HOME » NEWS » State » QUARREL AT RAYABAGHA KATAKABAVI VILLAGE PANCHAYAT GENERAL MEETING FOR CHICKEN LCTV SESR

ಗ್ರಾಮ ಪಂಚಾಯತಿ ಸಮಾನ್ಯ ಸಭೆಯಲ್ಲಿ ಕೋಳಿ ಜಗಳ; ಇಲಾಖೆ ಕೋಳಿಗಾಗಿ ಸದಸ್ಯರ ಕಿತ್ತಾಟ

ಇವು ಸರ್ಕಾರದಿಂದ ಬಂದ ಅನುದಾನದ ಕೋಳಿಗಳಲ್ಲ ಬದಲಾಗಿ ನಾನೇ ದುಡ್ಡು ಕೊಟ್ಟು ತಂದಿದ್ದೇನೆ.  ಹೀಗಾಗಿ ಇವುಗಳನ್ನ ಹಂಚಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ

news18-kannada
Updated:February 18, 2021, 2:34 PM IST
ಗ್ರಾಮ ಪಂಚಾಯತಿ ಸಮಾನ್ಯ ಸಭೆಯಲ್ಲಿ ಕೋಳಿ ಜಗಳ; ಇಲಾಖೆ ಕೋಳಿಗಾಗಿ ಸದಸ್ಯರ ಕಿತ್ತಾಟ
ಕಟಕಬಾವಿ ಗ್ರಾಮ ಪಂಚಾಯತಿಯಲ್ಲಿ ಕೋಳಿ ರದ್ದಾಂತ
  • Share this:
ಚಿಕ್ಕೋಡಿ (ಫೆ. 17): ಸದನದಲ್ಲಿ ಕೋಟಿ ಕೋಟಿ ಭ್ರಷ್ಟಾಚಾರದ ವಿಚಾರ ಸೇರಿದಂತೆ ಗಂಭೀರ ವಿಷಯಗಳ ಕುರಿತು ರಾಜಕೀಯ ನಾಯಕರು ಕಿತ್ತಾಡುವುದು ಸಾಮಾನ್ಯ. ಆದರೆ, ಇಲ್ಲೊಂದು ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಗ್ರಾಮ ಪಂಚಾಯತಿ ಸದಸ್ಯ  ಕೋಳಿಗೋಸ್ಕರ ಕಿತ್ತಾಡಿದ್ದಾರೆ.  ಅಚ್ಚರಿಯಾದರೂ ನಿಜ. ಈ ಕೋಳಿ ಜಗಳ ನಡೆದಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ. ಕಳೆದ ಜನವರಿ ಮೊದಲ ವಾರದಲ್ಲಿ ಜಿಲ್ಲಾ ಪಂಚಾಯತಿ​​ ಅನುದಾನದಲ್ಲಿ  ಪಶುಸಂಗೋಪನೆ ಇಲಾಖೆಯಿಂದ  900  ಕೋಳಿಗಳು ಇಲ್ಲಿಗೆ ಬಂದಿವೆ. ಈ ಕೋಳಿಗಳನ್ನು ಎಸ್  ಎಸಿ ಎಸ್ ಎಟಿ ಸಮುದಾಯದವರಿಗೆ ಹಂಚಲು ಜಿಲ್ಲಾ ಪಂಚಾಯತಿ ಸದಸ್ಯ ನಿಂಗಪ್ಪ ಪಕಂಡಿ ತಂದಿದ್ದರು. ಚುನಾವಣೆ ಸಂದರ್ಭ ಆಗಿದ್ದರಿಂದ ಗ್ರಾಮ ಪಂಚಾಯತಿ ಸದಸ್ಯ ಗೋಪಾಲ ಬಿದರಿ ಅವರ ಫಾರಂನಲ್ಲಿ‌ ಆ ಕೋಳಿಗಳನ್ನ ಇರಿಸಿದ್ದರು‌. ಎಲ್ಲ ಮುಗಿದರೂ ಇದುವರೆಗೂ ಈ ಕೋಳಿಗಳ ಹಂಚಿಕೆ ಕಾರ್ಯ ಆಗಿಲ್ಲ. ಇದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.

ಅಲ್ಲದೇ, ಈಗ  ಗ್ರಾಮ ಪಂಚಾಯತಿ ಸದಸ್ಯ ಗೋಪಾಲ ಬಿದರಿ ಕೋಳಿಗಳು ತಮ್ಮ ಫಾರಂ ಗೆ  ಬಂದ ಮೇಲೆ ಇವು ಸರ್ಕಾರದಿಂದ ಬಂದ ಅನುದಾನದ ಕೋಳಿಗಳಲ್ಲ. ಬದಲಾಗಿ ನಾನೇ ದುಡ್ಡು ಕೊಟ್ಟು ತಂದಿದ್ದೇನೆ.  ಹೀಗಾಗಿ ಇವುಗಳನ್ನ ಹಂಚಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ನಿಂಗಪ್ಪ ಪಕಂಡಿ ಆರೋಪಿಸಿದ್ದಾರೆ

ಗ್ರಾಮದ 27 ಕ್ಕೂ ಹೆಚ್ಚು ಫಲಾನುಭವಿಗಳ ಹೆಸರುಗಳನ್ನು ಕೈಲಿ ಹಿಡ್ಕೊಂಡು ಅಧಿಕಾರಿಗಳ ಜೊತೆ ಹೋದರು ಇದಕ್ಕೆ ಸ್ಪಂದಿಸುತ್ತಿಲ್ಲ. ಸರ್ಕಾರದ ಅನುದಾನದಲ್ಲಿ ಬಂದಿರುವ ಕೋಳಿ ವಾಪಸ್ ನೀಡುವಂತೆ ಕೇಳಿದರೂ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲದೇ  ಗ್ರಾಮ ಪಂಚಾಯತಿ ಸದಸ್ಯ ಗೋಪಾಲ ಬಿದರಿ ಇವುಗಳನ್ನು ನಾವು ದುಡ್ಡು ಕೊಟ್ಟು ತಂದಿದ್ದೇವೆ ಎಂದು ಗ್ರಾಮದ ಜನರ ಬಳಿ ಹೇಳುತ್ತಿದ್ದರಂತೆ

ಇದನ್ನು ಓದಿ: ಗೋಶಾಲೆ ತೆರೆಯಲು ಮುಂದೆ ಬಂದರೆ ಸರ್ಕಾರದಿಂದ ಅನುದಾನ: ಸಚಿವ ಪ್ರಭು ಚೌವ್ಹಾಣ್

ಈ ಆರೋಪದ ಬಗ್ಗೆ ಗೋಪಾಲ ಅವರನ್ನು ಕೇಳಿದರೆ ಅವರೇ ಕೋಳಿ ಇಡುವುದಕ್ಕೆ ಜಾಗವಿಲ್ಲದೆ ನನ್ನ ಫಾರಂ ನಲ್ಲಿ ಕೋಳಿ ಇರಿಸಿದ್ದಾರೆ. ತೆಗೆದುಕೊಂಡು ಹೋಗುವುದಾಗಿ ಅವರೇ ಹೇಳಿದ್ದರು. ಹೀಗಾಗಿ ನಾನು ಸುಮ್ಮನೆ ಕುಳಿತಿದ್ದೇನೆ.  ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವರಿಗೆ ಹಿನ್ನಡೆಯಾಗಿದ್ದಕ್ಕೆ ನನ್ನ ಮೇಲೆ ಹೀಗೆ ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಕೋಳಿಗಳನ್ನು ನಾನು ಹೇಗೆ ಹಂಚಿಕೆ ಮಾಡಲಿ ಅಧಿಕಾರಿಗಳು ಹೇಳಿದರೆ ನಾನು ಕೊಟ್ಬಿಡುತ್ತೇನೆ ಎಂನ್ನುತ್ತಿದ್ದಾರೆ ಗ್ರಾಂ ಪಂ ಸದಸ್ಯ. ಗೋಪಾಲ.

ಒಟ್ಟಿನಲ್ಲಿ ಸದ್ಯ ಗ್ರಾಂ ಪಂ ಸದಸ್ಯ ಹಾಗೂ ಜಿಲ್ಲಾ ಪಂ ಸದಸ್ಯರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರೆ, ಸರ್ಕಾರಿ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ಸುಮ್ಮನೆ ಕುಳಿತಿದ್ದಾರೆ‌. ಈ ಮಧ್ಯೆ ಕುಕ್ಕುಟೋದ್ಯಮ ನಡೆಸಲು ಸರ್ಕಾರದಿಂದ ಬರುವ ಸಣ್ಣ ಯೋಜನೆಯೂ ಸಿಗದೆ ಹಿಂದುಳಿದ ಜನಾಂಗ ಕಂಗಾಲಾಗಿದೆ.
Published by: Seema R
First published: February 17, 2021, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories