Puttur: ಸಮಾಧಿ ಮೇಲಿನ ಕಲ್ಲುಗಳಿಗೆ ಶಿವಲಿಂಗವನ್ನು ಹೋಲಿಸಿದ ಕಾಂಗ್ರೆಸ್ ನಾಯಕ; ದಾಖಲಾಯ್ತು ದೂರು

ಮಸೀದಿಯ‌ ಖಬರ್ ಸ್ತಾನದಲ್ಲಿ (ಮುಸಲ್ಮಾನರ ಶವ ಹೂಳುವ ಜಾಗ) ಶವ ಹೂತ ಬಳಿಕ ಶವದ ತಲೆ ಪಕ್ಕದಲ್ಲಿ ಮತ್ತು ಶವದ ಕಾಲಿನ‌ ಪಕ್ಕದಲ್ಲಿ ಎರಡು ಗೋಲಾಕಾರದ ಕಲ್ಲುಗಳನ್ನು ಇಡಲಾಗುತ್ತದೆ.

ಕಾಂಗ್ರೆಸ್ ನಾಯಕರ ಸುದ್ದಿಗೋಷ್ಟಿ

ಕಾಂಗ್ರೆಸ್ ನಾಯಕರ ಸುದ್ದಿಗೋಷ್ಟಿ

  • Share this:
ದೇಶದಲ್ಲಿ ಜ್ಞಾನವ್ಯಾಪಿ ಮಸೀದಿಯ ವಿವಾದ (Gyanvapi Mosque Controversy) ಆರಂಭಗೊಂಡ ಬಳಿಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಹಲವಾರು ಪ್ರಕರಣಗಳು ನಡೆಯುತ್ತಲೇ ಇದೆ. ಅದರಲ್ಲೂ ಹಿಂದೂಗಳ (Hindu) ಪವಿತ್ರ ಸಂಕೇತವಾದ ಮತ್ತು ಅತ್ಯಂತ ನಂಬಿಕೆಯ ಶಿವಲಿಂಗವೇ (Shivalinga) ಕೆಲವರ ಟಾರ್ಗೆಟ್ ಆಗಿ ಬದಲಾಗಿದೆ. ಶಿವಲಿಂಗವನ್ನು ರಸ್ತೆ ಬದಿಯಲ್ಲಿ ಇಡುವ ಮೈಲುಗಲ್ಲಿಗೆ, ಅಣು ಸ್ಥಾವರದಲ್ಲಿರುವ ಕುಲುಮೆಗೆ ಹೀಗೆ ಎಲ್ಲದಕ್ಕೂ ಹೋಲಿಸಿ ಅವಹೇಳನ ಮಾಡುವ ಪ್ರಕ್ರಿಯೆ ಮುಂದುವರಿದಿದೆ. ಈ ಸಂಬಂಧ ದೇಶದಾದ್ಯಂತ ಇಂಥ ಮನಸ್ಥಿತಿಯ ಜನರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ, ಯಾರೂ ಈ ಬಗ್ಗೆ ಹೆಚ್ಚು ಗಂಭೀರವಾದಂತೆ ಕಾರಣುತ್ತಿಲ್ಲ. ಇಂಥಹುದೇ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Beltangadi, Dakshina Kannada) ತಾಲೂಕಿನಲ್ಲೂ ಬೆಳಕಿಗೆ‌ ಬಂದಿದ್ದು, ಕಾಂಗ್ರೆಸ್ ಮುಖಂಡನೋರ್ವ (Congress Leader) ಶಿವಲಿಂಗದ ಬಗ್ಗೆ ತನ್ನ ನಾಲಗೆಯನ್ನು ಹರಿಬಿಟ್ಟಿದ್ದಾನೆ.

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ ಎಂಬಾತ ಸುದ್ದಿಗೋಷ್ಠಿಯಲ್ಲಿ ಶಿವಲಿಂಗದ ಬಗ್ಗೆ ಅವಹೇಳನ ಮಾಡಿದ ಮುಖಂಡನಾಗಿದ್ದು, ಈ  ಸಂಬಂಧ ಕಾಂಗ್ರೆಸ್ ಮುಖಂಡ‌ ಸಲೀಂ ವಿರುದ್ಧ ಬೆಳ್ತಂಗಡಿ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಅನುದಾನ ಹಂಚಿಕೆಯ ಕುರಿತಂತೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದ ಕಾಂಗ್ರೆಸ್‌ ನಾಯಕರು ಶಾಸಕರನ್ನು ವಿರೋಧಿಸುವ ಜೊತೆಗೆ ಶಿವಲಿಂಗವನ್ನೂ ಅವಹೇಳನ ಮಾಡಿದ್ದಾರೆ.

ಇದನ್ನೂ ಓದಿ:  Udaipur Tailor Murder: ಪಕ್ಷಬೇಧ ಬಿಟ್ಟು ಉದಯಪುರ ಮರ್ಡರ್ ಖಂಡಿಸಿದ ರಾಜಕೀಯ ಮುಖಂಡರು

ಸುದ್ದಿಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆ

ಬೆಳ್ತಂಗಡಿ ತಾಲೂಕಿನ ಕಾಜೂರು ಮಸೀದಿಗೆ ಶಾಸಕರು ಅನುದಾನವನ್ನು ಒದಗಿಸಿದ್ದು, ಈ ಸಂಬಂಧ ಕಾಮಗಾರಿಗಳ ಶಿಲಾನ್ಯಾಸಕ್ಕೆ ಬಿಜೆಪಿ ಶಾಸಕರು, ಜನಪ್ರತಿನಿಧಿಗಳು, ಹಿಂದೂ ಸಂಘಟನೆಗಳ ಮುಖಂಡರು ಕಾಜೂರು ಮಸೀದಿಯ‌ ಬಳಿ ಬರುವ ಸಾಧ್ಯತೆಯಿದೆ ಎಂದಿರುವ ಸಲೀಂ, ತನ್ನ ಮಾತನ್ನು ಮುಂದುವರಿಸಿ, ಈ ವ್ಯಕ್ತಿಗಳು ಮಸೀದಿ ಪಕ್ಕಕ್ಕೆ ಬರುವ ಸಮಯದಲ್ಲಿ ಮಸೀದಿಯ ಜನರು ಜಾಗರೂಕರಾಗಿರಬೇಕು.

ಸಮಾಧಿ ಮೇಲಿನ ಕಲ್ಲುಗಳಿಗೆ ಶಿವಲಿಂಗ ಹೋಲಿಕೆ

ಮಸೀದಿಯ‌ ಖಬರ್ ಸ್ತಾನದಲ್ಲಿ (ಮುಸಲ್ಮಾನರ ಶವ ಹೂಳುವ ಜಾಗ) ಶವ ಹೂತ ಬಳಿಕ ಶವದ ತಲೆ ಪಕ್ಕದಲ್ಲಿ ಮತ್ತು ಶವದ ಕಾಲಿನ‌ ಪಕ್ಕದಲ್ಲಿ ಎರಡು ಗೋಲಾಕಾರದ ಕಲ್ಲುಗಳನ್ನು ಇಡಲಾಗುತ್ತದೆ. ಅಂಥಹ ಸಾಕಷ್ಟು ಕಲ್ಲುಗಳು ಕಾಜೂರು ಮಸೀದಿಯ ಆವರಣದಲ್ಲಿದ್ದು, ಈ ಕಲ್ಲುಗಳನ್ನು ಕಂಡು ಅದನ್ನೂ ಶಿವಲಿಂಗ ಎಂದು ಹೇಳುವ ಸಾಧ್ಯತೆಯಿದೆ ಎಂದು ವ್ಯಂಗ್ಯವಾಡಿದ್ದಾರೆ.

ಹೇಳಿಕೆ ವಿಡಿಯೋ ವೈರಲ್

ಸಲೀಂ ಶಿವಲಿಂಗದ ಬಗ್ಗೆ ಈ ರೀತಿಯ ವ್ಯಂಗ್ಯವಾಡಿದರೂ, ಪತ್ರಿಕಾಗೋಷ್ಠಿಯಲ್ಲಿ  ಇದ್ದ ಕಾಂಗ್ರೆಸ್ ಇತರ ಮುಖಂಡರು ಸಲೀಂ ಹೇಳಿಕೆಯ ಬಗ್ಗೆ ಮೌನವಹಿಸಿದ್ದರು. ಈ ಪತ್ರಿಕಾಗೋಷ್ಠಿಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಹಿಂದೂಪರ ಸಂಘಟನೆಗಳು ಇದೀಗ ಸಲೀಂ ವಿರುದ್ಧ ಪೋಲೀಸ್ ದೂರು ದಾಖಲಿಸಿದೆ.

ಸಲೀಂ ವಿರುದ್ಧ ದೂರು ದಾಖಲು

ಹಿಂದೂಗಳ ಪವಿತ್ರ ಶಿವಲಿಂಗವನ್ನು ಖಬರ್ ಸ್ತಾನದ ಕಲ್ಲಿಗೆ ಹೋಲಿಸಿದ ಕಾಂಗ್ರೆಸ್ ಮುಖಂಡ ಸಲೀಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಅಲ್ಲದೆ ಕಾಜೂರು ಪ್ರದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲು ಸಲೀಂ ಉತ್ತೇಜನ ನೀಡಿದ್ದು, ಸಮಾಜದಲ್ಲಿ ಶಾಂತಿ ಭಂಗಕ್ಮೆ ಕಾರಣವಾದ ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದೆ. ತಪ್ಪಿದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲೂ ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ.

ಇದನ್ನೂ ಓದಿ: Udaipur Murder: ವ್ಯಕ್ತಿಯ ಶಿರಚ್ಛೇದನ, ಪ್ರಧಾನಿ ಮೋದಿಗೆ ಬೆದರಿಕೆ; ನೂಪುರ್ ಶರ್ಮಾ ಪರ ಪೋಸ್ಟ್​ಗೆ ಹಾಡಹಗಲೇ ಮರ್ಡರ್

ಇನ್ನೂ ಇಷ್ಟೆಲ್ಲ ವಿರೋಧ ವ್ಯಕ್ತವಾಗುತ್ತಿದ್ದರೂ ಸಲೀಂ ಅಥವಾ ಕಾಂಗ್ರೆಸ್ ಮುಖಂಡರು ಯಾವುದೇ ಹೇಳಿಕೆಯನ್ನು ನೀಡಿಲ್ಲ.
Published by:Mahmadrafik K
First published: