ಕೊರೋನಾ ಲಾಕ್​​ಡೌನ್ ಕಲಿಸಿದ‌ ಕೃಷಿ ಪಾಠ; ಟೆರೇಸ್​​ನಲ್ಲಿ ಮಲ್ಲಿಗೆ ಬೆಳೆದು ಗಮನ ಸೆಳೆದ ಪುತ್ತೂರಿನ ಯುವಕ

ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಸರಕಾರ ಜಾರಿಗೆ ತಂದ ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ಸಂದೀಪ್ ಲೋಬೋ ತನ್ನ ಮನೆಯ ಟೆರೇಸ್ ಮೇಲೆ ಮಲ್ಲಿಗೆ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಸುಮಾರು 1000 ಚದರ ಸೆ.ಮಿ. ಜಾಗದಲ್ಲಿ 72 ಮಲ್ಲಿಗೆ ಗಿಡಗಳನ್ನು ಗ್ರೋ ಬ್ಯಾಗ್ ನಲ್ಲಿ ನೆಟ್ಟಿರುವ ಸಂದೀಪ್ ಲೋಬೋಗೆ ಮಲ್ಲಿಗೆ ಗಿಡಗಳು ಕೊರೊನಾ ಎರಡನೇ ಅಲೆಯ ಲಾಕ್ ಡೌನ್ ನ ಈ ಸಮಯದಲ್ಲಿ ಉತ್ತಮ ಇಳುವರಿಯನ್ನು ನೀಡುತ್ತಿದೆ.

ಮನೆಯ ಟೆರೇಸ್​ ಮೇಲೆ ಬೆಳೆದಿರುವ ಮಲ್ಲಿಗೆ ಬೆಳೆ

ಮನೆಯ ಟೆರೇಸ್​ ಮೇಲೆ ಬೆಳೆದಿರುವ ಮಲ್ಲಿಗೆ ಬೆಳೆ

  • Share this:
ದಕ್ಷಿಣ ಕನ್ನಡ(ಮೇ 18): ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ದಿನಕಳೆದವರ ನಡುವೆ ಮನೆಯಲ್ಲೇ ಇದ್ದು, ಹಲವು ಸಾಧನೆ ಮಾಡಿದವರೂ ಇದ್ದಾರೆ. ಕೊರೋನಾ ಲಾಕ್ ಡೌನ್ ಹಲವರಿಗೆ ಸಂಕಷ್ಟದ ಸರಮಾಲೆಯಾಗಿ ಕಾಡಿದ್ದರೆ, ಇನ್ನು ಕೆಲವರಿಗೆ ನವ ಜೀವನ ವಿಧಾನವನ್ನೇ ಪರಿಚಯಿಸಿದೆ. ಇಂಥಹುದೇ ಓರ್ವ ಯುವಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದ್ದಾನೆ. ಈ ಯುವಕ ಕೊರೋನಾ ಮೊದಲ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಹಾಕಿದ ಯೋಜನೆ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಯಶಸ್ವಿಯಾಗಿದೆ.

ಕೊರೋನಾ ಮಹಾಮಾರಿ ಹಲವಾರು ಜೀವಗಳನ್ನು ಬಲಿ ತೆಗೆಯುವ ಜೊತೆಗೆ ಜೀವಂತವಾಗಿದ್ದವರ ಜೀವನವನ್ನೇ ಹಾಳು ಮಾಡಿದೆ. ಕೊರೋನಾ ಲಾಕ್​ಡೌನ್​ನಿಂದಾಗಿ ಹಲವರು ತಮ್ಮ ಉದ್ಯೋಗ ಕಳೆದುಕೊಂಡಿದ್ದರೆ, ಇನ್ನು ಕೆಲವರ ಉದ್ಯಮ ನಷ್ಟದ ಕೂಪಕ್ಕೆ ತಳ್ಳಲ್ಪಟ್ಟಿದೆ. ಈ ನಡುವೆ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದು, ಆರಾಮವಾಗಿ ಜೀವನ ಸಾಗಿಸಿದವರೂ ಇದ್ದಾರೆ.

ಹೀಗೆ ಮನೆಯಲ್ಲೇ ಇದ್ದು, ಹಲವು ರೀತಿಯ ಯೋಚನೆಗಳ ಮೂಲಕ ಯಶಸ್ಸು ಸಾಧಿಸಿದ ಹಲವರ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇಂಥಹ ಯಶಸ್ಸುಗಾರರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮೊಟ್ಟೆತ್ತಡ್ಕ ನಿವಾಸಿ ಸಂದೀಪ್ ಲೋಬೋ ಕೂಡಾ ಸೇರುತ್ತಾರೆ. ಲಾಕ್ ಡೌನ್ ನಿಂದಾಗಿ ಯಾವುದೇ ವ್ಯವಹಾರವಿಲ್ಲದೆ, ಮನೆಯಲ್ಲೇ ಇದ್ದ ಇವರಿಗೆ ತಮ್ಮ ಮನೆಯ ಟೆರೇಸ್ ನಿಂದಲೇ ಏನಾದರೂ ಉತ್ಪಾದನೆ ಮಾಡಲು ಸಾಧ್ಯವೇ ಎನ್ನುವ ಯೋಚನೆ ಹರಿದಾಡಿದೆ.

ಸ್ವಿಟ್ಜರ್ಲೆಂಡ್‌ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ -19 ಹರಡುವಿಕೆ ಎದುರಿಸಲು ಸಹಾಯ ಮಾಡುತ್ತಿರುವ ಕಂಪ್ಯೂಟರ್ ಗೇಮ್‌..!

ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಸರಕಾರ ಜಾರಿಗೆ ತಂದ ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ಸಂದೀಪ್ ಲೋಬೋ ತನ್ನ ಮನೆಯ ಟೆರೇಸ್ ಮೇಲೆ ಮಲ್ಲಿಗೆ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಸುಮಾರು 1000 ಚದರ ಸೆ.ಮಿ. ಜಾಗದಲ್ಲಿ 72 ಮಲ್ಲಿಗೆ ಗಿಡಗಳನ್ನು ಗ್ರೋ ಬ್ಯಾಗ್ ನಲ್ಲಿ ನೆಟ್ಟಿರುವ ಸಂದೀಪ್ ಲೋಬೋಗೆ ಮಲ್ಲಿಗೆ ಗಿಡಗಳು ಕೊರೊನಾ ಎರಡನೇ ಅಲೆಯ ಲಾಕ್ ಡೌನ್ ನ ಈ ಸಮಯದಲ್ಲಿ ಉತ್ತಮ ಇಳುವರಿಯನ್ನು ನೀಡುತ್ತಿದೆ.

ದಿನವೊಂದಕ್ಕೆ 5 ರಿಂದ 6 ಚೆಂಡು ಮಲ್ಲಿಗೆಗಳನ್ನು ಪಡೆಯುತ್ತಿರುವ ಸಂದೀಪ್ ಲೋಬೋ ತನ್ನ ಯೋಜನೆ ಸಫಲವಾಗಿರುವುದಕ್ಕೆ ಖುಷಿ ಪಡುತ್ತಾರೆ. ಟೆರೇಸ್ ಮೇಲೆ ತರಕಾರಿ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಮೊದಲು ಹಾಕಿಕೊಂಡಿದ್ದ ಲೋಬೋ, ಬಳಿಕ ತನ್ನ ನಿರ್ಧಾರವನ್ನು ಬದಲಿಸಿ ಮಲ್ಲಿಗೆ ಕೃಷಿಯತ್ತ ಒಲವು ತೋರಿದ್ದರು.  ಇದೀಗ ಬರುತ್ತಿರುವ ಮಲ್ಲಿಗೆ ಇಳುವರಿಯಲ್ಲಿ ಒಂದು ಮನೆಗೆ ಬೇಕಾಗುವಷ್ಟು ಆದಾಯವನ್ನು ಗಳಿಸಬಹುದು ಎನ್ನುವ ಸಂದೀಪ್ ಲೋಬೋ ತನ್ನ ಮಲ್ಲಿಗೆ ಗಿಡಗಳಿಗೆ ಮನೆಯಲ್ಲೇ ಸಾವಯವ ಗೊಬ್ಬರವನ್ನೂ ತಯಾರಿಸಿಕೊಳ್ಳುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕರೆಗೆ ಪೂರಕವೆಂಬಂತೆ ತಾನೂ ಜೀವನದಲ್ಲಿ ಸಾವಲಂಭಿಯಾಗಬೇಕು ಎನ್ನುವ ಛಲದೊಂದಿಗೆ ಇಳಿದಿದ್ದ ಸಂದೀಪ್ ಇದೀಗ ತನ್ನ ಛಲದಲ್ಲಿ ಯಶಸ್ಸು ಗಳಿಸಿದ್ದಾರೆ. ಸಂದೀಪ್ ಲೋಬೋ ಅವರ ಟಾರೇಸ್ ಮೇಲಿನ ಮಲ್ಲಿಗೆ ಕೃಷಿಗೆ ಹಲವೆಡೆಗಳಿಂದ ಪ್ರಶಂಸೆಗಳೂ ಕೇಳಿ ಬಂದಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡಾ ಸಂದೀಪ ಅವರ ಆತ್ಮನಿರ್ಭರತೆಯ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಕೂಡಾ ಮಾಡಿದ್ದಾರೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದು, ಹಲವು ಸಾಧನೆ ತೋರಿದ ಸಾಧಕರ ಪಟ್ಟಿಯಲ್ಲಿ ಸಂದೀಪ್ ಲೋಬೋ ಕೂಡಾ ಸೇರಿಕೊಂಡಿದ್ದಾರೆ. ಕೃಷಿ ಮಾಡಲು ಬೇರೆ ಸ್ಥಳಾವಕಾಶ ಇಲ್ಲದ ಕಾರಣ ಮನೆಯ ಟಾರೇಸ್ ಅನ್ನೇ ಕೃಷಿಗಾಗಿ ಬಳಸಿಕೊಂಡ ಲೋಬೋ ಅವರ ಕೃಷಿ ಕಾಳಜಿಗೆ ಶಬ್ಬಾಸ್ ಹೇಳಲೇ ಬೇಕಿದೆ.
Published by:Latha CG
First published: