news18-kannada Updated:October 31, 2020, 5:14 PM IST
ಆರ್. ಅಶೋಕ್
ಬೆಂಗಳೂರು (ಅ.31): ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡಾದ ಕಾರಣಕ್ಕೆ ಜನರು ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ದೃಷ್ಟಿಬೊಟ್ಟಿನಂತೆ ಒಂದೇ ಸ್ಥಾನವನ್ನು ಗೆಲ್ಲುವಲ್ಲಿ ಅವರು ಸಫಲರಾಗಿದ್ದು. ಸಿದ್ದರಾಮಯ್ಯ ಅಭಿವೃದ್ಧಿ ಕೆಲಸ ಮಾಡಿದ್ದರೆ, ಯಾಕೆ ಸೋಲುತ್ತಿದ್ದರು. ಕೇವಲ ನಾನು ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಾರೆ. ಈ ಬಗ್ಗೆ ಅವರಿಗೆ ನಾಚಿಕೆಯಾಗಬೇಕು. ನಿಮ್ಮ ಪಕ್ಷ ಬಿಟ್ಟು 15 ಜನ ಶಾಸಕರು ಓಡಿಹೋದರು. ಅವರನ್ನೇ ನೀವು ಉಳಿಸಿಕೊಳ್ಳಲು ಆಗಲಿಲ್ಲ. ನಿಮ್ಮ ಕೆಲಸವೇನಿದ್ದರೂ ಸಿದ್ದ, ಹೋದ ಸಿದ್ದಎನ್ನುವ ರೀತಿ. ಪ್ರಚಾರಕ್ಕೆ ಬಂದ ವೇಳೆ ಕೂಡ ಕೇವಲ ಮುನಿರತ್ನರನ್ನ ಬೈಯುತ್ತೀರಾ ಹೊರತು ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ ಎಂದು ಸಚಿವ ಆರ್ ಅಶೋಕ್ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಉಪ ಚುನಾವಣೆ ರಾಜ್ಯ ರಾಜಕೀಯ ಬದಲಾವಣೆ ಮಾಡುವ ಚುನಾವಣೆ ಅಲ್ಲ. ಬದಲಾಗಿ ಮುಂದಿನ ಎರಡೂವರೆ ವರ್ಷಗಳ ಕಾಲ ಯಾರು ಅನುದಾನ ತಂದು ಅಭಿವೃದ್ಧಿ ಮಾಡುತ್ತಾರೆ ಎನ್ನುವ ಚುನಾವಣೆ. ಇದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜನರು ಬಿಜೆಪಿಗೆ ಮತ ನೀಡಬೇಕು. ಯಡಿಯೂರಪ್ಪನವರು ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ತಮ್ಮ ಚಾಣಾಕ್ಷತನದಿಂದ ಆರ್ ಆರ್ ನಗರಕ್ಕೆ 950 ಕೋಟಿ ರೂಪಾಯಿ ಅನುದಾನ ನೀಡಿಸಿದ್ದಾರೆ ಎಂದು ಬಿಜೆಪಿ ಸಾಧನೆ ತಿಳಿಸಿದರು.
ಇದೇ ವೇಳೆ ಡಿಕೆ ಎಸ್ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೊಡ್ಡ ಬಂಡೆ, ಚಿಕ್ಕ ಬಂಡೆ ಇಬ್ಬರು ಮೇಲೆ ಬಂಡೆ ಬಿದ್ದರೆ ಸೀದಾ ಮೇಲಕ್ಕೆ ಹೋಗಬೇಕು. ನಿಮಗೆ ಈಗಾಗಲೇ ಜನ ಸೋಲು ನೀಡಿದ್ದಾರೆ ಎಂದರು
ಕುಮಾರಸ್ವಾಮಿ ಮೊನ್ನೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ನನಗೆ ವಿಷ ಕೊಟ್ಟರು ಎಂದು ಹೇಳಿಕೆ ನೀಡಿದರು. ದೇವೇಗೌಡರನ್ನು ಪ್ರಧಾನಮಂತ್ರಿ ಸ್ಥಾನದಿಂದ ಇಳಿಸಿದ್ದು ಇದೇ ಕಾಂಗ್ರೆಸ್. ಈಗ ಜಾತೀ ರಾಜಕೀಯ ಮಾಡುತ್ತಿದೆ ಎಂದರು
ಗೆದ್ದರೆ ಮುನಿರತ್ನ ಮಂತ್ರಿ ಸಿಎಂ ಬಿಎಸ್ವೈ
ಮುನಿರತ್ನ ಚುನಾವಣೆಯಲ್ಲಿ ಗೆದ್ದರೆ ಮಂತ್ರಿಯಾಗಲಿದ್ದಾರೆ. ಇದರಿಂದ ಕ್ಷೇತ್ರಕ್ಕೆ ಮತ್ತಷ್ಟು ಅನುದಾನ ಸಿಗಲಿದೆ. ಅವರನ್ನು ಗೆಲ್ಲಿಸುವುದು ನಿಮ್ಮ ಹೊಣೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಇದನ್ನು ಓದಿ: ಶಿರಾದಲ್ಲಿ ಅಭಿವೃದ್ಧಿ ಮಂತ್ರ; ಅಭ್ಯರ್ಥಿ ಗೆದ್ದರೆ ಕ್ಷೇತ್ರವನ್ನು ದತ್ತು ಪಡೆಯುತ್ತೇನೆಂದ ಜೆಡಿಎಸ್ ವರಿಷ್ಠ ದೇವೇಗೌಡಹಣಕಾಸಿನ ತೊಂದರೆ ಇದ್ದರೂ ಈ ಕ್ಷೇತ್ರದ ಅಭಿವೃದ್ಧಿಗೆ ನಮಃ ಸರ್ಕಾರ 850 ಕೋಟಿ ಅನುದಾನ ನೀಡಿದ್ದೇನೆ. 820 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಈ ಚುನಾವಣೆ ಮುಗಿದ ಬಳಿಕ ಮುಂದಿನ ಎರಡೂವರೆ ವರ್ಷಗಳಲ್ಲಿ ಎಲ್ಲ ಬಗೆಯ ಅಭಿವೃದ್ಧಿಗೆ ಸಹಕಾರ ನೀಡ್ತೇನೆ ಎಂಬ ಭರವಸೆ ನೀಡುತ್ತೇನೆ.
ಕಾಂಗ್ರೆಸ್ ಬಗ್ಗೆ ನಾನು ಮಾತಾಡಲ್ಲ. ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಏನಾಯಿತು ಎಂದು ಗೊತ್ತಿದೆ. ಅವರು ಕಾಂಗ್ರೆಸ್ ತೊರೆದು ನಮ್ಮ ಪಕ್ಷವನ್ನು ಮೆಚ್ಚಿ ನಮ್ಮ ಪಕ್ಷ ಸೇರದಿದ್ದರೆ ನಾನಿಂದು ಇಲ್ಲಿ ಸಿಎಂ ಆಗಿ ನಿಲ್ಲುತ್ತಿರಲಿಲ್ಲ ಎಂದರು
Published by:
Seema R
First published:
October 31, 2020, 5:06 PM IST