ರಾಜ್ಯಕ್ಕೆ ಕಾಂಗ್ರೆಸ್​ ಸರ್ಕಾರ ಕೊಟ್ಟಿದ್ದೆಷ್ಟು? ಬಿಜೆಪಿ ನೀಡಿದ್ದೆಷ್ಟು? ಚರ್ಚಿಸೋಣ ಬನ್ನಿ; ಸಿದ್ದುಗೆ ಅಶೋಕ್​ ಸವಾಲು​

ಅಭಿವೃದ್ಧಿ, ಬರ, ನರೆ, ರಸ್ತೆಯ ಅನುದಾದ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೊಟ್ಟ ಕೊಡುಗೆಯೆಷ್ಟು ಮತ್ತು ಕಾಂಗ್ರೆಸ್​ ನೀಡಿದ ಕೊಡುಗೆಯೆಷ್ಟು ಎಂಬುದನ್ನು ಚರ್ಚಿಸೋಣ ಬನ್ನಿ ಎಂದು ಕಂದಾಯ ಸಚಿವ ಆರ್​ ಅಶೋಕ್​ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

Seema.R | news18-kannada
Updated:January 8, 2020, 6:39 PM IST
ರಾಜ್ಯಕ್ಕೆ ಕಾಂಗ್ರೆಸ್​ ಸರ್ಕಾರ ಕೊಟ್ಟಿದ್ದೆಷ್ಟು? ಬಿಜೆಪಿ ನೀಡಿದ್ದೆಷ್ಟು? ಚರ್ಚಿಸೋಣ ಬನ್ನಿ; ಸಿದ್ದುಗೆ ಅಶೋಕ್​ ಸವಾಲು​
ಸಿದ್ದರಾಮಯ್ಯ- ಆರ್​ ಅಶೋಕ್​
  • Share this:
ಉಡುಪಿ (ಜ.08): ಪ್ರವಾಹದಿಂದ ಉಂಟಾದ 38 ಸಾವಿರ ಕೋಟಿ ನಷ್ಟಕ್ಕೆ ರಾಜ್ಯ ಸರ್ಕಾರ ಎರಡನೇ ಕಂತಿಗೆ 1869 ಕೋಟಿ ಪರಿಹಾರ ಹಣ ನೀಡಿದೆ ಎಂದು ಲೇವಡಿ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಸಚಿವ ಆರ್​ ಅಶೋಕ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯಕ್ಕೆ ಕಾಂಗ್ರೆಸ್​ ಹಾಗೂ ಬಿಜೆಪಿ ಸರ್ಕಾರ ಎಷ್ಟು ಅನುದಾನ ನೀಡಿವೆ ಎಂಬುದನ್ನು ನೋಡೋಣ ಎಂದು ಚಾಲೆಂಜ್​ ಮಾಡಿದ್ದಾರೆ.

ಪ್ರವಾಹ ಪರಿಹಾರ ಕುರಿತು ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯಗೆ ನಾನೊಂದು ಓಪನ್​ ಚಾಲೆಂಜ್ ಕೊಡುತ್ತೇನೆ. ಐದು ವರ್ಷದ ಮೋದಿ ಹಾಗೂ ಮನಮೋಹನ್​ ಸಿಂಗ್ ಅನುದಾನವನ್ನ ಹೋಲಿಕೆ  ಮಾಡೋಣ. ಮನಮೋಹನ್ ಸಿಂಗ್ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು? ಮೋದಿ ನೀಡಿದ ಹಣವೆಷ್ಟು ಎನ್ನುವ ಹೋಲಿಕೆ ಮಾಡೋಣ. ಆಗ ಯಾರು ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದು ತಿಳಿಯಲಿದೆ ಎಂದರು

ಇನ್ನು ಈ ಬಗ್ಗೆ ನಾನು ಚರ್ಚೆ ಮಾಡುವುದಕ್ಕೆ ಸಿದ್ಧನಿದ್ದೇನೆ. ಸಿದ್ದರಾಮಯ್ಯ ಈ ಕುರಿತು ಸಂಪೂರ್ಣ ಮಾಹಿತಿ ತೆಗೆದುಕೊಂಡು ಬರಲಿ. ಅಭಿವೃದ್ಧಿ, ಬರ, ನರೆ, ರಸ್ತೆಯ ಅನುದಾದ ಲೆಕ್ಕ ಕೊಡಿ. ಈ ಬಗ್ಗೆ ದಾಖಲೆ ತಂದು ಮಾತನಾಡಿ. ಸುಮ್ಮನೆ ಹಾದಿ ಬೀದಿಯಲ್ಲಿ ಮಾತಾಡಿ ಏನನ್ನೂ ಸಾಧಿಸಲಾಗದು ಎಂದು ತಿರುಗೇಟು ನೀಡಿದರು.

ಬಂದ್​ ವಿಫಲ

ವಿವಿಧ ಬೇಡಿಕೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಕರೆ ನೀಡಲಾದ ಬಂದ್​ ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವ ಕುರಿತು ಮಾತನಾಡಿದ ಅವರು, ಭಾರತ್ ಬಂದ್ ಕರೆಯುವ ಅಗತ್ಯವಿರಲಿಲ್ಲ ಎಂದರು.

ಇದನ್ನು ಓದಿ: ದೀಪಿಕಾ ಪಡುಕೋಣೆ ಟ್ರೋಲ್ ಮಾಡಿ ಪೇಚಿಗೆ ಸಿಕ್ಕ ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ

50-60 ವರ್ಷದ ಹಿಂದಿನ ಬೇಡಿಕೆಗೆ ಅರ್ಥ ಇಲ್ಲ. ಬಂದ್ ಕರೆ ನೀಡಿದ್ದು ಸುಪ್ರೀಂ ಆದೇಶದ ಉಲ್ಲಂಘನೆ. ರಾಜ್ಯದ ಜನ ಬಂದ್​ ತಿರಸ್ಕಾರ ಮಾಡಿದ್ದಾರೆ. ನಾನೂ ಇದನ್ನು ಸ್ವಾಗತ ಮಾಡುತ್ತೇನೆ. ಕಮ್ಯೂನಿಸ್ಟ್‌ ಪ್ರೇರಿತ ಬಂದ್ ಹೇರಿಕೆ ಸರಿಯಲ್ಲ. ಬಂದ್​ನಿಂದ ಯಾವುದೇ ಉದ್ದೇಶ ಈಡೇರಲ್ಲ ಎಂದರು.
First published:January 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ