Pramod Muthalik: ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಶಾಪ್​ನಲ್ಲೇ ಚಿನ್ನ ಖರೀದಿಸಿ; ಪ್ರಮೋದ್ ಮುತಾಲಿಕ್ ಕರೆ

ಹಿಂದೂಗಳು ಮುಸ್ಲಿಂರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಬೇಡಿ. ಈಗಾಗಲೇ ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ನೀವು ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಿದ್ರೆ ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತೆ.

ಪ್ರಮೋದ್ ಮುತಾಲಿಕ್​

ಪ್ರಮೋದ್ ಮುತಾಲಿಕ್​

 • Share this:
  ಬಾಗಲಕೋಟೆ (ಏ.24): ಹಿಜಾಬ್ (Hijab)​ ಆಯ್ತು, ಹಲಾಲ್ ​ ಕಟ್​ (Halal Cut), ಜಟ್ಕಾ ಕಟ್​  ಆಯ್ತು ಈಗ ಚಿನ್ನ ಖರೀದಿ ವಿಚಾರಕ್ಕೂ ಹಿಂದೂ ಪರ ಸಂಘಟನೆಗಳು ಮಧ್ಯ ಪ್ರವೇಶಿಸಿದ್ದು, ಅಕ್ಷಯ ತೃತೀಯಕ್ಕೆ (Akshaya Tritiya) ಹಿಂದೂಗಳ ಜ್ಯುವೆಲ್ಲರಿ ಶಾಪ್​ಗಳಲ್ಲೇ (Jewellery Shop) ಚಿನ್ನ ಖರೀದಿಸುವಂತೆ ಕರೆ ನೀಡಿದ್ದಾರೆ.  ಈ ಸಂಬಂಧ ಬಾಗಲಕೋಟೆಯಲ್ಲಿ ಮಾತಾಡಿದ ಹಿಂದೂ ಪರ ಸಂಘಟನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ , ಹಲಾಲ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಈ ಅಭಿಯಾನ ನಡೆಸಲಾಗ್ತಿದ್ದು, ಎಲ್ಲರೂ ಬೆಂಬಲ ನೀಡಬೇಕೆಂದು ಕೇಳಿಕೊಂಡ್ರು. ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂರು ಜ್ಯುವೆಲ್ಲರಿ ಶಾಪ್​ ಹೊಂದಿದ್ದಾರೆ ಅವ್ರ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡ್ಬೇಡಿ ಎಂದು ಕರೆ ನೀಡಿದ್ರು.

  ಹಿಂದೂಗಳ ಚಿನ್ನದಂಗಡಿಯಲ್ಲೇ ಚಿನ್ನ ಖರೀದಿಸಿ

  ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ , ಹಿಂದೂಗಳ ಪವಿತ್ರ ಹಬ್ಬವಾಗಿರೋ ಅಕ್ಷಯ ತೃತೀಯಕ್ಕೆ ಹಿಂದೂಗಳ ಚಿನ್ನದಂಗಡಿಯಲ್ಲೇ ಚಿನ್ನ ಖರೀದಿಸುವಂತೆ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ನಡೆಯುತ್ತಿರೋ ಅಭಿಯಾನಕ್ಕೆ ಶ್ರೀರಾಮ ಸೇನೆಯ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

  ಮುಸ್ಲಿಂರ ಶಾಪ್​ಗಳಲ್ಲಿ ಚಿನ್ನ ಖರೀದಿಸಬೇಡಿ

  ಹಲಾಲ್ ಕಟ್​, ಜಟ್ಕಾ ಕಟ್​ ಬಳಿಕ ಈಗ ಹಿಂದೂ ಸಂಘಟನೆಗಳಿಂದ ಅಕ್ಷಯ ತೃತೀಯ ಅಭಿಯಾನ ಜೋರಾಗಿಯೇ ನಡೀತಿದೆ. ಅಕ್ಷಯ ತೃತೀಯ ಹತ್ತಿರ ಬರ್ತಿದ್ದು, ಜನರೆಲ್ಲಾ ಚಿನ್ನ ಖರೀದಿ ಚಿಂತೆಯಲ್ಲಿದ್ದಾರೆ. ರಾಜ್ಯದಲ್ಲಿ ಅನೇಕ ಮುಸ್ಲಿಂರು ಜ್ಯುವೆಲ್ಲರಿ ಶಾಪ್​ ಇಟ್ಟುಕೊಂಡು ಕೆಲಸ ಮಾಡ್ತಿದ್ದಾರೆ. ಇನ್ನು ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಂರ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನ ಖರೀದಿಸಬೇಡಿ ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದ್ದಾರೆ.

  ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ

  ಹಲಾಲ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಈ ಅಭಿಯಾನ ನಡೆಸಲಾಗ್ತಿದ್ದು, ಎಲ್ಲರೂ ಬೆಂಬಲ ನೀಡಬೇಕೆಂದು ಕೇಳಿಕೊಂಡ್ರು. ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂರು ಚಿನ್ನದಂಗಡಿ ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದಾರೆ. ಹಿಂದೂಗಳು ಮುಸ್ಲಿಂರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಬೇಡಿ. ಈಗಾಗಲೇ ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ನೀವು ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಿದ್ರೆ ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತೆ.

  ಇದನ್ನೂ ಓದಿ: Operation Lotus: ರಾಜ್ಯದಲ್ಲಿ ಆಪರೇಷನ್ ಕಮಲದ ಸುಳಿವು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ Nalin Kumar Kateel

  ಲವ್​ ಜಿಹಾದ್​ ಪ್ರಕರಣ ಹೆಚ್ಚುತ್ತಿದೆ

  ದೇಶದಾದ್ಯಂತ ಅನೇಕ ಹಿಂದೂಗಳ ಕೊಲೆ ಆಗುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ರಾಜ್ಯದಲ್ಲಿ ಲವ್​ ಜಿಹಾದ್​ ಪ್ರಕರಣ ಹೆಚ್ಚಾಗಿದೆ. 12 ಸಾವಿರ ಹುಡುಗಿಯರನ್ನ ಮುಸ್ಲಿಂರು ಮತಾಂತರ ಮಾಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನೀವು ಅವ್ರ ಅಂಗಡಿಗೆ ಹೋಗಿ ಚಿನ್ನ ಖರೀದಿ ಮಾಡ್ತೀರಾ? ಹೀಗೆ ಮಾಡಿದ್ರೆ ನೀವು ನಿಮ್ಮ ತಲೆ ಮೇಲೆ ಕಲ್ಲು ಚಪ್ಪಡಿ ಎಳೆದುಕೊಂಡಂತೆ, ಹೀಗಾಗಿ ನೀವು ಹಿಂದೂಗಳ ಅಂಗಡಿಯಲ್ಲೇ ಜ್ಯುವೆಲ್ಲರಿ ಶಾಪ್​ನಲ್ಲಿ ಚಿನ್ನ ಖರೀದಿಸುವಂತೆ ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

   ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ

  2023ರರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮಸೇನೆ ಸ್ಫಧೆ೯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಮೋದ್​ ಮುತಾಲಿಕ್​, ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ರಾಜಕೀಯದಿಂದ ದೂರ ಇರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜಕೀಯಕ್ಕೆ ನಾವು ಬಾಗಿಲು ಹಾಕಿದ್ದೇವೆ, ರಾಜಕೀಯದಿಂದ ಯಾವುದೇ ಸ್ಫಧೆ೯ ಇಲ್ಲ ಎಂದ್ರು.

  ಇದನ್ನೂ ಓದಿ: PSI ಬಳಿಕ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲೂ ಅಕ್ರಮ; ಎಫ್​ಐಆರ್​ ದಾಖಲು

  ನಮ್ಮಂತಹ ಪ್ರಮಾಣಿಕರಿಗೆ ಅವ್ರು ಟಿಕೆಟ್ ಕೊಡಲ್ಲ

  ಬಿಜೆಪಿಯವರು ಟಿಕೆಟ್ ನೀಡಿದ್ರೆ ಸ್ಫಧೆ೯ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಮುತಾಲಿಕ್​, ಬಿಜೆಪಿ ವಿರುದ್ಧ ಕಿಡಿಕಾರಿದ್ರು, ಬಿಜೆಪಿ ಅವ್ರು ಟಿಕೆಟ್​ ಕೊಡೋದಿಲ್ಲ, ನಾನು ಸ್ಪರ್ಧಿಸುವುದಿಲ್ಲ ಎಂದ್ರು. ನಮ್ಮಂತಹ ಪ್ರಮಾಣಿಕರಿಗೆ, ಹೋರಾಟಗಾರರಿಗೆ ಅವ್ರೆಲ್ಲಿ ಟಿಕೆಟ್​ ಕೊಡ್ತಾರೆ ಎಂದು ಪ್ರಮೋದ್​ ಮುತಾಲಿಕ್​ ಹೇಳಿದ್ರು.
  Published by:Pavana HS
  First published: