HOME » NEWS » State » PURE DRINKING WATER UNIT SCAM IN HASSAN DISTRICT RH

ಕುಡಿಯುವ ನೀರಿನ ಘಟಕದ ಹೆಸರಲ್ಲಿ‌ ನೂರಾರು ಕೋಟಿ ಲೂಟಿ?; ಹಗರಣ ತನಿಖೆಗೆ ಶಾಸಕರಿಂದಲೇ ಆಗ್ರಹ

ನೂರಾರು ಕೋಟಿ ಹಣವನ್ನು ಲೂಟಿ ಹೊಡೆದಿದ್ದಲ್ಲದೇ 5 ವರ್ಷಗಳ ಕಾಲ ಘಟಕಗಳ ನಿರ್ವಹಣೆಯ ಹಣವನ್ನೂ ಲೂಟಿ ಹೊಡೆಯುತ್ತಿದ್ದಾರೆ. ಯಾವುದೇ ನಿರ್ವಹಣೆ ಮಾಡಿಲ್ಲಾ, ಈ ಘಟಕ ನಿರ್ಮಾಣಕ್ಕೆ ಪ್ರತೀ ಜಿಲ್ಲೆಯಲ್ಲಿ ಕನಿಷ್ಠ 100 ಕೋಟಿ ಹಣ ತೆಗೆದುಕೊಂಡರೆ ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 3,000 ಸಾವಿರ ಕೋಟಿ ಹಣವನ್ನು ನುಂಗಿ ನೀರು ಕುಡಿದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

news18-kannada
Updated:January 29, 2020, 7:19 AM IST
ಕುಡಿಯುವ ನೀರಿನ ಘಟಕದ ಹೆಸರಲ್ಲಿ‌ ನೂರಾರು ಕೋಟಿ ಲೂಟಿ?; ಹಗರಣ ತನಿಖೆಗೆ ಶಾಸಕರಿಂದಲೇ ಆಗ್ರಹ
ಕುಡಿಯುವ ನೀರಿನ ಘಟಕಗಳ ದಾಖಲೆ ಪರಿಶೀಲಿಸುತ್ತಿರುವ ಶಾಸಕ ಶಿವಲಿಂಗೇಗೌಡ.
  • Share this:
ಹಾಸನ; ಜಿಲ್ಲೆಯ ಜನರಿಗೆ ಕುಡಿಯುವ ನೀರು ಸಿಗಲಿ ಎಂದು ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಈ ಘಟಕಗಳೆಲ್ಲವೂ ಪ್ರಾರಂಭವಾದ ದಿನವೇ ಕೆಟ್ಟುಹೋಗಿದ್ದು, ನೀರೇ ಬರುತ್ತಿಲ್ಲಾ. ಕೆಆರ್​ಡಿಎಲ್ ಕಂಪನಿಯು ಕುಡಿಯುವ ನೀರಿನ ಹೆಸರಿನಲ್ಲಿ ನೂರಾರು ಕೋಟಿ ಅವ್ಯವಹಾರ ನಡೆಸಿದೆ. 

ಒಂದು ಶುದ್ದ ಕುಡಿಯುವ ನೀರಿನ ಘಟಕಕ್ಕೆ 14 ಲಕ್ಷ ರೂ ವೆಚ್ಚ ಮಾಡಲಾಗಿದ್ದು, ಒಂದು ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಘಟಕ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ 100 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎನ್ನಲಾಗಿದೆ. ನೀರಿನ ಹೆಸರಲ್ಲಿ ಗೋಲ್ ಮಾಲ್ ಮಾಡಿ ನೀರಿನ ಹೆಸರಲ್ಲೇ ಸಾವಿರಾರು ಕೋಟಿ ನೀರು ಕುಡಿದಿದ್ದಾರೆ ಎಂದು ಸ್ವತಃ ಶಾಸಕರೇ ಆರೋಪ ಮಾಡಿದ್ದು, ನೀರಿನ ಘಟಕದ ಸಾವಿರಾರು ಕೋಟಿ ಅವ್ಯವಹಾರ ತನಿಖೆಗೆ ಆಗ್ರಹಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 8 ತಾಲ್ಲೂಕುಗಳಿದ್ದು, ಎಲ್ಲಾ ತಾಲ್ಲೂಕುಗಳಲ್ಲಿಯೂ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಸುಮಾರು 103 ಶುದ್ದ ಕುಡಿಯುವ ನೀರಿನ ಘಟಕವನ್ನು ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾಗಿದೆ. ಆದರೆ ಈ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ನೆಪ ಮಾತ್ರಕ್ಕೆ ಮಾತ್ರ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ ಯಾವುದೇ ಒಂದು ಘಟಕದಲ್ಲಿಯೂ ನೀರು ಬರುತ್ತಿಲ್ಲಾ. ಈ ನೀರಿನ ಘಟಕವನ್ನು ಪ್ರಾರಂಭಿಸಿದ ದಿನದಿಂದಲೂ  ಈವರೆಗೆ ನೀರು ಬರುತ್ತಿಲ್ಲಾ. ಸ್ವತಃ ಅರಸೀಕೆರೆ ಶಾಸಕ ಶೀವಲಿಂಗೇಗೌಡರು ಎಲ್ಲಾ ಘಟಕಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕೆಡಿಪಿ ಸಭೆಯಲ್ಲಿಯೂ  ಈ ವಿಷಯವನ್ನು ಪ್ರಸ್ತಾಪಿಸಿದರು. ಇದಲ್ಲದೇ ಅರಸೀಕೆರೆ ತಾಲ್ಲೂಕಿನ ಎಲ್ಲಾ ಪಿಡಿಓಗಳ ಸಭೆ ನಡೆಸಿ ಎಲ್ಲಾ ಮಾಹಿತಿಯನ್ನು ಪಡೆದರಲ್ಲದೇ ಎಲ್ಲಾ ಪಿಡಿಓಗಳನ್ನೂ ತರಾಟೆ ತೆಗೆದುಕೊಂಡರು.

ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ, ಆಲೂಕು, ಅರಕಲಗೂಡು, ಸಕಲೇಶಪುರ ಮತ್ತು ಬೇಲೂರು ಸೇರಿ ಹಾಸನ ಜಿಲ್ಲೆಯಲ್ಲಿ ಒಟ್ಟು 8 ತಾಲ್ಲೂಕುಗಳಿದ್ದು ಈ ಎಲ್ಲಾ ತಾಲ್ಲೂಕುಗಳಲ್ಲಿಯೂ ಬಾರೀ ಅವ್ಯವಹಾರವಾಗಿದೆ. ಪಂಚಾಯತ್ ರಾಜ್ ಮುಖ್ಯ ಕಾರ್ಯದರ್ಶಿ ಸೇರಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಕೇಳಿದರೂ ಈ ಬಗ್ಗೆ ಯಾವುದೇ ಉತ್ತರ ನೀಡುತ್ತಿಲ್ಲಾ. ಶುದ್ದ ಕುಡಿಯುವ ನೀರಿನ ಹೆಸರಿನಲ್ಲಿ ಬಾರೀ ಗೋಲ್ ಮಾಲ್ ಆಗಿದೆ. ಶಾಸಕ ಶಿವಲಿಂಗೇಗೌಡ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ಈ ಕುಡಿಯುವ ನೀರಿನ ಘಟಕವನ್ನು ಸೈಬ್ರೋ, ಸ್ಪ್ಯಾನೇಷಿಯಾ, ವಾಟರ್ ಲೈಫ್ ಮತ್ತು ಕೆಆರ್​ಐಡಿಎಲ್ ಈ ಸಂಸ್ಥೆಗಳು ಗುತ್ತಿಗೆ ಪಡೆದಿವೆ. ಈ ಕಂಪನಿಗಳ ಗುತ್ತಿಗೆದಾರರಾದ ಶಿವಕುಮಾರ್, ಗಿರೀಶ್ ಪ್ರಕಾಶ್ ಮತ್ತು ಮಲ್ಲಿಕಾರ್ಜುನ ಎಂಬುವರು ಗುತ್ತಿಗೆದಾರರಾಗಿದ್ದು ಸಾವಿರಾರು ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರತೀ ತಾಲ್ಲೂಕಿನಲ್ಲಿ 150ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ ಯಾವುದೇ ಘಟಕದಲ್ಲಿಯೂ ನೀರು ಬರುತ್ತಿಲ್ಲಾ. ಪ್ರತೀ ತಾಲೂಕಿಗೆ ಕನಿಷ್ಠ 100 ಘಟಕಗಳನ್ನು ತೆಗೆದುಕೊಂಡರೆ ಒಟ್ಟು 8 ತಾಲ್ಲೂಕುಗಳಲ್ಲಿ 800 ಘಟಕಗಳಿವೆ.

ಒಂದು ಘಟಕಕ್ಕೆ 14 ಲಕ್ಷದಂತೆ 100 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಈ ಘಟಕವನ್ನು ಸ್ಥಾಪಿಸಿದ ಬಳಿಕ 5 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು ಮತ್ತು ನಿರ್ವಹಣೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೆ ಯಾವುದೇ ನಿರ್ವಹಣೆ ಮಾಡದೇ ನಿರ್ವಹಣೆಯ ಹಣವನ್ನೂ ನುಂಗಿ ನೀರು ಕುಡಿದಿದ್ದಾರೆ. ಕೆಲವು ತಾಲ್ಲೂಕುಗಳಲ್ಲಿ ಶಾಸಕರು ನೀರಿನ ಘಟಕವನ್ನು ಉದ್ಘಾಟಿಸಿದ ಬಳಿಕ ಮಾರನೇ ದಿನವೇ ಬಹುತೇಕ ಘಟಕಗಳ ಯಂತ್ರವೇ ಕೆಟ್ಟು ಹೋಗಿದೆ. ಎಲ್ಲಾ ಯಂತ್ರಗಳೂ ತುಕ್ಕು ಹಿಡಿದಿದ್ದು, ನೀರಿನ ಘಟಕವನ್ನು ಹೇಳೋರು ಕೇಳೋರೇ ಇಲ್ಲದಂತಾಗಿದೆ. ಈ ಬಗ್ಗೆ ಸ್ವತಃ ಶಾಸಕ ಶಿವಲಿಂಗೇಗೌಡ ಅವರೇ ದಾಖಲೆ ಕೇಳಿದರೂ ಯಾವುದೇ ದಾಖಲೆ ನೀಡುತ್ತಿಲ್ಲಾ. ಇನ್ನೂ ಜಿಲ್ಲಾಧಿಕಾರಿಯಾಗಲೀ ಅಥವಾ ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳಾಗಲೀ ಈ ಹಗರಣ ಸಂಬಂಧ ಯಾವುದೇ ಪ್ರತಿಕ್ರಿಯೆಯಾಗಲೀ ಮತ್ತು ಮಾಹಿತಿಯನ್ನೂ ನೀಡುತ್ತಿಲ್ಲ.

ಇದನ್ನು ಓದಿ: ಡಿಕೆಶಿ ಆಪರೇಷನ್ ದಿಲ್ಲಿ ಫೇಲ್; ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಡೆಯಲು ಮಾಡಿದ್ದ ದೆಹಲಿ ದಂಡಯಾತ್ರೆ ವಿಫಲನೂರಾರು ಕೋಟಿ ಹಣವನ್ನು ಲೂಟಿ ಹೊಡೆದಿದ್ದಲ್ಲದೇ 5 ವರ್ಷಗಳ ಕಾಲ ಘಟಕಗಳ ನಿರ್ವಹಣೆಯ ಹಣವನ್ನೂ ಲೂಟಿ ಹೊಡೆಯುತ್ತಿದ್ದಾರೆ. ಯಾವುದೇ ನಿರ್ವಹಣೆ ಮಾಡಿಲ್ಲಾ, ಈ ಘಟಕ ನಿರ್ಮಾಣಕ್ಕೆ ಪ್ರತೀ ಜಿಲ್ಲೆಯಲ್ಲಿ ಕನಿಷ್ಠ 100 ಕೋಟಿ ಹಣ ತೆಗೆದುಕೊಂಡರೆ ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 3,000 ಸಾವಿರ ಕೋಟಿ ಹಣವನ್ನು ನುಂಗಿ ನೀರು ಕುಡಿದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
Youtube Video
First published: January 29, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories