• Home
  • »
  • News
  • »
  • state
  • »
  • ಸುಮಲತಾ-ಡಿ.ಸಿ. ತಮ್ಮಣ್ಣ ನಡುವೆ ಮುಂದುವರಿದ ಜಗಳ; ಮಂಡ್ಯ ಸಂಸದೆಯ ಕಾರ್ಯವೈಖರಿಗೆ ಮಾಜಿ ಸಚಿವ ಅಸಮಾಧಾನ

ಸುಮಲತಾ-ಡಿ.ಸಿ. ತಮ್ಮಣ್ಣ ನಡುವೆ ಮುಂದುವರಿದ ಜಗಳ; ಮಂಡ್ಯ ಸಂಸದೆಯ ಕಾರ್ಯವೈಖರಿಗೆ ಮಾಜಿ ಸಚಿವ ಅಸಮಾಧಾನ

ಸುಮಲತಾ- ಡಿಸಿ ತಮ್ಮಣ್ಣ

ಸುಮಲತಾ- ಡಿಸಿ ತಮ್ಮಣ್ಣ

ಅವರು ಎಷ್ಟು ಬೇಕಾದರೂ ಅನುದಾನ ತಂದು ಪೂಜೆ ಮಾಡಲಿ. ಯಾರದ್ದೋ ಮಗುವಿಗೆ ಅವರ ಹೆಸರಿಡುವುದು ಸರಿಯಲ್ಲ. ನಾನು ಮಂತ್ರಿಯಾಗಿದ್ದಾಗಲೇ ಈ ಬಸ್ ನಿಲ್ದಾಣ ಕಾಮಗಾರಿಗೆ ಪೂಜೆ ಮಾಡಿದ್ದೆ. ಈಗ ಮತ್ತೊಮ್ಮೆ ಪೂಜೆ ಮಾಡುವ ಅವಶ್ಯಕತೆ ಇಲ್ಲ. ಸಂಸದರ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲ್ಲ-ಡಿ.ಸಿ.ತಮ್ಮಣ್ಣ

ಮುಂದೆ ಓದಿ ...
  • Share this:

    ಮಂಡ್ಯ(ಫೆ.13): ಲೋಕಸಭಾ ಚುನಾವಣೆಯಿಂದ ಶುರುವಾದ ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವಿನ ಜಟಾಪಟಿ ಇಂದಿಗೂ ಮುಂದುವರೆದಿದೆ. ಸುಮಲತಾ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿಯನ್ನು ಸೋಲಿಸಿದ್ದು ಜೆಡಿಎಸ್​ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಅಂದಿನಿಂದ ಈವರೆಗೆ ದಳಪತಿಗಳು ಮತ್ತು ಸುಮಲತಾ ನಡುವೆ ವಾಕ್ಸಮರ ನಡೆಯುತ್ತಲೇ ಇದೆ.

    ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಕಾಮಗಾರಿ ಸ್ಥಳೀಯರ ವಿವಾದದಿಂದ  ಸ್ಥಗಿತವಾಗಿತ್ತು. ಸಂಸದೆ ಸುಮಲತಾ ಕಾಮಗಾರಿಗೆ ಚಾಲನೆ ನೀಡುವ ಹಿನ್ನೆಲೆ, ಅಧಿಕಾರಿಗಳು ಬಸ್​ ನಿಲ್ದಾಣದ ಸ್ಥಳವನ್ನು ಒತ್ತುವರಿ ಮಾಡಿದ್ದರು ಎನ್ನಲಾಗಿತ್ತು. ಈ ನಡುವೆಯೇ ಇಂದು ಸಂಜೆ 4 ಗಂಟೆಗೆ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿಯಾಗಿತ್ತು.

    ಸರೋಜಿನಿ ಮಹಿಷಿ ವರದಿ ಜಾರಿಗೆ ವಿಪಕ್ಷಗಳ ಜೊತೆ ಚರ್ಚಿಸಿ ಕ್ರಮ; ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ

    ಸುಮಲತಾ ಶಂಕುಸ್ಥಾಪನೆ ಮಾಡುವ ಮುನ್ನವೇ ಮಾಜಿ ಸಚಿವ, ಮದ್ದೂರಿನ ಶಾಸಕ ಡಿ.ಸಿ.ತಮ್ಮಣ್ಣ ಸ್ಥಳಕ್ಕಾಗಮಿಸಿ, ಸಂಸದೆಯ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಅವರು ಎಷ್ಟು ಬೇಕಾದರೂ ಅನುದಾನ ತಂದು ಪೂಜೆ ಮಾಡಲಿ. ಯಾರದ್ದೋ ಮಗುವಿಗೆ ಅವರ ಹೆಸರಿಡುವುದು ಸರಿಯಲ್ಲ. ನಾನು ಮಂತ್ರಿಯಾಗಿದ್ದಾಗಲೇ ಈ ಬಸ್ ನಿಲ್ದಾಣ ಕಾಮಗಾರಿಗೆ ಪೂಜೆ ಮಾಡಿದ್ದೆ. ಈಗ ಮತ್ತೊಮ್ಮೆ ಪೂಜೆ ಮಾಡುವ ಅವಶ್ಯಕತೆ ಇಲ್ಲ. ಸಂಸದರ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲ್ಲ," ಎಂದು ಹೇಳಿದ್ದಾರೆ.

    ಬೆಸಗರಹಳ್ಳಿ ಗ್ರಾಮ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾಗಿದ್ದು,  ಈ ಹಿಂದಿನ ಸಭೆಯಲ್ಲಿ ಬಸ್​ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗೊಂದಲ ನಿವಾರಣೆ ಮಾಡುವಂತೆ ಸಲಹೆ ನೀಡಿದ್ಧರು. ಆದರ್ಶ ಗ್ರಾಮ ಯೋಜನೆಯ ಮೊದಲ ಸಭೆಯಲ್ಲಿ ಸಂಸದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಸಂಸದರ ಸಲಹೆಯಂತೆ ಅಧಿಕಾರಿಗಳು ಗೊಂದಲ ನಿವಾರಿಸಿ, ಒತ್ತುವರಿ ತೆರವಿಗೆ ಮುಂದಾಗಿದ್ದರು.

    ದೆಹಲಿಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದ 24 ಗಂಟೆಯಲ್ಲಿ ಪಕ್ಷಕ್ಕೆ ಹೊಸದಾಗಿ 1 ದಶಲಕ್ಷ ಜನ ಸೇರ್ಪಡೆ

    ಇನ್ನೊಂದೆಡೆ, ಸಂಸದೆ ವಿರುದ್ಧ ದಳಪತಿಗಳು ಅಸಹಕಾರ ಚಳವಳಿ ನಡೆಸಲು ಮುಂದಾಗಿದ್ಧಾರೆ. ಸುಮಲತಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್​ನಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಗೆ ಯಾವುದೇ ಜೆಡಿಎಸ್​ ನಾಯಕರು ಭಾಗಿಯಾಗಿಲ್ಲ. ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಗೆ ನಾಗಮಂಗಲ ಶಾಸಕ ಕೆ.ಸುರೇಶ್ ಗೌಡ ಹೊರತುಪಡಿಸಿ ಉಳಿದ ಎಲ್ಲಾ ಶಾಸಕರು ಗೈರಾಗಿದ್ದಾರೆ.

     

    First published: