ಮಧುರ ಕಂಠದ‌ ಮೂಲಕ ದೇಶ-ವಿದೇಶಗಳಲ್ಲಿ ಮನ್ನಣೆ ಗಳಿಸಿದ ಪುತ್ತೂರಿನ ಗಾಯಕ

ಜ್ಯೂನಿಯರ್ ಯೇಸುದಾಸ್ ಎಂದೇ ಪರಿಚಿತಗೊಂಡಿರುವ ಇವರು  ಪುತ್ತೂರು ತಾಲೂಕಿನ ಕಲ್ಲೇಗ ನಿವಾಸಿ ಜಗದೀಶ್ ಆಚಾರ್ಯ

ಜಗದೀಶ್ ಆಚಾರ್ಯ

ಜಗದೀಶ್ ಆಚಾರ್ಯ

  • Share this:
ಪುತ್ತೂರು (ಜ. 30): ಸಂಗೀತ ಶಾರದೆ ಎಲ್ಲರಲ್ಲೂ ನೆಲೆಸೊಲ್ಲ, ನೆಲೆಸಿದರೆ ಆತನನ್ನು ಸಂಗೀತದ ಉತ್ತುಂಗ ಶಿಖರಕ್ಕೇರಿಸುತ್ತದೆ ಎನ್ನುವುದು ಜಗಜ್ಞಾಹೀರಾದ ಮಾತು. ಇಂಥಹ ಸಂಗೀತ ಶಾರದೆಯನ್ನು ತನ್ನ ಕಂಠದಲ್ಲಿ ತುಂಬಿಕೊಂಡಿರುವ ಗಾಯಕನೊಬ್ಬ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ತನ್ನ ಗಾಯನದ ಮೂಲಕ ದೇಶ ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಈ ಯುವ ಗಾಯಕನಿಗೆ ಮಧುರಕಂಠಕ್ಕೆ ಮನಸೋತು ಸಾವಿರಾರು ಪ್ರಶಸ್ತಿಗಳು ಈತನನ್ನು ಹರಸಿಬಂದಿದೆ. ಜ್ಯೂನಿಯರ್ ಯೇಸುದಾಸ್ ಎಂದೇ ಪರಿಚಿತಗೊಂಡಿರುವ  ಇವರು  ಪುತ್ತೂರು ತಾಲೂಕಿನ ಕಲ್ಲೇಗ ನಿವಾಸಿ ಜಗದೀಶ್ ಆಚಾರ್ಯ. ಹುಟ್ಟಿನಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿರುವ ಜಗದೀಶ್ ಆಚಾರ್ಯ ಕಲೆಯ ಜೊತೆಗೆ ಸಂಗೀತವನ್ನೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದವರು. ಸಂಗೀತ ಶಾರದೆ ಎಲ್ಲರಲ್ಲೂ ನೆಲೆಸುವುದಿಲ್ಲ, ಆದರೆ ನೆಲೆಸಿದವರನ್ನು ಸಂಗೀತದ ಉತ್ತುಂಗ ಶಿಖರವನ್ನು ಹತ್ತಿಸಿಯೇ ಬಿಡುತ್ತಾಳೆ ಎನ್ನುವುದು ಹಿರಿಯರ ಮಾತು. ಇದರಂತೆ ಜಗದೀಶ್ ಆಚಾರ್ಯರ ಮಧುರಕಂಠದ ಮೂಲಕ ಶಾರದೆ ಹೊರಹೊಮ್ಮುತ್ತಿದ್ದು, ಈ ಕಾರಣಕ್ಕಾಗಿಯೇ ಈ ಯುವಕ ಇದೀಗ ದೇಶ ಹಾಗೂ ವಿದೇಶಗಳಲ್ಲಿ ತನ್ನ ಸಿರಿಕಂಠದ ಮೂಲಕ ಗುರುತಿಸಿಕೊಂಡಿದ್ದಾರೆ.

ಶಾಸ್ತ್ರೀಯ ಹಾಗೂ ಕರ್ನಾಟಕ್ ಸಂಗೀತವನ್ನು ಕರಗತ ಮಾಡಿಕೊಂಡಿರುವ ಜಗದೀಶ್ ಸಂಗೀತದ ಎಲ್ಲಾ ಸ್ತರಗಳಲ್ಲೂ ತನ್ನ ಸಂಗೀತದ ಸುಧೆ ಹರಿಸುತ್ತಾರೆ. ಸುಗಮ ಸಂಗೀತ, ಭಾವಗೀತೆ, ದಾಸರಪದ, ಚಲನಚಿತ್ರ ಗೀತೆ ಹೀಗೆ ಎಲ್ಲಾ ಪ್ರಕಾರದ ಸಂಗೀತದಲ್ಲಿ ಸಂಗೀತಪ್ರೀಯರ ಮನಸೂರೆಗೊಳ್ಳುತ್ತಿರುವ ಈ ಗಾಯಕನ ಸಿರಿಗಂಟಕ್ಕೆ ಮನಸೋತು ಈಗಾಗಲೇ ಎರಡು ಚಿನ್ನದ ಪದಕ ಹಾಗೂ ಸಾವಿರಾರು ಪ್ರಶಸ್ತಿಗಳು ಇವರ ಮುಡಿಗೇರಿದೆ.

ದೇಹದ ಅಣು ಅಣುವಿನಲ್ಲೂ ಸಂಗೀತದ ಸುಧೆಯನ್ನು ಹರಿಸುವ ಯೇಸುದಾಸರ ಸ್ವರವನ್ನು ಅನುಕರಣ ಮಾಡುವ ಮೂಲಕ ಜ್ಯೂನಿಯರ್ ಯೇಸುದಾಸ್ ಎನ್ನುವ ನಾಮಾಂಕಿತದಲ್ಲೂ ಜಗದೀಶ್ ಪುತ್ತೂರು ಗುರುತಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಹಾಡಿರುವ ಜೊತೆಗೆ ಹಲವು ಬೃಹತ್ ಸಂಗೀತ ವೇದಿಕೆಗಳಲ್ಲಿ ತನ್ನ ಸಂಗೀತದ ಸಿರಿಕಂಠವನ್ನು ಹರಿಸಿದ ಖ್ಯಾತಿ ಇವರದಾಗಿದೆ. ಹಲವು ಟಿವಿ ವಾಹಿನಿಗಳ ಶೋಗಳಲ್ಲೂ ಹಾಡಿ ವೀಕ್ಷಕರಿಂದ ಮನ್ನಣೆ ಗಳಿಸಿದ್ದಾರೆ.

ಇದನ್ನು ಓದಿ: ಬಾಗಲಕೋಟೆ ಯುಕೆಪಿ ಕಚೇರಿಯಲ್ಲಿ ಭಾರೀ ಮೊತ್ತದ ಚೆಕ್​ ಪತ್ತೆ; ಲಂಚದ ಆಸೆಗಾಗಿ ಅಧಿಕಾರಗಳ ಬಳಿಯಿದ್ದ ಸಂತ್ರಸ್ತರ ಚೆಕ್​ಗಳು

ಯೇಸುದಾಸ್ ಅವರ ಕಂಠಕ್ಕೆ ಮನಸೋತಿದ್ದ ಜಗದೀಶ್ ಹೆಚ್ಚಾಗಿ ಯೇಸುದಾಸ್ ಹಾಡುವ ಹಾಡುಗಳನ್ನೇ ತನ್ನ ಗಾಯನಕ್ಕಾಗಿ ಬಳಸುತ್ತಾರೆ. ಇಮೋಶನಲ್ ನಿಂದ ಮೆಲೋಡಿ ಸಾಂಗ್ ಗಳನ್ನು ಹಾಡುವ ಜಗದೀಶ್ ರ ಧ್ವನಿಯೂ ಯೇಸುದಾಸ್ ರಂತೆಯೇ ಹೋಲುತ್ತಿದ್ದು , ಇವರು ಹಾಡುವ ಎಲ್ಲಾ ಹಾಡುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗುತ್ತಿವೆ. ಹಲವು ರಾಗಮಾಲಿಕೆಗಳಿಗೂ ಧ್ವನಿ ನೀಡಿರುವ ಜಗದೀಶ್ ಪುತ್ತೂರು ದಕ್ಷಿಣಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಹೆಸರುವೆತ್ತ ಗಾಯಕರೂ ಆಗಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಹುಟ್ಟಿನಿಂದಲೇ ಕಲೆ ಹಾಗೂ ಸಂಗೀತದಲ್ಲಿ ಪ್ರಾವಿಣ್ಯತೆ ಪಡೆಯುವ ಮೂಲಕ ಜಗದೀಶ್ ಸಂಗೀತ ಲೋಕದಲ್ಲಿ ಪುತ್ತೂರಿನ ಕಣ್ಮಣಿಯಾಗಿ ಹೊರಹೊಮ್ಮಿದ್ದಾರೆ. ಸಂಗೀತದಲ್ಲಿರುವ ಈತನ ಹಿಡಿತವನ್ನು ಗುರುತಿಸಿ ಇನ್ನಷ್ಟು ಅವಕಾಶಗಳು ಈ ಯುವಕನಿಗೆ ದೊರೆಯಬೇಕಿದೆ ಎನ್ನುವುದು ಸಂಗೀತಪ್ರಿಯರ ಆಶಯವಾಗಿದೆ.
Published by:Seema R
First published: