ಮಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಾಲನೆ; ಬಲಿಯಾದ ಅಮಾಯಕ ಜೀವ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಪಿಡಬ್ಲೂಡಿ ಇಲಾಖೆಯಲ್ಲಿ ಬಂಟ್ವಾಳ ಎ.ಇ.ಇ ಆಗಿರುವ ಷಣ್ಮುಗಂ ತಪ್ಪು ಮಾಡಿರುವುದಲ್ಲದೇ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ವಿಷಯ ತಿಳಿದು ಮಫ್ತಿಯಲ್ಲಿದ್ದ ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ತೆರೆಳಿದ್ದಾರೆ.

  • Share this:

ಮಂಗಳೂರು(ಮಾ.29): ಕುಡಿತದ ಚಟ ಒಮ್ಮೆ ಶುರುವಾಯಿತು ಅಂದ್ರೆ ಅದರಿಂದ ಹಾನಿಯೇ ಹೆಚ್ಚು. ಅದೇ ರೀತಿ ಇಲ್ಲೊಬ್ಬ ಪಿಡಬ್ಲೂಡಿ ಎಂಜಿನಿಯರ್ ಕಂಠಪೂರ್ತಿ ಕುಡಿದು ಕಾರನ್ನು ಡ್ರೈವ್ ಮಾಡಿ ಯಮನಾಗಿ ಎರಗಿದ್ದಾನೆ. ಇಂಜಿನಿಯರ್‌ನ ದುಡ್ಡಿನ ಮದಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ.


ಈ ಸಿಸಿಕ್ಯಾಮಾರದ ದೃಷ್ಯವನ್ನೊಮ್ಮೆ ನೋಡಿ, ಎಂತವರ ಎದೆಯನ್ನು ಒಮ್ಮೆಗೆ ಜಲ್ ಎನಿಸುವಂತಿದೆ. ತನ್ನ ಪಾಡಿಗೆ ನಡೆದುಕೊಂಡು ಬರುತ್ತಿದ್ದ ಪಾದಚಾರಿಗೆ ಹಿಂಬದಿಯಿಂದ ಯಮನಂತೆ ಬಂದೆರಗಿದ ಕಾರು. ಡಿಕ್ಕಿಯಾದ ರಭಸಕ್ಕೆ ಒಂದಷ್ಟು ದೂರ ಬಿದ್ದು ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. ಈ ಭೀಕರ ಅಪಘಾತ ನಡೆದಿರುವುದು ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ. BSNL ನ ನಿವೃತ್ತ ಉದ್ಯೋಗಿ ಎ.ಆನಂದ್ ಎಂಬವರೇ ಈ ಘಟನೆಯಲ್ಲಿ ಮೃತಪಟ್ಟ ದುರ್ದೈವಿ.


ಆನಂದ್ ನಿವೃತ್ತಿಯ ಬಳಿಕವೂ ಉಡುಪಿಯಲ್ಲಿ ಉದ್ಯೋಗವೊಂದನ್ನು ಮಾಡಿ ನಿತ್ಯ ಮಂಗಳೂರಿನ ತಮ್ಮ ಮನೆಗೆ ವಾಪಸಾಗುತ್ತಿದ್ದರು. ನಿನ್ನೆಯೂ ಎಂದಿನಂತೆ ರಾತ್ರಿ ಬಸ್‌ನಿಂದ ಇಳಿದು ಮನೆಗೆ ನಡೆದುಕೊಂಡು ಬರ್ತಿದ್ರು. ಅದ್ರೆ ಅಷ್ಟರಲ್ಲಾಗಲೇ ಪಿಡಬ್ಲೂಡಿ ಎಂಜಿನಿಯರ್ ಷಣ್ಮುಗಂ ಕಂಠಪೂರ್ತಿ ಕುಡಿದು ಕಾರನ್ನು ಡ್ರೈವ್ ಮಾಡಿ ಯಮನಾಗಿ ಬಂದೆರಗಿದ್ದಾನೆ. ನಡೆದುಕೊಂಡು ಬರುತ್ತಿದ್ದ ಆನಂದ್ ಅವರಿಗೆ ಹಿಂಬದಿಯಿಂದ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಪಿಡಬ್ಲೂಡಿ ಇಲಾಖೆಯಲ್ಲಿ ಬಂಟ್ವಾಳ ಎ.ಇ.ಇ ಆಗಿರುವ ಷಣ್ಮುಗಂ ತಪ್ಪು ಮಾಡಿರುವುದಲ್ಲದೇ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ವಿಷಯ ತಿಳಿದು ಮಫ್ತಿಯಲ್ಲಿದ್ದ ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ತೆರೆಳಿದ್ದಾರೆ. ಕಮೀಷನರ್ ಬಳಿಯೇ ಈತ ವಾಹನ ಚಾಲನೇ ಮಾಡುತ್ತಿದ್ದದ್ದು ನನ್ನ ತಮ್ಮ ಅಂತಾ ಹೇಳಿ ದಿಕ್ಕು ತಪ್ಪಿಸೋ ಯತ್ನ ಮಾಡಿದ್ದಾರೆ.


Maski Bypoll: ಮಸ್ಕಿ ಉಪಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಯ ಭರಾಟೆ; ಕೋವಿಡ್ ನಿಯಮಾವಳಿಗಳ ಉಲ್ಲಂಘನೆ


ಆದ್ರೆ ಸ್ಥಳೀಯರ ಮಾಹಿತಿ, ಸಿಸಿಟಿವಿ ಫೂಟೇಜ್, ಸಾಕ್ಷಾಧಾರ ಕಲೆ ಹಾಕಿ ಅಪಘಾತ ನಡೆಸಿರುವುದು ಈತನೇ ಎಂಬುದನ್ನು ಪೊಲೀಸ್ ಅಧಿಕಾರಿಗಳು ಕನ್ಫರ್ಮ್ ಮಾಡಿಕೊಂಡಿದ್ದಾರೆ. ಹೀಗಾಗಿ ಆರೋಪಿಯನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಸುಂದರ ಸಂಸಾರದ ನೆಮ್ಮದಿಯನ್ನು ಹಾಳು ಮಾಡಿದ ಪಾಪಿ ಇಂಜಿನಿಯರ್ ವಿರುದ್ಧ ಮಂಗಳೂರು ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆನಂದ್ ಮತ್ತು ಅವರ ಪತ್ನಿ ಇಬ್ಬರೇ ಮಂಗಳೂರಿನಲ್ಲಿ ವಾಸವಿದ್ದು,ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ವಿಧಿಯ ಕ್ರೂರ ಲೀಲೆ ಬಡಪಾಯಿ ಕುಟುಂಬವನ್ನು ನರಕದ ಕೂಪಕ್ಕೆ ತಳ್ಳಿದೆ.


ಆರೋಪಿ ಷಣ್ಮುಗನ ಕುಡಿತದ ಚಟಕ್ಕೆ ಅಮಾಯಕ ಬಲಿಯಾಗಿದ್ದು, ಮಂಗಳೂರು ನಗರ ಪೊಲೀಸ್ ಎನ್ ಶಶಿಕುಮಾರ್ ಮಮ್ಮಲ ಮರಗಿದ್ದಾರೆ. ಬಡ ಕುಟುಂಬದ ಕಣ್ಣೀರಿನ ವ್ಯಥೆಗೆ ವಿಶಾದ ವ್ಯಕ್ತಪಡಿಸಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ ಶಶಿಕುಮಾರ್ ಹಲವು ಕೊಲೆ ಕೇಸ್ ಗಳನ್ನು ನೋಡಿದ್ದೇನೆ,ಹಲವು ಪ್ರಕರಣಗಳನ್ನು ಗಮನಿಸಿದ್ದೇನೆ..ಆದರೆ ಈ ಕುಟುಂಬದ ನೆಮ್ಮದಿ ಅನ್ಯಾಯವಾಗಿ ಹಾಳಾಗಿರೋದು ಕಂಡು ಹೃದಯ ಕಲಕಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.


ಆನಂದ್ ಹಾಗೂ ಪತ್ನಿ ಲಲಿತಾ ಇಬ್ಬರೇ ಮಂಗಳೂರಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದ್ರೆ ಇಂಜಿನೀಯರ್‌ನ ಕುಡಿತದ ಮತ್ತಿಗೆ ಇದೀಗ ಲಲಿತಾ ಅನಾಥವಾಗಿದ್ದಾರೆ. ಗಂಡ ಇನ್ಮುಂದೆ ಇಲ್ಲ ಎಂಬುದನ್ನು ನೆನೆದು ಇನ್ನು ಯಾರಿಗಾಗಿ ಬದುಕಲಿ ಎಂದು ಕಣ್ಣೀರಿಡುತ್ತಿದ್ದಾರೆ. ಒಟ್ಟಿನಲ್ಲಿ ಇನ್ನೊಬ್ಬರ ಸಂತಸದ ಬದುಕನ್ನು ಕಿತ್ತುಕೊಳ್ಳುವ ಇಂತಹ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕಾಗಿದೆ.

Published by:Latha CG
First published: