• Home
  • »
  • News
  • »
  • state
  • »
  • Puneeth Rajkumar: ಇಂದು ಅಪ್ಪುಗೆ ಕರ್ನಾಟಕ ರತ್ನ; ಮಧ್ಯಾಹ್ನದಿಂದ ವಿಧಾನಸೌಧ ರಸ್ತೆ ಬಂದ್, ಬದಲಿ ಮಾರ್ಗ ಹೀಗಿದೆ

Puneeth Rajkumar: ಇಂದು ಅಪ್ಪುಗೆ ಕರ್ನಾಟಕ ರತ್ನ; ಮಧ್ಯಾಹ್ನದಿಂದ ವಿಧಾನಸೌಧ ರಸ್ತೆ ಬಂದ್, ಬದಲಿ ಮಾರ್ಗ ಹೀಗಿದೆ

ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್

ಬೆಂಗಳೂರಿನಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭ ಹಿನ್ನೆಲೆ ವಿಧಾನಸೌಧ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

  • News18 Kannada
  • Last Updated :
  • Bangalore, India
  • Share this:

ಕರ್ನಾಟಕದಲ್ಲಿ ಹುಟ್ಟಿ ಕನ್ನಡಿಗರ ಮನದರಾಸನಾದ ಅಪ್ಪು (Power star Puneeth Rajkumar) ಅಗಲಿಕೆಗೆ 1 ವರ್ಷವಾಯ್ತು. ಕೋಟಿ ಕೋಟಿ ಅಭಿಮಾನಿಗಳು (Appu Fans) ಈಗಲೂ ಪುನೀತ್ ಅವ​ರನ್ನ ದೇವರಂತೆ ಪೂಜಿಸುತ್ತಾ ಆರಾಧಿಸುತ್ತಿದ್ದಾರೆ. ಸರ್ಕಾರದ ಹಲವು ಯೋಜನೆಗಳಿಗೆ ಬೆನ್ನೆಲುಬಾಗಿದ್ದ ಅಪ್ಪುಗೆ ಬೊಮ್ಮಾಯಿ ಸರ್ಕಾರ (Bommai Government) ಕರ್ನಾಟಕ ರತ್ನ (Karnataka Ratna Award) ಕಿರೀಟ ತೊಡಿಸ್ತಿದೆ. ಇಂದು ವಿಧಾನಸೌಧದ ಮುಂದೆ ಅಪ್ಪುಗೆ ಕರ್ನಾಟಕ ರತ್ನ ಗೌರವ ಅರ್ಪಿಸಲು ಎಲ್ಲಾ ಸಿದ್ಧತೆಗಳೂ ಆಗ್ತಿದೆ. ವಿಧಾನಸೌಧಕ್ಕೆ (Vidhanasoudha) ಕಲರ್ ಫುಲ್ ಆಗಿ ಸಿಂಗಾರ ಮಾಡಲಾಗಿದೆ. ಪಾಸ್ ಪಡೆದ ಏಳು ಸಾವಿರ ಜನಕ್ಕೂ ಆಸನಗಳ ವ್ಯವಸ್ಥೆ ಮಾಡಲಾಗಿದೆ.


VIP ಹಾಗೂ VVIP ಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮೇಲೆ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿಎಂ, ಗೃಹ ಸಚಿವರು, ಪುನೀತ್ ಪತ್ನಿ ಅಶ್ವಿನಿ (Ashwini PuneethRajkumar), ರಜನಿಕಾಂತ್ (Rajinikant), ಎನ್​ಟಿಆರ್ (NTR), ಆರ್ ಅಶೋಕ್ (R Ashok) ಸೇರಿ ಆಯ್ದ ಸಚಿವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ಕಲ್ಪಿಸಲಾಗಿದೆ.


ವಿಧಾನಸೌದ ಮುಂಭಾಗದ ರಸ್ತೆ ಬಂದ್


ಬೆಂಗಳೂರಿನಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭ ಹಿನ್ನೆಲೆ ವಿಧಾನಸೌಧ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮಾರ್ಗ ಬದಲಾವಣೆ ಮಾಡಿದ್ದು, ವಿಧಾನಸೌದ ಮುಂಭಾಗದ ರಸ್ತೆ  ಸಂಪೂರ್ಣ ಬಂದ್ ಮಾಡಲಾಗಿದೆ.


Puneeth Rajkumars Karnataka Ratna ceremony today mrq
ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ


ಬದಲಿ ಮಾರ್ಗ ಹೀಗಿದೆ


ಈ ರಸ್ತೆಯನ್ನ ಅವೈಡ್ ಮಾಡುವಂತೆ ಸೂಚನೆ ನೀಡಿದ್ದಾರೆ ಸಂಚಾರಿ ಪೊಲೀಸರು.ಅಂಬೇಡ್ಕರ್ ರಸ್ತೆ, ಇನ್ಫೆಂಟ್ರಿ ರಸ್ತೆ, ಅಲಿ ಅಸ್ಕರ್ ರಸ್ತೆ, ಅರಮನೆ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಕನ್ನಿಂಗ್ ಹಾಮ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿಷೇಧ ವಿಧಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ಕಬ್ಬನ್ ಪಾರ್ಕ್ ನಲ್ಲಿ ವಾಹನ ನಿಲುಗಡೆಗೆ ಅವಕಾಶ ಕೊಡಲಾಗಿದೆ.ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮದ ತಯಾರಿ ಬಗ್ಗೆ ಸಚಿವ ಆರ್​ ಅಶೋಕ್​ ಪರಿಶೀಲನೆ ನಡೆಸಿದ್ದಾರೆ. ನಾವು 5 ಸಾವಿರ ಪಾಸ್​ಗಳು ಅಂತ ಅಂದುಕೊಂಡಿದ್ದಿಬಿ. ಆದ್ರೆ ಅದರ ಸಂಖ್ಯೆ ಜಾಸ್ತಿ ಆಗ್ತಾನೆ ಇದೆ, ಪ್ರಿಂಟ್ ಮಾಡ್ತಾ ಇದ್ದಾರೆ. ಎಲ್ಲಿ ಯಾರು ಕೂರಬೇಕು ಅನ್ನೋ ಫ್ಲ್ಯಾನ್ ಮಾಡಲಾಗಿದ್ದು ಪೊಲೀಸರ ಜೊತೆ ಮಾತನಾಡಲಾಗಿದೆ. ಆದಷ್ಟು ಜನರು ನಿಂತುಕೊಂಡು ಕಾರ್ಯಕ್ರಮ ನೋಡಲು ಫ್ಲ್ಯಾನ್ ಮಾಡಲಾಗಿದೆ ಎಂದಿದ್ದಾರೆ.


ಇದನ್ನೂ ಓದಿ:  Karnataka Ratna for Puneeth Rajkumar: ಜೂನಿಯರ್‌ ಎನ್‌ಟಿಆರ್‌ಗೆ ರಾಜ್‌ ಕುಟುಂಬದಿಂದ ಆಹ್ವಾನ, ಬೆಂಗಳೂರಿಗೆ ಬರಲು ತೆಲುಗು ಸೂಪರ್ ಸ್ಟಾರ್ ಸಂತಸ


ಭಾವುಕಳಾದ ಪುನೀತ್ ಪುತ್ರಿ


ಪುನೀತ್ ರಾಜ್‍ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಮತ್ತೆ ಅಪ್ಪುವನ್ನು ನೆನಪು ಮಾಡಿದೆ. 1 ವರ್ಷದಿಂದ ಅವರು ಇಲ್ಲ ಎನ್ನುವುದನ್ನು ನಂಬಲು ಆಗುತ್ತಿಲ್ಲ. ಚಿತ್ರದ ಮೂಲಕ ಮತ್ತೆ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.


Puneeth Rajkumars Karnataka Ratna ceremony today mrq
ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ


ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷವಾದ್ರೂ ಅವರ ನೆನಪು ಮರೆಯಲು ಆಗುತ್ತಿಲ್ಲ. ಅಭಿಮಾನಿಗಳಿಗೆ ಈ ರೀತಿ ಆದ್ರೆ, ಮನೆಯವರಿಗೆ ಹೇಗೆ ಆಗಬೇಡ ಹೇಳಿ. ಅದರಲ್ಲೂ ಮಕ್ಕಳಿಗೆ ಅಪ್ಪನ ನೆನಪು ಕಾಡುತ್ತಿದೆ.


ಗಂಧದ ಗುಡಿ ಸಿನಿಮಾವನ್ನು ನೋಡಿದ ಪುನೀತ್ ಅವರ ಮಗಳಿಗೆ ಮತ್ತೆ ಅಪ್ಪ ನೆನಪಾಗಿದ್ದಾರೆ. ಅದಕ್ಕೆ ಅಪ್ಪನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾಳೆ. ಧೃತಿ ಚಿಕ್ಕವಳಾಗಿದ್ದಾಗ ತೆಗೆದ ಫೋಟೋ.


ಇದನ್ನೂ ಓದಿ:  Kantara New Record: ಕನ್ನಡದ ಹಿಟ್ ಚಿತ್ರಗಳ ರೆಕಾರ್ಡ್ ಮುರಿದ ಕಾಂತಾರ


ತಾವು ಗಂಧದ ಗುಡಿ ಸಿನಿಮಾ ನೋಡಿರುವುದಾಗಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಮತ್ತೊಮ್ಮೆ ತೆರೆ ಮೇಲೆ ಕೊನೆಯದಾಗಿ ತಂದೆಯ ದರ್ಶನ ಮಾಡಿ ಖುಷಿ ಪಟ್ಟಿದ್ದಾರೆ.

Published by:Mahmadrafik K
First published: