• Home
  • »
  • News
  • »
  • state
  • »
  • Congress Tweet: ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಆರ್. ಅಶೋಕ್ ಕೈ! ಸಚಿವರ ಪೋಸ್​ಗೆ​ ಕಾಂಗ್ರೆಸ್ ಕಿಡಿಕಿಡಿ

Congress Tweet: ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಆರ್. ಅಶೋಕ್ ಕೈ! ಸಚಿವರ ಪೋಸ್​ಗೆ​ ಕಾಂಗ್ರೆಸ್ ಕಿಡಿಕಿಡಿ

ನಿರ್ಮಲಾನಂದನಾಥ ಸ್ವಾಮೀಜಿ ಮೇಲೆ ಕೈ ಹಾಕಿ ಪೋಸ್​

ನಿರ್ಮಲಾನಂದನಾಥ ಸ್ವಾಮೀಜಿ ಮೇಲೆ ಕೈ ಹಾಕಿ ಪೋಸ್​

ಕೆಂಪೇಗೌಡರ ಪ್ರತಿಮೆ ಅನಾವರಣದ ಬಳಿಕ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಕಂದಾಯ ಸಚಿವ ಆರ್. ಅಶೋಕ ಪೋಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್​ ಟ್ವೀಟ್ ಮಾಡಿದೆ.

  • News18 Kannada
  • Last Updated :
  • Karnataka, India
  • Share this:

ಕೆಂಪೇಗೌಡರ ಪ್ರತಿಮೆ (Kempegowda Statue) ಅನಾವರಣ ಸಮಾರಂಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ  ಸ್ವಾಮೀಜಿಗಳಿಗೆ (Nirmalanandanatha Swamiji) ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ (Congress) ಆರೋಪ ಮಾಡಿದೆ.  ಸಚಿವ ಆರ್ ಅಶೋಕ್ (Minister R Ashok)​ ವಿರುದ್ಧ ಟ್ವೀಟ್​ ಮೂಲಕ ಕಾಂಗ್ರೆಸ್ ಕಿಡಿಕಾರಿದೆ. ಪುತ್ಥಳಿ ಅನಾವರಣದ ಬಳಿಕ ಫೋಟೋ ತೆಗೆಯುವ  ಸಮಯದಲ್ಲಿ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಆರ್ ಅಶೋಕ್​ ಪೋಸ್ ಕೊಟ್ಟಿದ್ದಾರೆ.  ಇದು ಒಕ್ಕಲಿಗರ ಸ್ವಾಮೀಜಿಗೆ  ಮಾಡಿದ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿದೆ.  


ಆರ್​ ಅಶೋಕ್​ ವಿರುದ್ಧ ಕಾಂಗ್ರೆಸ್​ ಕಿಡಿ


ಕೆಂಪೇಗೌಡರ ಪ್ರತಿಮೆ ಅನಾವರಣದ ಬಳಿಕ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಹಾಕಿ ಕಂದಾಯ ಸಚಿವ ಆರ್. ಅಶೋಕ ಪೋಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್​ ಟ್ವೀಟ್ ಮಾಡಿದೆ.






ಆರ್. ಅಶೋಕ ನಡೆಗೆ ಕಾಂಗ್ರೆಸ್ ವಿರೋಧ


ಸಚಿವ ಆರ್.ಅಶೋಕ ನಡೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವ ಘನತೆ ಇರುತ್ತೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್.ಅಶೋಕ್​​ ಅವರಿಗೆ ಸದರ ಎನಿಸಿದ್ದಾರೆಯೇ? ಶ್ರೀಗಳ ಮೇಲೆ ಕೈ ಹಾಕಿದ ಹಾಗೇ ಪ್ರಧಾನಿ ಮೋದಿ ಹೆಗಲ ಮೇಲೆ ಕೈ ಹಾಕಿವಷ್ಟು ಧೈರ್ಯವಿದೆಯೇ? ಧರ್ಮ, ಸಂಸ್ಕೃತಿ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ಸಿಎಂ ಫೋಟೋ ಬಗ್ಗೆಯೂ ಸಿಎಂ ವ್ಯಂಗ್ಯ


ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಬಗ್ಗೆ ಕೂಡ ಕಾಂಗ್ರೆಸ್​ ವ್ಯಂಗ್ಯವಾಡಿದೆ. ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲು ಹರಸಾಹಸಪಡಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಪಕ್ಕ ಸ್ವತಂತ್ರವಾಗಿ ನಿಲ್ಲಲೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇನ್ನು ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದ್ದಾರೆ.



ಇದನ್ನೂ ಓದಿ: Satish Jarkiholi: ಸಂಭಾಜಿಗೆ ಸತೀಶ್ ಜಾರಕಿಹೊಳಿ ಅವಮಾನ; ಮತ್ತೆ ವಿವಾದದ ಸುಳಿಯಲ್ಲಿ ಕೈ ನಾಯಕ!


ಈ ವೇಳೆ ಸರಣಿ ಟ್ವೀಟ್​ ಮಾಡಿದ ರಾಜ್ಯ ಕಾಂಗ್ರೆಸ್  ಈ ಹಿಂದೆ ತಮ್ಮ ಭೇಟಿ ವೇಳೆ ರಸ್ತೆಗಳಿಗೆ ತೇಪೆ ಹಾಕಲಾಗಿತ್ತು. ಬೆಂಗಳೂರು, ಮಂಗಳೂರು ರಸ್ತೆಗಳಿಗೆ ತೇಪೆ ಹಾಕಲಾಗಿತ್ತು. ರಸ್ತೆಗಳಿಗೆ ಹಾಕಿದ್ದ ತೇಪೆ ನಾಲ್ಕೇ ದಿನಕ್ಕೆ ಕಿತ್ತು ಹೋಗಿದ್ದವು. ತಮ್ಮ ಕಚೇರಿ ಕೇಳಿದ್ದ ವರದಿ ತಲುಪಿತೇ?”, ಎಂದು ಪ್ರಶ್ನೆ ಮಾಡಿದೆ.

Published by:ಪಾವನ ಎಚ್ ಎಸ್
First published: