Puttur: ಐಟಿ ದಾಳಿಗೆ ಕಣ್ಣೀರಿಟ್ಟ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ

ಅಶೋಕ್ ಕುಮಾರ್ ರೈ , ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ

ಅಶೋಕ್ ಕುಮಾರ್ ರೈ , ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ

AShok Kumar Rai: ನನ್ನ ಎಲ್ಲಾ ವ್ಯವಹಾರವೂ ಸಕ್ರಮವಾಗಿಯೇ ಇದೆ. ಹೀಗಿದ್ದೂ ನನ್ನ ಮೇಲೆ ಬಿಜೆಪಿಯ ನಿರ್ದೇಶನದಂತೆ ದಾಳಿ ನಡೆಸುತ್ತಿದ್ದಾರೆ ಎಂದು ಅಶೋಕ್ ಕುಮಾರ್ ರೈ ಆರೋಪಿಸಿದ್ದಾರೆ.

  • Share this:

ಮಂಗಳೂರು: ಪುತ್ತೂರು (Puttur) ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ (Ashok Kumar Rai) ನಿವಾಸದ ಮನೆ ಮೇಲೆ ಐಟಿ ದಾಳಿ ನಡೆದಿದೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿ ಅಶೋಕ್ ಕುಮಾರ್ ರೈ ಕಣ್ಣೀರು ಹಾಕಿದ್ದಾರೆ. ವಿಟ್ಲದ ಚಂದಳಿಕೆಯಲ್ಲಿ ನಡೆದ ಚುನವಣಾ ಪ್ರಚಾರ (Election Campaign) ಸಭೆಯಲ್ಲಿ ಐಟಿ ದಾಳಿ ಬಗ್ಗೆ ಅಶೋಕ್ ಕುಮಾರ್ ರೈ ಪ್ರಸ್ತಾಪಿಸಿದ್ದಾರೆ. ನನ್ನ ಮೇಲೆ ಐಟಿ ದಾಳಿ (IT Raid) ನಡೆಸಿ 1.87 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ನಾನು ವರ್ಷಕ್ಕೆ 20 ಕೋಟಿ ತೆರಿಗೆ ಕಟ್ಟುವ ವ್ಯಕ್ತಿ. ನನ್ನ ಎಲ್ಲಾ ವ್ಯವಹಾರವೂ ಸಕ್ರಮವಾಗಿಯೇ ಇದೆ. ಹೀಗಿದ್ದೂ ನನ್ನ ಮೇಲೆ ಬಿಜೆಪಿಯ ನಿರ್ದೇಶನದಂತೆ ದಾಳಿ ನಡೆಸುತ್ತಿದ್ದಾರೆ ಎಂದು ಅಶೋಕ್ ಕುಮಾರ್ ರೈ ಆರೋಪಿಸಿದ್ದಾರೆ.


ಮೈಸೂರಿನಲ್ಲಿ ಅಶೋಕ್ ಕುಮಾರ್ ರೈ ಸೋದರ ಸುಬ್ರಹ್ಮಣ್ಯ ರೈ ನಿವಾಸದ ಮೇಲೆಯೂ ದಾಳಿ ನಡೆದಿತ್ತು. ಈ ವೇಳೆ ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ಬ್ಯಾಗ್ ಒಂದು ನೇತು ಹಾಕಲಾಗಿತ್ತು. ಅದನ್ನು ತೆಗೆದು ಪರಿಶೀಲಿಸಿದ ಅಧಿಕಾರಿಗಳು ಶಾಕ್ ಆಗಿದ್ದರು. ಗಿಡಕ್ಕೆ ನೇತು ಹಾಕಿದ್ದ ಬ್ಯಾಗ್​ನಲ್ಲಿ ಒಂದು ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು  ವಿಜಯವಾಣಿ ವೆಬ್ ವರದಿ ಮಾಡಿದೆ.


puttur congress candidate ashok kumar rai cried over it raid mrq
ಅಶೋಕ್ ಕುಮಾರ್ ರೈ , ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ


ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್


ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮರದಲ್ಲಿ ನೇತು ಹಾಕಿದ್ದ ಹಣವನ್ನು ವಶಪಡಿಸಿಕೊಂಡಿರುವ ಫೋಟೋಗಳು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.




ಇದನ್ನೂ ಓದಿ: Bajrang Dal: ಬಜರಂಗದಳ ನಿಷೇಧ ಪ್ರಸ್ತಾಪಿಸಿದ್ದ 'ಕೈ' ವಿರುದ್ಧ ಕಿಡಿಕಿಡಿ! ಬಿಜೆಪಿ-ಹಿಂದೂ ನಾಯಕರಿಂದ 'ನಾನೂ ಬಜರಂಗಿ' ಅಭಿಯಾನ


ಐಟಿ ದಾಳಿಗೆ ಒಳಗಾಗಿರುವ ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಸಹೋದರ ಎಂದು ಹೇಳಲಾಗುತ್ತಿದೆ.

First published: