ಆರ್. ಅಶೋಕ್​ಗೆ ಸುತ್ತಿಕೊಂಡಿದೆ ವಿದೇಶ ಪ್ರವಾಸಗಳ ಕಂಟಕ

ಮಾಜಿ ಸಚಿವ ಹಾಗು ಹಾಲಿ ಬಿಜೆಪಿ ಶಾಸಕ ಆರ್ ಅಶೊಕ ತಾನು ಸಚಿವನಾಗಿದ್ದ ಕಾಲದಲ್ಲಿ ಮಾಡಿದ 3 ವಿದೇಶ ಪ್ರಯಾಣಗಳು ಈಗ ಇವರಿಗೆ ಕಂಠಕವಾಗಿ ಪರಿಣಮಿಸಲಿವೆ. ಅದು ಹೇಗೆ ಅನ್ತೀರಾ ಈ ಸ್ಟೋರಿ ನೊಡಿ..


Updated:June 26, 2018, 10:34 AM IST
ಆರ್. ಅಶೋಕ್​ಗೆ ಸುತ್ತಿಕೊಂಡಿದೆ ವಿದೇಶ ಪ್ರವಾಸಗಳ ಕಂಟಕ
ಬಿಜೆಪಿ ಮುಖಂಡ ಆರ್.ಅಶೋಕ್

Updated: June 26, 2018, 10:34 AM IST
- ಆಲ್ವಿನ್ ಮೆಂಡೋನ್ಸಾ, ನ್ಯೂಸ್18 ಕನ್ನಡ

ಬೆಂಗಳೂರು(ಜೂನ್ 26): ಮಾಜಿ ಡಿಸಿಎಂ ಆರ್.ಅಶೋಕ್ ಈ ಹಿಂದೆ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ವಿದೇಶ ಪ್ರವಾಸಗಳು ಈಗ ಅವರಿಗೆ ಕುತ್ತಾಗುತ್ತಿವೆ. 2007ರಿಂದ 2011ರ ವರೆಗೆ ಆರ್​. ಅಶೋಕ್ 7 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಇಲ್ಲಿ ಫಾರಿನ್ ಟೂರ್ ಮಾಡಿರುವುದು ಪ್ರಮುಖ ವಿಷಯವಲ್ಲ. ಆದರೆ ಶಿಷ್ಟಾಚಾರಗಳನ್ನ ಉಲ್ಲಂಘಿಸಿ ಅಶೋಕ್ ವಿದೇಶ ಪ್ರಮಾಸ ಮಾಡಿರುವ ಕಡತಗಳು ಈಗ ಹೊರಬಿದ್ದಿವೆ. ಹಾಗಿದ್ರೆ ಮಿನಿಸ್ಟರ್ ಆಗಿದ್ದಾಗ ಆರ್.ಅಶೋಕ್ ಯಾವ ದೇಶಕ್ಕೆಲ್ಲಾ ಹೋಗಿದ್ರು ಎಂಬ ಡೀಟೇಲ್ಸ್ ಇಲ್ಲಿದೆ...

ಆರ್. ಅಶೋಕ್ ಫಾರಿನ್ ಟೂರ್:
ಮಾರಿಷಸ್: 2007, ಮೇ 25-28

ದುಬೈ: 2009, ಫೆ. 14-18
ದುಬೈ: 2009, ಜುಲೈ 10-12
ಯುಎಸ್ಎ: 2009, ಜೂನ್ 30 -  ಜುಲೈ 09
Loading...

ಸ್ವೀಡನ್:  2009, ಜೂನ್ 26-30
ದುಬೈ: 2011, ಏಪ್ರಿಲ್ 13-14
ಯುಕೆ: 2011, ಏಪ್ರಿಲ್ 16-21

1993ರ ಸೇವಾ ನಿಯಮದ ಅನುಸಾರ ಯಾವುದೇ ಮಂತ್ರಿ ವಿದೇಶ ಪ್ರಯಾಣ ಮಾಡುವುದಾದರೆ ಮಂತ್ರಾಲಯದ ಪೂರ್ವ ಸಮ್ಮತಿ ಪಡೆಯಬೇಕು. ಆದ್ರೆ ಆರ್ ಅಶೋಕ್ ಮಂತ್ರಿಯಾಗಿರುವಾಗ ಮಾಡಿರುವ ಏಳು ವಿದೇಶ ಪ್ರಯಾಣಗಳ ಪೈಕಿ, ಮಾರಿಷಸ್ ಹಾಗೂ ದುಬೈಗೆ ಎರಡು ಸಾರಿ ಹೋಗಿರುವಾಗ ಮಂತ್ರಾಲಯದ ಸಮ್ಮತಿ ಪಡೆಯಲಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅರ್​ಟಿಐ ಕಾರ್ಯಕರ್ತರಾಗಿರುವ ನಿವೃತ್ತ ವಿಂಗ್ ಕಮಾಂಡರ್ ಜಿಬಿ ಅತ್ರಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ..

ಆರ್. ಅಶೋಕ್ ಸತತ 2 ಬಾರಿ ಖಾಸಗಿಯವರ ವೆಚ್ಚದಲ್ಲಿ ದುಬೈ ಪ್ರಯಾಣ ಮಾಡಿದ್ದಾರೆ. ಇದು ಖಾಸಗಿ ಕಾರ್ಯಕ್ರಮ ಎಂದು DPARನಲ್ಲಿ ಉಲ್ಲೇಖವಾಗಿದೆ. ಮೊರಿಷಸ್ ಹಾಗೂ ದುಬೈ ಪ್ರಯಾಣದ ವೇಳೆ ಸರಕಾರಿ ಪೂರ್ವ ಸಮ್ಮತಿ ಪಡೆದುಕೊಳ್ಳದೆ, ಮಂತ್ರಾಲಯದ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಪ್ರಯಾಣ ಮಾಡಿದ್ದು ಪ್ರಶ್ನೆಗೆ ಒಳಗಾಗಿದೆ. ಯಾರ ಭೇಟಿಗೆ ಸಚಿವರು ಹೋಗಿದ್ದರು, ಇವರ ಖರ್ಚು ಭರಿಸಿದ್ದು ಯಾರು ಮತ್ತು ಯಾಕೆ ಎಂಬ ಕುತೂಹಲವೂ ಮೂಡಿದೆ.

ಭಾರತ ಸರಕಾರದ ನಿಯಮಗಳ ಪ್ರಕಾರ ಯಾವುದೇ ಜನಪ್ರತಿನಿಧಿ ವಿದೇಶ ಪ್ರಯಾಣ ಮಾಡೋದಾದ್ರೆ, ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಸಿಎಂ ಪರವಾನಗಿ ತೆಗೆದುಕೊಂಡು ಕೇಂದ್ರ ವಿದೇಶಾಂಗ ಇಲಾಖೆ ಗಮನಕ್ಕೂ ತರಬೇಕು. ಈ ಮಾಹಿತಿಗಳನ್ನ ವಿದೇಶಾಂಗ ಸಚಿವಾಲಯ ಇತರೆ ರಾಯಭಾರಿ ಕಚೇರಿಗೆ ತಿಳಿಸಬೇಕು.

ಸದ್ಯ ಮಾಜಿ ಡಿಸಿಎಂ ಮಾಡಿರೋ ಫಾರಿನ್ ಟೂರ್ ಹಿಂದೆ ಅನುಮಾನಗಳಿದ್ದು, ಇದರ ದೂರು ಸಿಎಂ ಕಚೇರಿಗೆ ಹೋಗಿದೆ. ಸಿಎಂ ಎಚ್​ಡಿಕೆ ಈ ಬಗ್ಗೆ ಯಾವ ರೀತಿಯ ಕೈಗೊಳ್ಳುತ್ತಾರೋ ಗೊತ್ತಿಲ್ಲ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...