liveLIVE NOW

Live: Puneeth Rajkumar RIP: ಕಂಠೀರವ ಸ್ಟೇಡಿಯಂನಲ್ಲಿ ರಾತ್ರಿ ಇಡೀ ಅಪ್ಪುಗೆ ಅಭಿಮಾನಿಗಳಿಂದ ಕಣ್ಣೀರ ನಮನ

Sandalwood Actor Puneeth Rajkumar Passed Away: ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ನಟ-ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಯುವರತ್ನ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅಭಿಮಾನಿಗಳಿಗೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ತಂದೆ-ತಾಯಿಯ ಪಕ್ಕದಲ್ಲೇ ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ಶನಿವಾರ ಇಡೀ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

  • News18 Kannada
  • | October 30, 2021, 09:12 IST
    facebookTwitterLinkedin
    LAST UPDATED 8 MONTHS AGO

    AUTO-REFRESH

    ಹೈಲೈಟ್ಸ್

    9:06 (IST)

    ರಾಘವೇಂದ್ರ ರಾಜ್ ಕುಮಾರ್ ಹೇಳಿಕೆ 

    ಮೂರು ದಿನಗಳಿಂದ ಸರ್ಕಾರ ಹಾಗೂ ಮಾಧ್ಯಮದವರು ಸಾಕಷ್ಟು ಸಹಕಾರ ಮಾಡಿದ್ದಾರೆ 

    ಅಭಿಮಾನಿಗಳು ಸಹ ಸಾವದಾಂದಿಂದ ಇದ್ದಾರೆ 

    ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ 

    ಮಯೂರ ಚಿತ್ರೀಕರಣದ ವೇಳೆ ಅಪ್ಪು ಜನಿಸಿದ್ದು 

    ಇಂದು ನನ್ನ ಮಗ ಅಪ್ಪು ನಮ್ಮೊಟ್ಟಿಗಿಲ್ಲ 

    ಅಪ್ಪು ನನಗಿಂತ 10 ವರ್ಷ ಚಿಕ್ಕವನು 

    ನಾನು ಅವನನ್ನ ಮಗನೆ ಅಂತಾ ಕರೀತಾ ಇದ್ದೇ 

    ಪುತ್ರ ಶೋಕಂ ನಿರಂತರಂ ಅನ್ನೋ ಹಾಗೆ ನನಗೆ ಈಗ ಆಗಿದೆ 

    ಅಪ್ಪಾಜಿ ಅಮ್ಮನಿಗೆ ನಮಸ್ಕರಿಸುತ್ತಿದ್ದೋ 

    ಈಗ ಅಪ್ಪುಗೆ ಸಹ ನಮಸ್ಕರಿಸುತ್ತೇವೆ 

    ರಾಘವೇಂದ್ರ ರಾಜ್ ಕುಮಾರ್ ಹೇಳಿಕೆ

    8:38 (IST)

    5ನೇ ತಾರೀಕಿನವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ 

    ಐದನೇ ದಿನಕ್ಕೆ ಕುಟುಂಬಸ್ಥರು ಹಾಲು ತುಪ್ಪ ಬಿಡುತ್ತಾರೆ 

    ಅಲ್ಲಿಯವರೆಗೂ ಸಾರ್ವಜನಿಕರಿಗೆ ಅವಕಾಶವಿಲ್ಲ 

    ಕಂಠೀರವ ಸ್ಟುಡಿಯೋ ಬಳಿ 144 ಸೆಕ್ಷನ್ ಜಾರಿ ಮಾಡಲಾಗಿದೆ 

    ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಂಡು ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಿದೆ

    ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ

    8:38 (IST)

    ರಾಜ್ ಫ್ಯಾಮಿಲಿಯಿಂದ ಅಪ್ಪು ಸಮಾದಿಗೆ ಕೊನೆಯ ಪೂಜೆ ಸಲ್ಲಿಕೆ

    8:38 (IST)

    ಅಂತಿಮ ಪೂಜೆ ನಂತರ ಕುಟುಂಬಸ್ಥರು ಮನೆಗೆ ತೆರಳಲಿದ್ದಾರೆ 

    ಮನೆಯಲ್ಲಿ ಪೂಜೆ ಬಳಿಕೆ ಮಧ್ಯಾಹ್ನ ವಾಪಸ್ ಸಮಾದಿ ಬಳಿಗೆ ಬರಲಿದ್ದಾರೆ

    ಇಂದೇ ಹಾಲು ತುಪ್ಪ ಬಿಡುವ ಶಾಸ್ತ್ರ ಮುಗಿಸಲಿರುವ ಕುಟುಂಬಸ್ಥರು 

    ಸಂಜೆ ನಾಲ್ಕು ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧ

    7:57 (IST)

     ಸಂಪೂರ್ಣ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ

    7:47 (IST)

    ಹೊರಗಡೆ ಬ್ಯಾರಿಕೇಡ್ ಮುಗಿದು ಗಲಾಟೆ...

    ಅಪ್ಪು ಅಪ್ಪು ಎಂದು ಕೂಗಾಟ..

    ಕೂಡಲೇ ಲಾಠಿ ಬೀಸುವ ಮೂಲಕ ನಿಯಂತ್ರಣ...

    7:45 (IST)

    ಪೃಥ್ವಿಯೊಳಗೆ ಮಣ್ಣಾದ ಪರಮಾತ್ಮ

    ಕುಟುಂಬದೊಂದಿಗೆ ಮೈತ್ರಿ ಮುರಿದು ಪೃಥ್ವಿ ಯೊಂದಿಗೆ ಮಿಲನವಾದ ದೇವರ ಮಗ

    7:39 (IST)

    ಅಮ್ಮನ ಪಕ್ಕದಲ್ಲೇ ಚಿರನಿದ್ರೆಗೆ ಜಾರಿದ ಕರುನಾಡಿನ 'ಯುವರತ್ನ' ಪ್ರೀತಿಯ ಅಪ್ಪು

    7:37 (IST)

    ಗುಂಡಿಗೆ ಇಳಿಸಿ ಪುನೀತ್ ದೇಹವನ್ನು ಉಪ್ಪು ಬಳಸಿ ಸಂಪೂರ್ಣ ಮುಚ್ಚಲಾಗಿದೆ

    ಮಣ್ಣಲ್ಲಿ ಮಣ್ಣಾದ ಅಪ್ಪು

    7:36 (IST)

    ಮುಗಿಲು ಮುಟ್ಟಿದ ಡಾ.ರಾಜ್​ ಕುಟುಂಬಸ್ಥರ ಆಕ್ರಂದನ 

    Sandalwood Actor Puneeth Rajkumar Passed Away:  ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್(Puneeth Rajkumar), ಸ್ಯಾಂಡಲ್​ವುಡ್ ಯುವರತ್ನ  ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುನೀತ್​ ರಾಜ್​ಕುಮಾರ್  ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ಧಾರೆ. ಕಂಠೀರವ ಸ್ಟುಡಿಯೋ(Kanteerava Studio)ದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಪುನೀತ್ ರಾಜ್​ಕುಮಾರ್ ಅವರ ಹಠಾತ್​ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಲಕ್ಷಾಂತರ ಅಭಿಮಾನಿಗಳು(Fans) ಕಣ್ಣೀರು ಹಾಕುತ್ತಿದ್ದಾರೆ. ನಟ-ನಟಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.  ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.