• Home
  • »
  • News
  • »
  • state
  • »
  • Draupadi Murmu: ಭಾರತವನ್ನು ವಿಶ್ವಗುರು ಮಾಡಬೇಕಿದೆ, IIIT ಧಾರವಾಡ ದೇಶದ ಭವಿಷ್ಯಕ್ಕೆ ವಿಶೇಷ ಕೊಡುಗೆ ಎಂದ ರಾಷ್ಟ್ರಪತಿ

Draupadi Murmu: ಭಾರತವನ್ನು ವಿಶ್ವಗುರು ಮಾಡಬೇಕಿದೆ, IIIT ಧಾರವಾಡ ದೇಶದ ಭವಿಷ್ಯಕ್ಕೆ ವಿಶೇಷ ಕೊಡುಗೆ ಎಂದ ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪತಿ ಮರ್ಮು

ರಾಷ್ಟ್ರಪತಿ ದ್ರೌಪತಿ ಮರ್ಮು

ಜ್ಞಾನ ವಿಕಾಸ ಎಂದು ಐಐಐಟಿ ಘೋಷ ವಾಕ್ಯ ಇದೆ. ಜ್ಞಾನದಲ್ಲಿ ವಿಕಾಸ ಅಡಗಿದೆ. ಭಾರತವನ್ನು ವಿಶ್ವಗುರು ಮಾಡಬೇಕಿದೆ. ಅದಕ್ಕೆ ಪೂರಕವಾದ ಘೋಷವಾಕ್ಯ ಧಾರವಾಡ ಐಐಐಟಿ ಹೊಂದಿದೆ ಎಂದು ರಾಷ್ಟ್ರಪತಿ ಹೇಳಿದರು.

  • Share this:

ಧಾರವಾಡ : ರಾಷ್ಟ್ರದ ಪ್ರಥಮ ಪ್ರಜೆಯಾಗಿರೋ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಧಾರವಾಡದ ಐಐಐಟಿಯನ್ನು (IIIT) ಉದ್ಘಾಟನೆ ನೆರವೇರಿಸಿದರು. ಈ ವೇಳೆ‌ ವಿದ್ಯಾರ್ಥಿಗಳನ್ನು ಉದೇಶಿಸಿ ಮಾತನಾಡಿದ ಅವರು  ಮಾತನಾಡಿದ ರಾಷ್ಟ್ರಪತಿಗಳು, ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ತುಂಬಾ ಖುಷಿ ತಂದಿದೆ. ಐಐಐಟಿ ಧಾರವಾಡ ದೇಶದ ಭವಿಷ್ಯಕ್ಕೆ ವಿಶೇಷ ಕೊಡುಗೆ ನೀಡಲಿದೆ. ಇದನ್ನು ನಾನು ಹೆಮ್ಮೆಯಿಂದ ಹೇಳುವೆ ಎಂದ್ರು.


ಇಲ್ಲಿನ ವಿದ್ಯಾರ್ಥಿಗಳು ದೇಶಕ್ಕಾಗಿ ವಿವಿಧ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಬೆಳೆಯಲಿ. ಐಐಐಟಿಗೆ ಪ್ರಧಾನಿಗಳು 2019ರಲ್ಲಿ ಶಿಲಾನ್ಯಾಸ ಮಾಡಿದ್ದರು. ಈಗ ಶಾಶ್ವತ ಕ್ಯಾಂಪಸ್ ಆಗಿದೆ, ಜ್ಞಾನ ವಿಕಾಸ ಎಂದು ಐಐಐಟಿ ಘೋಷ ವಾಕ್ಯ ಇದೆ. ಜ್ಞಾನದಲ್ಲಿ ವಿಕಾಸ ಅಡಗಿದೆ. ಭಾರತವನ್ನು ವಿಶ್ವಗುರು ಮಾಡಬೇಕಿದೆ. ಅದಕ್ಕೆ ಪೂರಕವಾದ ಘೋಷವಾಕ್ಯ ಧಾರವಾಡ ಐಐಐಟಿ ಹೊಂದಿದೆ ಎಂದು ರಾಷ್ಟ್ರಪತಿ ಹೇಳಿದರು.


ಕ್ಯಾಂಪಸ್‌ಗಾಗಿ ಇಲ್ಲಿನ ರೈತರು ಸಹಕಾರ ನೀಡಿದ್ದಾರೆ


ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭಾಷಣ,  2015 ರಲ್ಲಿ ನಾವು ಐಐಐಟಿಗೆ ಮಂಜೂರು ಪಡೆದಿದ್ದೇವು. ಬಳಿಕ 2016 ರಿಂದ ಕ್ಲಾಸ್‌ಗಳು ಆರಂಭಗೊಂಡಿವೆ. ಈ ಸಂಸ್ಥೆಗೆ ಸುಧಾಮೂರ್ತಿಯವರು ಇನ್ಫೋಸಿಸ್‌ನಿಂದಲೂ ದೇಣಿಗೆ ನೀಡಿದ್ದಾರೆ. ಶಾಶ್ವತ ಕ್ಯಾಂಪಸ್‌ಗಾಗಿ ಇಲ್ಲಿನ ರೈತರು ಸಹಕಾರ ನೀಡಿದ್ದಾರೆ. ಇದರ ಫಲವಾಗಿ 2019 ರಲ್ಲಿ ಪ್ರಧಾನ ಮಂತ್ರಿಗಳು ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದರು.


ಐಐಟಿಗೂ ಪ್ರಧಾನಿ ಶಿಲಾನ್ಯಾಸ ಮಾಡಿದ್ದರು


ನಮ್ಮ 5 ವರ್ಷದ ಅವಧಿಯಲ್ಲೇ ಉದ್ಘಾಟನೆ ಆಗಬೇಕು ಎಂದು ಪ್ರಧಾನಿ ಹೇಳಿದ್ದರು. 5 ವರ್ಷದ ಅವಧಿಯಲ್ಲೇ ಐಐಐಟಿ ಮತ್ತು ಐಐಟಿ ಉದ್ಘಾಟನಾ ಆಗುತ್ತಾ ಎಂದು ಕೇಳಿದ್ದರು. ಈಗ  ಇದೇ ಅವಧಿಯೊಳಗೆ ಐಐಐಟಿ ಉದ್ಘಾಟನೆ ಮಾಡುತ್ತಿದ್ದೇವೆ ಅಂತಾ ಹೆಮ್ಮೆಯಿಂದ ಹೇಳುತ್ತೇವೆ. ಐಐಐಟಿ ಜೊತೆಗೆ ಧಾರವಾಡ ಐಐಟಿಗೂ ಪ್ರಧಾನಿ ಶಿಲಾನ್ಯಾಸ ಮಾಡಿದ್ದರು. ಇದೇ ಡಿಸೆಂಬರ್‌ನಲ್ಲಿ ನಾವು ಐಐಟಿ ಸಹ ಉದ್ಘಾಟನೆ ಮಾಡುತ್ತೇವೆ ಎಂದರು.


ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಕ್ಕೆ ಧನ್ಯವಾದ- ಸಿಎಂ


ನಂತರ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ ಅವರು, ಧಾರವಾಡದ ಐಐಐಟಿಯ ಉದ್ಘಾಟನೆಯನ್ನ ರಾಷ್ಟ್ರಪತಿ ಮಾಡಿದ್ದಾರೆ. ಆಸಕ್ತಿ‌ವಹಿಸಿ ಅವರು ನಮ್ಮಲ್ಲಿ ಬಂದಿದ್ದಾರೆ, ಅವರು ನಮ್ಮ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಕ್ಕೆ ಧನ್ಯವಾದ ಹೇಳಿದರು. ರಾಷ್ಟ್ರಪತಿಗಳು  ಬುಡಕಟ್ಟು ಜನಾಂಗದಿಂದ ಬಂದವರು, ಸರಳ‌ಜೀವಿ, ಅವರ ಬದುಕಲ್ಲಿ ಆದರ್ಶವೇ ಅವರ ಜೀವನ ಗುಟ್ಟು. ರಾಷ್ಟ್ರಪತಿ ಎಂದು ಆಯ್ಕೆಯಾದಾಗ ಅವರು ದೇವಸ್ಥಾನದಲ್ಲಿ ಸ್ವಚ್ಛತೆ ಮಾಡುತ್ತಿದ್ದರು. ಅವರ ಸರಳತೆಗೆ ಇದೇ ಸಾಕ್ಷಿ ಎಂದ್ರು.


ಹುಬ್ಬಳ್ಳಿಯ ಮೊದಲ ಮಹಿಳಾ ಎಂಜಿನಿಯರ್​ ಸುಧಾ ಮೂರ್ತಿ


ಐಐಟಿ ಬಹಳ‌ ಅವಶ್ಯಕತೆ ಇದೆ, ಐಟಿ ಬಿಟಿ ಹೆಚ್ಚಿದ್ದಿದ್ದು ಇಲ್ಲಿಯೇ. ನಮ್ಮ ದೇಶ ಅಭಿವೃದ್ಧಿಯ ದೇಶ, ನಮ್ಮ ಶಕ್ತಿ ಯುವಕರು, ನಮ್ಮ ದೇಶಕ್ಕೆ ಇದೇ ಭವಿಷ್ಯ. ಪ್ರಧಾನಿ ಅದಕ್ಕಾಗಿ ಇದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಮೋದಿ ಅವರು ಬಂದ ಮೇಲೆ ಶಾಪ ಹಾಕುವುದನ್ನ ಪರಿವರ್ತನೆ ಮಾಡಿದರು. ನೀವು ಬೆಳೆದು ದೇಶ‌ ಬಳಸಬೇಕು, ಐಟಿ ಬಿಟಿ ರಾಜ್ಯದಲ್ಲಿ ಬಹಳ ಬೆಳದಿದೆ. ಹುಬ್ಬಳ್ಳಿಯ ಮೊದಲ ಮಹಿಳಾ ಎಂಜಿನಿಯರ್​ ಸುಧಾ ಮೂರ್ತಿ. ಇದು ನಮ್ಮ ಶಕ್ತಿ, ಮನೆಯಲ್ಲಿ ಕುಳಿತುಕೊಳ್ಳುವದು ಮಹಿಳೆ ಕೆಲಸ ಅಲ್ಲಾ. ಈ ಕ್ಯಾಂಪಸ್ ನಲ್ಲಿ ಎಂ ಟೆಕ್ ಕೂಡಾ ಆರಂಭವಾಗಲಿ ಎಂದು ಕೇಂದ್ರ ರಾಜ್ಯ ಸರ್ಕಾರ ಆಶಯವಿದೆ. ದೇಶದ ಅತ್ಯುನ್ನತ ಐಐಐಟಿ ಇದಾಗಬೇಕು, ನಿಮ್ಮ ಶ್ರಮ ನಮಗೆ ಬೇಕು, ಅದನ್ನ ತಾವು ಮಾಡಿ. ಈ‌ ಸಂಸ್ಥೆ ಬರಲು ಇದಕ್ಕೆ ಬಹಳ ಜನರ ಶ್ರಮ ಇದೆ ಎಂದರು.


ಧಾರವಾಡ ಐಐಐಟಿಯ ಕಾರ್ಯಾಧ್ಯಕ್ಷೆಯಾಗಿರುವ ಸುಧಾಮೂರ್ತಿ ಅವರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ರಾಜ್ಯಪಾಲರಿಗೆ, ಸಿಎಂ ಹಾಗೂ ಕೇಂದ್ರ ಸಚಿವರುಗೆ ವಿಶೇಷವಾದ ಕೌದಿಯನ್ನು ಉಡುಗೊರೆ ನೀಡಿದ್ರು. ಅಲ್ಲದೇ ರಾಷ್ಟ್ರಪತಿಗಳು ಸಹ ಕೌದಿ ಹಾಗೂ ಒಂದು ಪುಸ್ತಕವನ್ನು ಉಡುಗೊರೆ ನೀಡಿದರು.

Published by:ಪಾವನ ಎಚ್ ಎಸ್
First published: