ಸೋಂಕಿತರ ಬೆಡ್​ಗಳನ್ನು ಮಂತ್ರಿಗಳ ಮನೆಗೆ ಹಾಕಿ, ಮಕ್ಕಳಿಗೆ ಬೇಡ; ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

ನಮ್ಮ ಬಳಿ ಎಲ್ಲ ದಾಖಲೆಗಳು ಇವೆ. ನಾವು ಕೊಡುತ್ತೇವೆ. ಇವತ್ತು ನಮ್ಮದು ಒಂದು ಅಭಿಯಾನ ಶುರು ಆಗ್ತಾ ಇದೆ. 10 ಸಾವಿರ ಬೆಡ್​ಗಳನ್ನು ಬಾಡಿಗೆ ತೆಗೆದುಕೊಳ್ತಿವಿ ಅಂದಿದ್ರು. ಈಗ ಖರೀದಿಸುತ್ತೇವೆ ಅಂತಿದ್ದಾರೆ. ಅವರಿಗೆ ಒಬ್ಬ ಅಧಿಕಾರಿ ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಡಿಕೆ ಶಿವಕುಮಾರ್​

ಡಿಕೆ ಶಿವಕುಮಾರ್​

 • Share this:
  ಬೆಂಗಳೂರು; ನಮ್ಮ ಶಾಸಕಾಂಗ ಪಕ್ಷದ ನಾಯಕರು ಕೂಡ ಲೆಕ್ಕ ಕೊಡಿ ಅಂದಿದ್ದಾರೆ. ನಾವು ಹಲವು ಮಾಹಿತಿ ಕೇಳಿದ್ದೇನೆ. ಅವನ್ನು ಮೊದಲು ಅವರು ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

  ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 10 ಸಾವಿರ ಹಾಸಿಗೆ ಬಾಡಿಗೆ ಪಡೆಯುತ್ತೇವೆ ಅಂದಿದ್ದರು. ಈಗ ನಾವೇ ಖರೀದಿ ಮಾಡ್ತೇವೆ ಅಂದಿದ್ದಾರೆ.  ನನ್ನ ಬಳಿ ಅಧಿಕೃತ ದಾಖಲೆ ಇದೆ. ಅವರು ಉಪಯೋಗಿಸಿದ ಬೆಡ್​ಗಳನ್ನು ಹಾಸ್ಟೆಲ್​ಗೆ ನೀಡೋದು ಅಂದಿದ್ದಾರೆ. ನಾವು ಸಿಎಂಗೆ ಕೇಳೋದಿಷ್ಟೇ. ಸೋಂಕಿತರ ಬೆಡ್​ಗಳನ್ನು ಮಂತ್ರಿಗಳ ಮನೆಗೆ ಹಾಕಿಕೊಳ್ಳಲಿ. ಮುಖ್ಯಮಂತ್ರಿ ಆರೋಗ್ಯ ಸಚಿವರು ಹಾಕಿಕೊಳ್ಳಲಿ.  ಬೇಕಾದರೆ ಶಾಸಕರ ಕ್ವಾಟ್ರಸ್​ಗೆ ಹಾಕಿಕೊಳ್ಳಲಿ. ಯಾರೀ ನಿಮಗೆ ಈ ಐಡಿಯಾ ಕೊಟ್ಟವರು.  ಸೋಂಕಿತರ ಶವ ಮುಟ್ಟೋಕೆ ಹೆದರುತ್ತಿದ್ದೀರಾ. ಆ ಬೆಡ್​ಗಳ ಮೇಲೆ ಮಕ್ಕಳನ್ನು ಮಲಗಿಸುವುದು ಸರಿನಾ? ಈ ಬೆಡ್​ಗಳನ್ನು ನಮ್ಮ‌ಮಕ್ಕಳಿಗೆ ಕೊಡಬೇಡಿ. ಇದರ ಬಗ್ಗೆ ನಾವು ಇವತ್ತಿನಿಂದಲೇ ಆಂದೋಲನ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

  ಇದನ್ನು ಓದಿ: ಕೋವಿಡ್​​-19 ಭ್ರಷ್ಟಚಾರ: ಸಿದ್ದರಾಮಯ್ಯಗೆ ಪೂರ್ಣ ಲೆಕ್ಕ ಕೊಟ್ಟ ಸಚಿವ ಬಿ. ಶ್ರೀರಾಮುಲು  ನಮ್ಮ ಬಳಿ ಎಲ್ಲ ದಾಖಲೆಗಳು ಇವೆ. ನಾವು ಕೊಡುತ್ತೇವೆ. ಇವತ್ತು ನಮ್ಮದು ಒಂದು ಅಭಿಯಾನ ಶುರು ಆಗ್ತಾ ಇದೆ. 10 ಸಾವಿರ ಬೆಡ್​ಗಳನ್ನು ಬಾಡಿಗೆ ತೆಗೆದುಕೊಳ್ತಿವಿ ಅಂದಿದ್ರು. ಈಗ ಖರೀದಿಸುತ್ತೇವೆ ಅಂತಿದ್ದಾರೆ. ಅವರಿಗೆ ಒಬ್ಬ ಅಧಿಕಾರಿ ಸಲಹೆ ನೀಡಿದ್ದಾರೆ ಎಂದು ಹೇಳಿದರು.
  Published by:HR Ramesh
  First published: