ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ, ಇದೇ ಮೊದಲ ಬಾರಿಗೆ ವಿಧಾನಸಬೆಗೆ ಆಯ್ಕೆಯಾಗಿರುವ ಕೋಡಿಂಬಾಡಿ ಅಶೋಕ್ ರೈ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳದೆ ಅವ್ಯವಸ್ಥೆಯಿಂದ ಕೂಡಿರುವ ಹಿನ್ನೆಲೆ ಗರಂ ಆಗಿರುವ ಶಾಸಕ ಅಶೋಕ್ ರೈ ಕೂಡಲೇ ಕಾಮಗಾರಿಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದ್ದಾರೆ.
ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿರುವುದನ್ನು ಗಮನಿಸಿದ ಶಾಸಕ ಅಶೋಕ್ ರೈ, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಪ್ಪಿನಂಗಡಿ ಮತ್ತು ಪುತ್ತೂರು ರಸ್ತೆಯ ಕಾಮಗಾರಿ ವಿಳಂಬ ಆಗಿರುವ ಹಿನ್ನೆಲೆ ಅಧಿಕಾರಿ ಮತ್ತು ಗುತ್ತಿಗೆದಾರನ ವಿರುದ್ಧ ಅಸಮಾಧಾನಗೊಂಡ ಅಶೋಕ್ ರೈ ಆಮೆಗತಿಯ ಕಾರ್ಯವೈಖರಿ ವಿರೋಧಿಸಿ ಕಿಡಿಕಾರಿದರು.
ಇದನ್ನೂ ಓದಿ: Harish Poonja: ಸಿಎಂ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜಾ! ಪ್ರಕರಣ ದಾಖಲು
ಮಳೆಗಾಲ ಆರಂಭವಾದರೂ ಡ್ರೈನೇಜ್ ಸಮಸ್ಯೆ ಸರಿಪಡಿಸಿಲ್ಲ. ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಏನಿದು ನಿಮ್ಮ ಅವ್ಯವಸ್ಥೆ ಎಂದು ಪ್ರಶ್ನಿಸಿದ ಶಾಸಕರು, ಎಷ್ಟು ದಿನದಲ್ಲಿ ಈ ಕೆಲಸ ಮುಗಿಸ್ತೀರಿ ಅಂತ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಮಜಾಯಿಷಿ ನೀಡಲು ಬಂದ ಅಧಿಕಾರಿಗೆ, ‘'ನನ್ನನ್ನ ಸಮಾಧಾನ ಮಾಡಲು ನೀವು ಹೇಳೋದು ಬೇಡ' ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Dr CN Ashwath Narayan: ಸಿದ್ದರಾಮಯ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ, ಅಶ್ವತ್ಥ್ ನಾರಾಯಣ್ ವಿರುದ್ಧ ದಾಖಲಾಯ್ತು ಎಫ್‌ಐಆರ್!
ಡ್ರೈನೇಜ್ ಮತ್ತು ಡಿವೈಡರ್ ಕಾಮಗಾರಿ ವಿಚಾರದಲ್ಲೂ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಶಾಸಕರು, ‘ಅಶೋಕ್ ರೈಗೆ ಓಟ್ ಹಾಕಿ ಸಮಸ್ಯೆ ಆಯ್ತು ಅಂತ ಜನ ಹೇಳಬಾರದು, ನಿಮಗೆ ಆಗುತ್ತಾ ಇಲ್ವಾ ಹೇಳಿ, ಯಾವಾಗ ಮುಗಿಸ್ತೀರಾ ಹೇಳಿ ಅಂತ ಖಡಕ್ ಆಗಿ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ