R Ashok: ಡಿಸಿಎಂ ಪಟ್ಟ ಸಾಧ್ಯತೆ: ಹೈ ಕಮಾಂಡ್​ ಭೇಟಿಗೆ ಮುಂದಾದ ಆರ್​ ಅಶೋಕ್​

ಇನ್ನೂ ಅಶೋಕ್​ಗೆ  ಡಿಸಿಎಂ ಸ್ಥಾನದ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ

ಸಚಿವ ಆರ್​.ಅಶೋಕ್

ಸಚಿವ ಆರ್​.ಅಶೋಕ್

  • Share this:
ಬೆಂಗಳೂರು (ಜು. 29): ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಬಸವರಾಜ್ ಬೊಮ್ಮಾಯಿ ಯವರು ಪ್ರಮಾಣ ವಚನ ಸ್ವೀಕಾರ ಮಾಡಿದ ಮೂಡಿರುವ ಪ್ರಶ್ನೆ ಈಗ ಸಂಪುಟ ರಚನೆ ಯಾವಾಗ ಎಂಬುದು. ಹೊಸ ಸಂಪುಟಕ್ಕೆ ಸೇರಲು ಹಲವು ನಾಯಕರು ಕಸರತ್ತು ಮಾಡುತ್ತಿರುವ ಈ ಹೊತ್ತಿನಲ್ಲಿ ಇದೀಗ ಹಳೆ ಸಚಿವ ಸ್ಥಾನ ಮತ್ತೆ ಪಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಬಿಜೆಪಿ ಶಾಸಕರು ನಡೆಸಿದ್ದಾರೆ. ಈ ನಡುವೆ ಬೊಮ್ಮಯಿ ಕ್ಯಾಬಿನೆಟ್​ನಲ್ಲೂ ಮೂವರು ಉಪ ಮುಖ್ಯಮಂತ್ರಿಗಳಿಗೆ ಸ್ಥಾನ ಕಲ್ಪಿಸಲಾಗುವುದು ಎಂಬ ಮಾತು ಕೂಡ ಕೇಳಿ ಬಂದಿದೆ. ಈ ಹಿಂದೆ ಇದ್ದಂತೆ ಮೂವರು ಡಿಸಿಎಂ ಗಳನ್ನು ನೇಮಿಸಲಾಗುವುದು. ಆದರೆ, ಈ ಬಾರಿ ಹೊಸಬರಿಗೆ ಈ ಡಿಸಿಎಂ ಪಟ್ಟ ಸಿಗಲಿದೆ ಎನ್ನಲಾಗಿದೆ. ಇದರಲ್ಲಿ ಒಂದು ಸ್ಥಾನ ಆರ್​ ಅಶೋಕ್​ಗೆ ಸಿಗಲಿದೆ ಎಂಬ ಮಾತು ದಟ್ಟವಾಗಿದೆ. ಇದೇ ಹಿನ್ನಲೆ ಇಂದು ಅಶೋಕ್​ ದೆಹಲಿ ಪ್ರಯಾಣ ನಡೆಸಿದ್ದು, ಇದು ಮತ್ತಷ್ಟು ಕುತೂಹಲ ಮೂಡಿಸಿದೆ. 

ಈ ಮೊದಲ ಡಿಸಿಎಂ ಆಗಿ ಗೋವಿಂದ ಕಾರಜೋಳ, ಎರಡನೇ ಡಿಸಿಎಂ ಆಗಿ ಅಶ್ವಥ್ ನಾರಾಯಣ್, ಮೂರನೇ ಡಿಸಿಎಂ ಆಗಿ ಲಕ್ಷ್ಮಣ ಸವದಿ ಇದ್ದರು. ಈಗ ಇವರಲ್ಲಿ ಇಬ್ಬರು ಅಂದರೆ ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ ಸವದಿ ತೆಗೆದು, ಆ ಜಾಗಕ್ಕೆ ಹಿರಿಯ ನಾಯಕರಾದ ಅಶೋಕ್ ಹಾಗೂ ಶ್ರೀರಾಮುಲುರನ್ನು ನೇಮಕ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಒಕ್ಕಲಿಗರ ಕೋಟಾದಡಿ ಆರ್ ಅಶೋಕ್ ಹಾಗೂ ವಾಲ್ಮೀಕಿ ಕೋಟಾದಡಿ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಪಟ್ಟ ಸಿಗುತ್ತೆ ಎನ್ನಲಾಗಿದೆ.  ಕಳೆದ ಬಾರಿಯೇ ಶ್ರೀ ರಾಮುಲು ಡಿಸಿಎಂ ಪಟ್ಟಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅವರ ಅಭಿಮಾನಿಗಳು ಕೂಡ ಈ ಕುರಿತು ಅಭಿಯಾನ ನಡೆಸಿದ್ದರು. ಕಳೆದ ಬಾರಿ ಸ್ಥಾನ ಕೈ ತಪ್ಪಿದ ಹಿನ್ನಲೆ ಹೈ ಕಮಾಂಡ್ ನೀಡಿದ​ ಅಭಯದ ಬಳಿಕ ಈ ಬಾರಿ ಅವರಿಗೆ ಡಿಸಿಎಂ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.  ಇನ್ನೂ ಉಳಿದಿರುವ ಗೋವಿಂದ ಕಾರಜೋಳ ರನ್ನು ಎಂದಿನಂತೆ ಡಿಸಿಎಂ ಸ್ಥಾನದಲ್ಲಿ ಮುಂದುವರೆಸಲು ಹೈಕಮಾಂಡ್ ಆಲೋಚಿಸಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರದ ತಾರತಮ್ಯ ವಿರೋಧಿಸಿ ಎಚ್​ಡಿಕೆ ಕಾಲ್ನಡಿಗೆ ಜಾಥಾ

ಇನ್ನೂ ಅಶೋಕ್​ಗೆ  ಡಿಸಿಎಂ ಸ್ಥಾನದ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಹಿನ್ನಲೆ ಬೆಂಗಳೂರಿನ ಶಾಸಕರಾಗಿರುವ ಅಶೋಕ್​ಗೆ ಈ ಸಚಿವ ಸ್ಥಾನ ನೀಡುವುದು ಸೂಕ್ತ ಎಂಬ ಲೆಕ್ಕಾಚಾರ ನಡೆಸಲಾಗಿದೆ,

ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದ  ಹಿರಿಯ ನಾಯಕ ಆರ್ ಅಶೋಕ್ ಗೆ ಡಿಸಿಎಂ ಪಟ್ಟ ಸಿಗುವುದು ಬಹುತೇಕ ಖಚಿತವಾದ ಹಿನ್ನಲೆ ಅವರು ದೆಹಲಿಗೆ ತೆರಳಿದ್ದಾರೆ.   ಹೈಕಮಾಂಡ್ ನಾಯಕರ ಭೇಟಿ ಮಾಡಲಿರುವ ಅವರು ಹಿರಿಯರ ಮನವೊಲಿಸಲಿದ್ದಾರೆ. ಪ್ರಮುಖವಾಗಿ ಪಕ್ಷದಲ್ಲಿ ತಾನು ಹಿರಿಯ ನಾಯಕನಾಗಿದ್ದು, ನನಗೆ ಸರ್ಕಾರದಲ್ಲಿ ಉನ್ನತ ಹುದ್ದೆ ಸಿಗಬೇಕು ಎಂದು ಒತ್ತಡ ಹಾಕುವುದಕ್ಕೆ  ಮುಂದಾಗಿದ್ದಾರೆ ಎನ್ನಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: