ಗಡಿವಿವಾದ ಕೆದಕಿದ ಮಹಾರಾಷ್ಟ್ರ ಸರ್ಕಾರ ವಿರುದ್ಧ ಅಶೋಕ್, ಶೆಟ್ಟರ್, ರಾಮುಲು ಗುಡುಗು

ಗಡಿ ವಿವಾದವನ್ನ ಶಿವಸೇನೆ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಈಗಾಗಲೇ ಮಹಾಜನ್ ವರದಿ ಅಂತಿಮವಾಗಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದವರು ಪ್ರಚೋದನೆ ಮಾಡುವುದು ಸರಿಯಲ್ಲ. ಬೇಕಾದರೆ ಕಾನೂನು ಹೋರಾಟ ಮಾಡಲಿ. ಅದು ಬಿಟ್ಟು ಸಿಎಂ ಪ್ರತಿಕೃತಿ ದಹಿಸುವುದು ಸರಿಯಲ್ಲ ಎಂದು ಶೆಟ್ಟರ್ ಟೀಕಿಸಿದ್ದಾರೆ.

news18
Updated:December 30, 2019, 1:50 PM IST
ಗಡಿವಿವಾದ ಕೆದಕಿದ ಮಹಾರಾಷ್ಟ್ರ ಸರ್ಕಾರ ವಿರುದ್ಧ ಅಶೋಕ್, ಶೆಟ್ಟರ್, ರಾಮುಲು ಗುಡುಗು
ಸಚಿವ ಜಗದೀಶ್ ಶೆಟ್ಟರ್
  • News18
  • Last Updated: December 30, 2019, 1:50 PM IST
  • Share this:
ಬೆಂಗಳೂರು(ಡಿ. 30): ಬೆಳಗಾವಿ ಮತ್ತು ಕಾರವಾರ ಪ್ರದೇಶಗಳು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಭಾಗ ಎಂದು ಕರೆದಿರುವ ಮಹಾರಾಷ್ಟ್ರ ರಾಜಕೀಯ ನಾಯಕರ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿಟಿ ರವಿ ಈಗಾಗಲೇ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇತರ ಸಚಿವರಾದ ಆರ್. ಅಶೋಕ್, ಜಗದೀಶ್ ಶೆಟ್ಟರ್, ಶ್ರೀರಾಮುಲು ಮೊದಲಾದವರು ಇದಕ್ಕೆ ಧ್ವನಿಗೂಡಿಸಿದ್ದಾರೆ.

ಮಹಾರಾಷ್ಟ್ರ ತಗಾದೆ ತೆಗೆಯುವುದು ಹೊಸದೇನಲ್ಲ. ಹೊಸ ಸರ್ಕಾರ ಬಂದಾಗ ಇಂಥ ಚೇಷ್ಟೆ ಮಾಡೋದು ರೂಢಿಸಿಕೊಂಡಿದ್ಧಾರೆ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ರಾಜಕೀಯಕ್ಕೆ ಬಳಸಿಕೊಂಡು ಬರುತ್ತಿದೆ. ನಮ್ಮ ರಾಜ್ಯವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಕರ್ನಾಟಕದ ಒಂದಿಂಚೂ ಜಾಗ ಬಿಡುವುದಿಲ್ಲ: ಸಿಎಂ ಯಡಿಯೂರಪ್ಪ

ಶ್ರೀರಾಮುಲು ಎಚ್ಚರಿಕೆ:

ಕೊಲ್ಲಾಪುರದಲ್ಲಿ ಬಿಎಸ್​ವೈ ಪ್ರತಿಕೃತಿ ಮತ್ತು ಕನ್ನಡ ಬಾವುಟ ದಹಿಸಿದ ಶಿವಸೇನಾ ಬೆಂಬಲಿಗರ ಕೃತ್ಯವನ್ನು ಸಚಿವ ಶ್ರೀರಾಮುಲು ಬಲವಾಗಿ ಖಂಡಿಸಿದ್ದಾರೆ.

ಉದ್ಧವ್ ಠಾಕ್ರೆ ಸಿಎಂ ಆದ ನಂತರ ಪುಂಡಾಟ ನಡೆದಿದೆ. ನಮ್ಮ ಸರ್ಕಾರ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಈಗಾಗಲೇ ನಿರಂತರ ಹೋರಾಟ ನಡೆದಿದೆ. ಮುಂದೆಯೂ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ರಾಮುಲು ತಿಳಿಸಿದ್ಧಾರೆ.

ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಗಡಿವಿವಾದದಲ್ಲಿ ಕರ್ನಾಟಕ ವಿರುದ್ಧ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಈ ವಿಚಾರವನ್ನೂ ನಾವು ಗಮನಿಸಿದ್ದೇವೆ. ಕೇಂದ್ರದ ನಾಯಕರು ಅತ್ತ ಕಣ್ಣಿಟ್ಟಿದ್ಧಾರೆ ಎಂದು ವಿಧಾನಸೌಧದಲ್ಲಿ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.ಇದನ್ನೂ ಓದಿ: ಕನ್ನಡಿಗರ ಅಸ್ಮಿತೆ ಬಗ್ಗೆ ಕೆಣಕಿದರೆ ಸುಮ್ಮನಿರೊಲ್ಲ: ಶಿವಸೇನೆ, ಫಡ್ನವಿಸ್​ಗೆ ಸಿ.ಟಿ. ರವಿ ಎಚ್ಚರಿಕೆ

ಶೆಟ್ಟರ್ ಆಕ್ರೋಶ:

ಉದ್ಧವ್ ಸಿಎಂ ಆದ ನಂತರ ಗಡಿಗಲಾಟೆ ಆಗುತ್ತಿದೆ ಎಂಬ ಶ್ರೀರಾಮುಲು ಆರೋಪಕ್ಕೆ ಸಚಿವ ಜಗದೀಶ್ ಶೆಟ್ಟರ್ ಕೂಡ ಧ್ವನಿಗೂಡಿಸಿದ್ಧಾರೆ. ಗಡಿ ವಿವಾದವನ್ನ ಶಿವಸೇನೆ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಈಗಾಗಲೇ ಮಹಾಜನ್ ವರದಿ ಅಂತಿಮವಾಗಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದವರು ಪ್ರಚೋದನೆ ಮಾಡುವುದು ಸರಿಯಲ್ಲ. ಬೇಕಾದರೆ ಕಾನೂನು ಹೋರಾಟ ಮಾಡಲಿ. ಅದು ಬಿಟ್ಟು ಸಿಎಂ ಪ್ರತಿಕೃತಿ ದಹಿಸುವುದು ಸರಿಯಲ್ಲ ಎಂದು ಶೆಟ್ಟರ್ ಟೀಕಿಸಿದ್ದಾರೆ.

ಶಿವಸೇನಾ ಜೊತೆ ಕಾಂಗ್ರೆಸ್ ನಿಂತಿದೆ. ಈಗ ರಾಜ್ಯದ ಕಾಂಗ್ರೆಸ್ ನಾಯಕರು ಈ ಬಗ್ಗೆ ಹೇಳಬೇಕು. ಗಡಿ ತಂಟೆ ಪ್ರಚೋದನೆಗೆ ಬೆಂಬಲ ನೀಡಿದ್ದು ಯಾಕೆ? ಈ ಪುಂಡಾಡಿಕೆಯನ್ನು ನೀವು ನಿಲ್ಲಿಸಬೇಕು ಎಂದು ಕಾಂಗ್ರೆಸ್​ನವರಿಗೆ ಶೆಟ್ಟರ್ ಸವಾಲು ಹಾಕಿದ್ದಾರೆ.

ಬೆಳಗಾವಿಯು ಕರ್ನಾಟಕದ ಭಾಗವಾಗಿದೆ. ಇಲ್ಲಿ ಮರಾಠಿಗರು ಮತ್ತು ಕನ್ನಡಿಗರು ಸಹೋದರತ್ವದಿಂದ ಬದುಕುತ್ತಿದ್ದಾರೆ. ಅವರನ್ನು ಪ್ರಚೋದಿಸುವುದು ಸರಿಯಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ