ಇವರು ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು (Pyate hudgir halli life) ರಿಯಾಲಿಟಿ ಷೋ (Reality Show) ನಲ್ಲಿ ಭಾಗಿಯಾಗಿದ್ದ ಸ್ಪರ್ಧಿ. ಆ ನಟಿ (Actress) ಈಗ ಪ್ಯಾಟೆ ಬಿಟ್ಟು ಹಳ್ಳಿಗೆ ಬಂದು ಹೆರಿಗೆ ಮಾಡಿಸಿಕೊಂಡಿದ್ದಾರೆ. ಆದ್ರೆ ಈ ಬಾರಿ ರಿಯಾಲಿಟಿ ಷೋ ಅಥವಾ ಕೇವಲ ನಟನೆಗಾಗಿ ಮಾತ್ರ ಅಲ್ಲಾ ನಿಜವಾಗಿಯು ಹಳ್ಳಿಯಲ್ಲಿ (Village) ಹೆರಿಗೆ ಮಾಡಿಸಿಕೊಂಡಿದ್ದಾರೆ. ಹಾಗಾದ್ರೆ ಆ ನಟಿ ಯಾರು, ಅವರು ಹಳ್ಳಿಯಲ್ಲಿ ಏಕೆ ಹೆರಿಗೆ ಮಾಡಿಸಿಕೊಂಡ್ರು ಅಂತ ಯೋಚಿಸ್ತಿದ್ದೀರಾ..? ಇದ್ರ ಇಂಟ್ರಸ್ಟಿಂಗ್ ರಿಪೋರ್ಟ್ ಇಲ್ಲಿದೆ ನೋಡಿ. ಕೆಲ ವರ್ಷಗಳ ಹಿಂದೆ ಖಾಸಗಿ ವಾಹಿನಿಯೊಂದರ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಎಂಬ ರಿಯಾಲಿಟಿ ಷೋ ಎಲ್ಲರ ಮನೆ ಮಾತಾಗಿತ್ತು. ಆ ರಿಯಾಲಿಟಿ ಷೋ ನಲ್ಲಿ ಮಿಂಚಿದ್ದ ಮಂಡ್ಯದ ಹುಡ್ಗಿ ಪೂರ್ಣಿಮಾ (Actress Purnima) ಒಂದಷ್ಟು ತಮ್ಮದೆಯಾದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.
ಇದಾದ ಬಳಿಕ ಹಲವು ಪ್ರಖ್ಯಾತ ಧಾರವಾಹಿಗಳು ಸೇರಿದಂತೆ ಸಿನಿಮಾಗಳಲ್ಲೂ ಪೂರ್ಣಿಮಾ ಅವರು ನಟಿಸಿದ್ದಾರೆ. ಪೂರ್ಣಿಮಾ ಮೂಲತಃ ಮಂಡ್ಯ ಜಿಲ್ಲೆಯವರಾದರೂ ಸಹ ಅವರು ಬೆಂಗಳೂರಿನ ನಿವಾಸಿಯಾಗಿದ್ದಾರೆ.
ಹೆರಿಗೆ ಮಾಡಲು ಕಷ್ಟ ಎಂದಿದ್ದ ಬೆಂಗಳೂರಿನ ವೈದ್ಯರು
ಕಳೆದ ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪೂರ್ಣಿಮಾ ಗರ್ಭಿಣಿಯಾಗಿದ್ದರು. ಹೀಗಾಗಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಹೋಗಿ ತಪಾಸಣೆ ಕೂಡ ಮಾಡಿಸಿದ್ದರು. ಆದ್ರೆ ಹೆರಿಗೆ ದಿನ ಹತ್ತಿರವಾಗ್ತಿದ್ದಂತೆ ವೈದ್ಯರು ಪ್ಲಾಸಂಟಾ ಕೆಳಗೆ ಬಂದಿದೆ. ಹೀಗಾಗಿ ಹೆರಿಗೆ ಮಾಡಿದ್ರೆ ತಾಯಿ ಅಥವಾ ಮಗುವಿಗೆ ತೊಂದರೆಯಾಗುತ್ತೆ ಎಂದಿದ್ದಾರೆ.
ಇದನ್ನೂ ಓದಿ: Karnataka Politics: ಈ ಕಾರಣಕ್ಕೆ ಜಿ ಟಿ ದೇವೇಗೌಡರ ಮೇಲೆ ಮುನಿಸಿಕೊಂಡ್ರಾ ಸಿದ್ದರಾಮಯ್ಯ?
ಆ ಬಳಿಕ ನಟಿ ಪೂರ್ಣಿಮಾ ಬೆಂಗಳೂರಿನ ಅನೇಕ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ ತಜ್ಞರನ್ನ ಕೂಡ ಸಂಪರ್ಕಿಸಿದ್ದಾರೆ. ಆದ್ರೆ ಆ ಎಲ್ಲಾ ವೈದ್ಯರು ನಿಮಗೆ ಪ್ಲಸಂಟಾ ಕೆಳಗೆ ಬಂದಿದ್ದು ಹೆರಿಗೆ ವೇಳೆ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ಯಾಟೆ ವೈದ್ಯರ ಮಾತಿಗೆ ಹೆದರಿದ ಪೂರ್ಣಿಮಾ ಕೀಲಾರ ಗ್ರಾಮಕ್ಕೆ ದೌಡು
ಇನ್ನು ಬೆಂಗಳೂರಿನ ವೈದ್ಯರು ಈ ರೀತಿ ಹೇಳ್ತಿದ್ದಾರೆ ಎಂದು ಪೂರ್ಣಿಮಾ ಹತ್ತಿರದ ಸಂಬಂಧಿ ಒಬ್ಬರ ಬಳಿ ಅಳಲು ತೋಡಿಕೊಂಡಿದ್ದರು. ಆ ಬಳಿಕ ಅವರು ನಮ್ಮ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಅಲ್ಲಿನ ವೈದ್ಯರ ಚೆನ್ನಾಗಿ ನೋಡ್ತಾರೆ. ಜೊತೆಗೆ ಎಲ್ಲಾ ರೀತಿಯ ಸೌಕರ್ಯಗಳಿವೆ ಎಂದು ತಿಳಿಸಿದ್ದರು.
ನಂತ್ರ ಅವರ ಮಾತಿನಂತೆ ಬೆಂಗಳೂರಿನಿಂದ ಮಂಡ್ಯ ತಾಲೂಕಿನ ಕೀಲಾರ ಗ್ರಾಮಕ್ಕೆ ಆಗಮಿಸಿದ ಪೂರ್ಣಿಮಾ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ನಂತ್ರ ವೈದ್ಯರು ನಟಿ ಪೂರ್ಣಿಮಾ ಅವರಿಗೆ ಧೈರ್ಯ ನೀಡಿ ಈಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಸದ್ಯ ನಟಿ ಪೂರ್ಣಿಮಾ ಅವರಿಗೆ ಗಂಡು ಮಗು ಜನನವಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.
ಹಳ್ಳಿ ವೈದ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಪೂರ್ಣಿಮಾ
ಇನ್ನು ಹೆರಿಗೆ ಬಳಿಕ ವೈದ್ಯರ ಬಗ್ಗೆ ಪೂರ್ಣಿಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸಿಗದ ಟ್ರೀಟ್‌ಮೆಂಟ್ ಇಲ್ಲಿ ಸಿಗುತ್ತಿದೆ. ಎಷ್ಟು ಆಸ್ಪತ್ರೆಗಳನ್ನ ಸುತ್ತಿದರೂ ಅದು, ಇದು ಸಮಸ್ಯೆ ಎಂದು ಹೇಳ್ತಿದ್ರು. ಆದ್ರೆ ಕೀಲಾರ ಗ್ರಾಮದ ಆಸ್ಪತ್ರೆಯಲ್ಲಿ ನನಗೆ ಉತ್ತಮವಾದ ಚಿಕಿತ್ಸೆ ಸಿಕ್ಕಿದೆ. ಇಲ್ಲಿನ ವೈದ್ಯರು ಕೂಡ ಚೆನ್ನಾಗಿ ನೋಡ್ಕೋಂಡಿದ್ದಾರೆ. ಸ್ವಚ್ಛತೆ ಕೂಡ ಅದ್ಭುತವಾಗಿದೆ ಎಂದು ಕೀಲಾರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಧನಂಜಯ್ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಧನಂಜಯ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲೇ ಮಂಡ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಹೆರಿಗೆ ವಿಭಾಗ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಪಕ್ಕದ ಜಿಲ್ಲೆಗಳಾದ ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಹಾಸನ ಜಿಲ್ಲೆಗಳಿಂದ ಹೆರಿಗೆಗಾಗಿ ಮಂಡ್ಯ ಜಿಲ್ಲೆಗೆ ಆಗಮಿಸ್ತಿದ್ದಾರೆ ಎಂದು ತಿಳಿಸಿದ್ರು.
ಇದನ್ನೂ ಓದಿ: Chikkamagaluru: ಮಳೆಗಾಲದಲ್ಲಿ ಮರಗಳ ಸಾಗಾಟದಿಂದ ಭೂಕುಸಿತದ ಭೀತಿ; ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕಿ
ಅಲ್ಲದೆ ಪ್ರತಿ ತಾಲ್ಲೂಕು ಆಸ್ಪತ್ರೆ ಜೊತೆಗೆ ಹೋಬಳಿ ಮಟ್ಟದ ಆರೋಗ್ಯ ಕೇಂದ್ರಗಳಲ್ಲೂ ಸಹ ಹೆರಿಗೆ ಮಾಡಲಾಗ್ತಿದೆ ಎಂದು ತಿಳಿಸಿದ್ರು. ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಸಿಝೇರಿಯನ್ ಎಂಬ ಮೆಡಿಕಲ್ ಮಾಫಿಯಾದ ನಡುವೆ, ಒಂದು ರೂಪಾಯಿ ಖರ್ಚಿಲ್ಲದಂತೆ ಹೆರಿಗೆ ಮಾಡಿದ ಕೀಲಾರ ಗ್ರಾಮದ ವೈದ್ಯರ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ