲ ವಿಚಾರಕ್ಕೂ ರಿಯಾಕ್ಷನ್ (Reaction) ಕೊಡಬೇಕು ಎಂಬ ಚಟ ಇದೆ, ಇಲ್ಲಿದ್ದರೆ ಅವರಿಗೆ ಸಮಾಧಾನ ವಿರಲ್ಲ. ಸರ್ಕಾರ ಏನೂ ಸಾಧನೆ ಮಾಡಿಲ್ಲ ಅಂತಾರೆ, ಅವರಿಗೆ  ನಾನು ಮಾಡಿದ್ದು ಮಾತ್ರ ಸರಿ ಎಂಬ ಭಾವನೆ ಇದೆ. ಅಲ್ಲದೇ, ಅವರಿಗೆ ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆಂಬ ಅಹಂ ಇದೆ. ಅವರು ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ ಎಂದು ಸಿದ್ಧರಾಮಯ್ಯ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ (R. Ashok)  ವಾಗ್ಧಾಳಿ ನಡೆಸಿದ್ದಾರೆ.

ಕೋವಿಡ್​ ಉನ್ನತ ಮಟ್ಟದ ಸಭೆಯ ನಂತರ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಅಶೋಕ್, ಸಿಕ್ಕ ಆರೇ ತಿಂಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಿದ್ದಾರೆ‌. ಸಿದ್ದರಾಮಯ್ಯ ಐದು ವರ್ಷ ಆಡಳಿತ ಮಾಡಿದ್ದರೂ ಸಹ ಏನು ಕೆಲಸ ಮಾಡಿಲ್ಲ. ಹೀಗಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಅನ್ನು ಜನ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಶೋ ನಡೆಯುತ್ತಿದೆ‌. ಅವರಿಬ್ಬರ ನಡುವೆ ಒಳಗೊಳಗೆ ತಿಕ್ಕಾಟ ನಡೆಯುತ್ತಿದೆ. ಹೋಟೆಲ್‌ ಮುಂದೆ ಟುಡೇ ಸ್ಪೆಷಲ್‌ ಬೋರ್ಡ್‌ ಇರುತ್ತೆ. ಹಾಗೆಯೇ ಇಬ್ಬರ ನಡುವೆ ಟು ಡೇ ಸ್ಪೆಷಲ್‌ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಅಶೋಕ್‌ ಲೇವಡಿ ಮಾಡಿದ್ದಾರೆ.

ಸಿದ್ಧರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಹಾಗಾಗಿಯೇ ಅವರು ಕೇವಲ 78 ಸ್ಥಾನಗಳನ್ನು ಗಳಿಸಿದ್ರು, ನಂತರ ಸಮ್ಮಿಶ್ರ ಸರ್ಕಾರ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಹದಿನೇಳು ಜನ ಕಾಂಗ್ರೆಸ್ ಬಿಟ್ಟು ಬಂದ್ರು. ಕಾಂಗ್ರೆಸ್ ಇದರ ಬಗ್ಗೆ ಸತ್ಯ ಶೋಧನ ಸಮಿತಿ ಮಾಡಬೇಕಿತ್ತು. ಸಮಿತಿ ಮಾಡಿ ಯಾಕೆ ಬಿಟ್ಟು ಬಂದ್ರು ಎಂದು ತಿಳಿಯಬೇಕಿತ್ತು ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಮೊನ್ನೆ ಇಬ್ರಾಹಿಂ ಅವರು ಕಾಂಗ್ರೆಸ್​ ತೊರೆದಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ಮಾಧ್ಯಮದ ಮುಂದೆ ಬಂದು ಮಾತನಾಡಲು ಕಾಂಪಿಟೇಶನ್ ನಡೆಸ್ತಿದ್ದಾರೆ. ಶಿವಕುಮಾರ್ ಪಾದಯಾತ್ರೆ ಮಾಡ್ತಿದ್ರೆ ಇತ್ತ ಸಿದ್ದರಾಮಯ್ಯನವರು ಶಾಸಕರನ್ನ ಗುಂಪುಕಟ್ಟಿಕೊಂಡು ಸಭೆ ಮಾಡುತ್ತಿದ್ದಾರೆ. ಇಬ್ಬರು ಪ್ರಚಾರವನ್ನ ಕಾಂಪಿಟೇಶನ್ ರೀತಿ ಮಾಡುತ್ತಿದ್ದಾರೆ ಎಂದು ಅಶೋಕ್​ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಬಣ್ಣ ಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳ್ತಾರೆ: Bommai ಸರ್ಕಾರದ 6 ತಿಂಗಳ ಆಡಳಿತಕ್ಕೆ Siddaramaiah ವ್ಯಂಗ್ಯ

ಸರ್ಕಾರದ ಸಾಧನೆ ಶೂನ್ಯ ಎಂದಿದ್ದ  ಸಿದ್ದರಾಮಯ್ಯ

ಮುಖ್ಯಮಂತ್ರಿಗಳು ಸಾಧನೆಯ ಪುಸ್ತಕವನ್ನ ಬಿಡುಗಡೆ ಮಾಡಿದ್ದಾರೆ. ಸಾಧನೆಯ ಬಗ್ಗೆ ಪುಸ್ತಕದಲ್ಲಿ ಇರಬೇಕಲ್ಲ. ಸಾಧನೆ ಬಿಟ್ಟು ಭರವಸೆಗಳನ್ನ ತೋರಿಸಿದ್ದಾರೆ. 6,300 ಕೋಟಿ ರೂಪಾಯಿ ನೀರಾವರಿಗೆ ಖರ್ಚು ಮಾಡಿದ್ದೇವೆ ಎಂದಿದ್ದಾರೆ. ಇನ್ನು 1 ಲಕ್ಷ ಕೋಟಿ ಖರ್ಚು ಮಾಡೋದಾಗಿ ಹೇಳಿದ್ದಾರೆ. ಪ್ರತಿ ವರ್ಷ 30 ಸಾವಿರ ಕೋಟಿ ಖರ್ಚು ಮಾಡಬೇಕು. ಆದ್ರೆ ಸರ್ಕಾರ ಕೇವಲ 6300 ಕೋಟಿ ಖರ್ಚು ಮಾಡಿದೆ. ಈ ಹಿಂದೆ ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಸೇವಾಕೇಂದ್ರ ಆರಂಭ ಮಾಡಿದ್ದು, ಅದರ ಹೆಸರು ಬದಲಾಯಿಸಿರುವ ಬೊಮ್ಮಾಯಿ ಸರ್ಕಾರ ಗ್ರಾಮ-1 ಮಾಡಿದ್ದಾರೆ. ಇದೇನಾ ಇವರ ಸಾಧನೆನಾ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರೂ. ಕೊಡ್ತೀವಿ ಎಂದು ಹೇಳಿದ್ದರು. ಆದರೆ ಕೊಟ್ಟಿದ್ದು ಒಂದು ಸಾವಿರ ಕೋಟಿ. ಈ ವರ್ಷ ಒಂದೇ ಒಂದು ರೂಪಾಯಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಿಡುಗಡೆಯಾಗಿಲ್ಲ. ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟಿದ್ದು ಇವರ ಸಾಧನೆ. ಎಲ್ ಕೆ ಅಡ್ವಾಣಿ ಅವರು 371 ಜೆ ಕೊಡಲು ಎಸ್.ಎಂ.ಕೃಷ್ಣ ಮನವಿ ಮಾಡಿದರೂ ನೀಡಿರಲಿಲ್ಲ. ಈಗ 371 ಜೆ ಬಗ್ಗೆ ಮತನಾಡುತ್ತಾರೆ. ಇವರಿಗೆ ಕಲ್ಯಾಣಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ ಎಂದು ಬೊಮ್ಮಾಯಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದರು.

ಬಣ್ಣ ಬಣ್ಣದ ಜಾಹೀರಾತು ಕೊಟ್ಟು ಸುಳ್ಳು ಹೇಳ್ತಾರೆ

ಬಣ್ಣ ಬಣ್ಣದ ಜಾಹಿರಾತು ಕೊಟ್ಟು ಸುಳ್ಳು ಹೇಳ್ತಾರೆ.  ಎರಡೂವರೆ ವರ್ಷದಲ್ಲಿ ಏನೇನು ಮಾಡಿದ್ದಾರೆ. ಇದರ ಬಗ್ಗೆ ಅವರು ಹೇಳಬೇಕಿತ್ತು, ಹೇಳಿಲ್ಲ. ಕೋವಿಡ್ ಬಗ್ಗೆ ಹೇಳಿಕೆ ಮೇಲೆ ಹೇಳಿಕೆ ಕೊಡ್ತಾರೆ. ಎರಡನೇ ಅಲೆಯಲ್ಲಿ ಏನು ಕೊಟ್ರು ಎಂದು ಪ್ರಶ್ನೆ ಮಾಡಿದರು. ವೆಂಟಿಲೇಟರ್, ಆಕ್ಸಿಜನ್, ಮೆಡಿಸಿನ್ ಯಾವುದೂ ಕೊಡಲಿಲ್ಲ. ವೆಂಟಿಲೇಟರ್ ನೋಡಿಕೊಳ್ಳುವವರಿಲ್ಲ. ಖರೀದಿ ಮಾಡಿದ ವೆಂಟಿಲೇಟರ್ ಧೂಳು ಹಿಡಿದಿವೆ. ಮೂರೂವರೆ ಲಕ್ಷ ಜನ ಕೋವಿಡ್ ನಿಂದ ಸಾವನ್ನಪ್ಪಿದರು. ಇವರು ಸತ್ತವರ ಸಂಖ್ಯೆ ಹೇಳಿದ್ದು 38 ಸಾವಿರ ಮಾತ್ರ. ಇದೊಂದು ಸುಳ್ಳಿನ ಸರ್ಕಾರ ಎಂದು ಕಿಡಿಕಾರಿದರು.

ಇದನ್ನೂ ಓದಿ: ಜ.31ರಿಂದ ನೈಟ್​ ಕರ್ಫ್ಯೂ ರದ್ದು, ಅಂದಿನಿಂದಲೇ ಶಾಲೆಗಳೂ ಆರಂಭ

ಒಂದು ಕಡೆ ಕೋವಿಡ್ ಅಂತಾರೆ. ಮತ್ತೊಂದು‌ ಕಡೆ ಬಣ್ಣ ಬಣ್ಣದ ಜಾಹೀರಾತು ನೀಡಿದ್ದಾರೆ. ಕೋವಿಡ್ ಬಗ್ಗೆ ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತದೆ. ಎರಡನೇ ಅಲೆ ಬಂತು ಎಷ್ಟು ಜನ ಸತ್ತರು. ಆಕ್ಸಿಜೆನ್, ವೆಂಟಿಲೇಟರ್, ಆಂಬ್ಯುಲೆನ್ಸ್ ಕೊಡೋಕ್ಕೆ ಆಗಿಲ್ಲ. ಕೇಂದ್ರ 50 ಸಾವಿರ, ರಾಜ್ಯ ಸರ್ಕಾರ 1 ಲಕ್ಷ ಕೊಡ್ತೀವಿ ಅಂತ ಹೇಳಿದ್ದರು. ಬಿಪಿಎಲ್ ಕಾರ್ಡ್ ಇದ್ದವರಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿದರು. ಆದರೆ ಯಾರಿಗೂ ಸರಿಯಾಗಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
Published by:Sandhya M
First published: