‘ನಾವ್ಯಾರೂ ಅಣಬೆಗಳ ರೀತಿ ಬೆಳೆದವರಲ್ಲ’ - ಕುಮಾರಸ್ವಾಮಿಗೆ ಆರ್. ಅಶೋಕ್ ತಿರುಗೇಟು

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಹಿಂಸರಿಯಬೇಕು. ಅವರಿಗೆ ಇನ್ನೂ ಅವಕಾಶ ಇದೆ. ಅವರ ತಂದೆ ಬಿ.ಎನ್. ಬಚ್ಚೇಗೌಡರು ಶಿಸ್ತಿನ ಸಿಪಾಯಿ. ಅವರ ಜೊತೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಅವರು ಪ್ರಚಾರಕ್ಕೆ ಬಂದೇ ಬರುತ್ತಾರೆ ಎಂದು ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

news18
Updated:November 27, 2019, 11:27 AM IST
‘ನಾವ್ಯಾರೂ ಅಣಬೆಗಳ ರೀತಿ ಬೆಳೆದವರಲ್ಲ’ - ಕುಮಾರಸ್ವಾಮಿಗೆ ಆರ್. ಅಶೋಕ್ ತಿರುಗೇಟು
ಆರ್. ಅಶೋಕ್
  • News18
  • Last Updated: November 27, 2019, 11:27 AM IST
  • Share this:
ಬೆಂಗಳೂರು(ನ. 27): ಮೋದಿ ಹೆಸರೇಳಿಕೊಂಡು ತಾನು ಬೆಳೆದಿದ್ದಲ್ಲ ಎಂದು ಕುಮಾರಸ್ವಾಮಿ ಮಾಡಿದ್ದ ವ್ಯಂಗ್ಯಕ್ಕೆ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. ತಾವ್ಯಾರೂ ಅಣಬೆಗಳ ರೀತಿ ಬೆಳೆದವರಲ್ಲ. ಹೋರಾಟದ ಮೂಲಕ ಬೆಳೆದು ಬಂದವರು ಎಂದು ಆರ್. ಅಶೋಕ್ ಹೇಳಿದ್ದಾರೆ. ಈ ಮೂಲಕ ಕುಮಾರಸ್ವಾಮಿಯನ್ನು ಅವರು ಪರೋಕ್ಷವಾಗಿ ಅಣಬೆಗೆ ಹೋಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿಲ್ಲಿರುವ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಅವರು ಮಾತನಾಡುತ್ತಿದ್ದರು.

ನಾವು ಕಷ್ಟಪಟ್ಟು ಬೆಳೆದು ಬಂದಿದ್ದೇವೆ. ನಾವೇನೂ ಮೋದಿ ಹೆಸರು ಹೇಳಿಕೊಂಡು ಅಶೋಕ್ ರೀತಿ ಬೆಳೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಮೂದಲಿಸಿದ್ದರು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್, ತಾನು ಮೋದಿ, ಆಡ್ವಾಣಿ ಹೆಸರು ಹೇಳಿದ್ದು ನಿಜ. ಆದರೆ ಅವರೆಲ್ಲಾ ಕುಟುಂಬ ನಾಯಕರಲ್ಲ, ಸಾರ್ವಜನಿಕ ನಾಯಕರು. ಕುಮಾರಸ್ವಾಮಿ ರೀತಿ ನಾವೇನು ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರಲ್ಲ. ನಮ್ಮ ಕುಟುಂಬದಲ್ಲಿ ಯಾರೂ ರಾಜಕಾರಣಿಗಳಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ ; ಸಂತ್ರಸ್ಥರ ಕುಟುಂಬಕ್ಕೆ 78 ಲಕ್ಷ ಬಿಡುಗಡೆ

ನೈಟ್ ಕ್ಲಬ್, ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಣದಿಂದ ಅನರ್ಹ ಶಾಸಕರನ್ನು ಖರೀದಿ ಮಾಡಿದ್ದಾರೆಂದು ಕುಮಾರಸ್ವಾಮಿ ಮಾಡಿದ ಆರೋಪಕ್ಕೂ ಆರ್. ಅಶೋಕ್ ತಿರುಗೇಟು ಕೊಟ್ಟಿದ್ದಾರೆ. “ನಮ್ಮ ಸರ್ಕಾರ ಯಾವುದೇ ಕ್ರಿಕೆಟ್ ಬೆಟ್ಟಿಂಗ್, ನೈಟ್ ಕ್ಲಬ್​ಗೆ ಅವಕಾಶ ಕೊಟ್ಟಿಲ್ಲ. ಕುಮಾರಸ್ವಾಮಿಯ ಹೇಳಿಕೆಯು ಹಿಟ್ ಅಂಡ್ ರನ್ ಕೇಸ್. ಬೆಟ್ಟಿಂಗ್​ನಿಂದ ಹಣ ಪಡೆದವರು ಯಾರು ಎಂದು ಮೊದಲು ಹೇಳಲಿ. ಸುಮ್ಮನೆ ಹಿಟ್ ಅಂಡ್ ರನ್ ಹೇಳಿಕೆ ಕೊಡುವುದು ಸರಿಯಲ್ಲ. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಅವರ ಬಳಿ ಮಾಹಿತಿ ಇದ್ದರೆ ಕೊಡಲಿ. ಹಣ ಪಡೆದವರ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅದು ಬಿಟ್ಟು ಈ ರೀತಿ ಆರೋಪ ಮಾಡುವುದು ಅವರ ಸ್ಥಾನಕ್ಕೆ ಗೌರವ ಕೊಡುವುದಿಲ್ಲ” ಎಂದು ಆರ್. ಅಶೋಕ್ ಟೀಕಿಸಿದ್ದಾರೆ.

ಹೊಸಕೋಟೆಯಲ್ಲಿ ಬಿಜೆಪಿ ಅಲೆ ಸೃಷ್ಟಿಯಾಗಿದೆ. ಬಿಜೆಪಿಯ ಇಡೀ ತಂಡವು ಎಂಟಿಬಿ ಗೆಲುವಿಗೆ ಟೊಂಕ ಕಟ್ಟಿ ನಿಂತಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಅಲ್ಲಿ ನಿಲ್ಲಿಸಿರುವುದು ಬಿಜೆಪಿಗೆ ಒಳ್ಳೆಯದೇ ಆಗಿದೆ. ಬೇರೆ ಪಕ್ಷದ ನಾಯಕರು ಅಲ್ಲಿ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ಅವರ ಸ್ಟಾರ್ ಪ್ರಚಾರಕರು ವಿದೇಶಕ್ಕೆ ಹೋಗಿದ್ದಾರೆ ಎಂದು ಸಿ.ಎಂ. ಇಬ್ರಾಹಿಂ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅಶೋಕ್ ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ: ಬೆಂಗಳೂರು ಗ್ರಾಹಕರಿಗೆ ಕಹಿಯಾದ ಈರುಳ್ಳಿ; ಕತ್ತರಿಸದಿದ್ದರೂ ಕಣ್ಣೀರಿಡಿಸುತ್ತಿದೆ ಈ ತರಕಾರಿ

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಹಿಂಸರಿಯಬೇಕು. ಅವರಿಗೆ ಇನ್ನೂ ಅವಕಾಶ ಇದೆ. ಅವರ ತಂದೆ ಬಿ.ಎನ್. ಬಚ್ಚೇಗೌಡರು ಶಿಸ್ತಿನ ಸಿಪಾಯಿ. ಅವರ ಜೊತೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಅವರು ಪ್ರಚಾರಕ್ಕೆ ಬಂದೇ ಬರುತ್ತಾರೆ ಎಂದು ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಘಟನೆಯನ್ನು ಆರ್. ಅಶೋಕ್ ಬಲವಾಗಿ ಖಂಡಿಸಿದ್ದಾರೆ. “ಹಿಂದೆ ಇಂಥ ಹೊಡೆದಾಟ ಪ್ರಕರಣಗಳು ಹೆಚ್ಚಾಗಿದ್ದವು. ಎಂಟಿಬಿ ನಾಗರಾಜ್ ಬಂದ ಮೇಲೆ ಇವೆಲ್ಲಾ ಕಡಿಮೆಯಾಗಿತ್ತು. ಇದೀಗ ಮತ್ತೆ ರೌಡಿಸಂ ಪರಂಪರೆ ಶುರುವಾಗಿದೆ. ಜನರು ಎಚ್ಚೆತ್ತುಕೊಳ್ಳಬೇಕು. ಇನ್ನೂ ಮತದಾನ ಆಗಿಲ್ಲ, ಫಲಿತಾಂಶ ಬಂದಿಲ್ಲ. ಆಗಲೇ ಈ ರೀತಿಯ ಪ್ರಕರಣಗಳು ಪ್ರಾರಂಭವಾಗಿವೆ. ಜನರು ಯೋಚಿಸಿ ಮತದಾನ ಮಾಡಬೇಕಿದೆ” ಎಂದವರು ಕರೆ ನೀಡಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:November 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading