• Home
  • »
  • News
  • »
  • state
  • »
  • Puneeth Rajkumar: ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ, ರಜನಿಕಾಂತ್​ ಸಮ್ಮುಖದಲ್ಲಿ ಗೌರವ

Puneeth Rajkumar: ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ, ರಜನಿಕಾಂತ್​ ಸಮ್ಮುಖದಲ್ಲಿ ಗೌರವ

ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ,

ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ,

ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್​ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವ ಸಲ್ಲಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.01): ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್​ ರಾಜ್ ಕುಮಾರ್ (Ashwini Puneeth Rajkumar) ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವ ಸಲ್ಲಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಿಗೆ ಸೂಪರ್​ ಸ್ಟಾರ್ ರಜನಿಕಾಂತ್ (Rajinikanth)​, ಹಾಗೂ ನಟ ಜೂನಿಯರ್ ಎನ್​ಟಿಆರ್​ (Jr NTR) ಆಗಮಿಸಿ ಈ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾದ್ರು. 


ಮತ್ತೆ ಹುಟ್ಟಿ ಬಾ ಅಪ್ಪು


ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವ್ರು, ಅಪ್ಪು ನಮ್ಮ ಜೊತೆ ಇದ್ದಾರೆ. ಆಕಾಶದಿಂದ ಮಳೆಯ ರೂಪದಲ್ಲಿ ಬಂದು ಅಪ್ಪು ನಮಗೆ ಶುಭಕೋರಿದ್ದಾರೆ. ಕರ್ನಾಟಕ ರತ್ನಕ್ಕೇ ಕರ್ನಾಟಕ ರತ್ನ ಕೊಡುವ ಭಾಗ್ಯ ಸಿಕ್ಕಿದೆ. ಇದೆ ನಮ್ಮ ಪುಣ್ಯ ಎಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೆ ಹುಟ್ಟಿ ಬಾ ಅಪ್ಪು, ಮತ್ತೆ ಹುಟ್ಟಿ ಬಾ ಎಂದು ಸಿಎಂ ಬೊಮ್ಮಾಯಿ ಕೂಗಿದ್ರು.


Puneeth Rajkumar has been awarded the Karnataka Ratna Award posthumously pvn
ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ


ಅಭಿಮಾನಿಗಳ ಸಾಗರವೇ ಹರಿದು ಬಂದಿದೆ


ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ. ಮಳೆಯನ್ನೂ ಲೆಕ್ಕಿಸದೆ ಜನ ಕುಳಿತಿರೋದೆ ಅಪ್ಪು ಮೇಲೆ ಜನರಿಗಿರುವ ಪ್ರೀತಿಗೆ ಸಾಕ್ಷಿಯಾಗಿದೆ ಎಂದ್ರು.  ಜನ ಎಷ್ಟು ಗಟ್ಟಿಯಾಗಿ ನಿಂತಿದ್ದಾರೆ ನೋಡಿ ಎಂದು ಸಿಎಂ ಹೇಳಿದ್ರು.


ರಾಜ್ಯೋತ್ಸವದಂದು ಕರ್ನಾಟಕ ರತ್ನ ಪ್ರಶಸ್ತಿ


ಇದೊಂದು ದೀರ್ಘ ಕಾಲ ನೆನಪಿಡುವ ರಾಜ್ಯೋತ್ಸವ, ರಾಜ್ಯೋತ್ಸವದಂದು ಕರ್ನಾಟಕ ರತ್ನ ಪ್ರಶಸ್ತಿ ಕೊಡ್ತಿರೋದು ಇದೇ ಮೊದಲ ಬಾರಿಗೆ ಎಂದು ಬೊಮ್ಮಾಯಿ ಹೇಳಿದ್ರು. ಅತ್ಯಂತ ಕಿರಿಯ ವಯಸ್ಸಿನ ಅಪ್ಪುಗೆ ಕರ್ನಾಟಕ ರತ್ನ ಕೊಡ್ತಿರೋದು ಹೆಮ್ಮೆಯ ವಿಷಯ , ನಿಜವಾದ ರತ್ನನಿಗೆ ಕರ್ನಾಟಕ ರತ್ನ ಕೊಡ್ತಿದ್ದೇವೆ. ಅತ್ಯಂತ ಅಭಿಮಾನಿಗಳನ್ನು ಹೊಂದಿದ ರಾಜ್ ಕುಮಾರ್ ಅವರಿಗೆ ಹಿಂದೆ ಪ್ರಶಸ್ತಿ ಕೊಡಲಾಗಿತ್ತು. ಈಗ ಅವರ ಪುತ್ರ ಪುನೀತ್ ರಾಜ್​ ಕುಮಾರ್​ ಕೊಡಲಾಗ್ತಿದೆ.


ಇದನ್ನೂ ಓದಿ: Rajinikanth: ಅಪ್ಪು ದೇವರ ಮಗು ಎಂದ ರಜನಿಕಾಂತ್, ವೇದಿಕೆ ಮೇಲೆ ರಾಜ್‌ ಸ್ಮರಿಸಿಕೊಂಡ ಸೂಪರ್ ಸ್ಟಾರ್


1600
ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ,


ಬಸವರಾಜ ಬೊಮ್ಮಾಯಿ ಭಾವುಕ


ಪುನೀತ್ ರಾಜ್​ ಕುಮಾರ್​ ಅವರು ಇನ್ನು ಇರಬೇಕಿತ್ತು ಅನ್ನೋ ನೋವು, ಸಂಕಟ ಇದೆ.  ಎರಡು ಮನಸ್ಸಿನ ನಡುವೆ ಅವರಿಗೆ ಈ ಪ್ರಶಸ್ತಿ ಕೊಡ್ತಿದ್ದೇವೆ.  ಅವರು ನಮ್ಮ ನಡುವೆ ಇದ್ದಾರೆ ಅನ್ನೋ ಕಾರಣಕ್ಕೆ ಈ ಕಾರ್ಯಕ್ರಮ ಮಾಡ್ತಿದ್ದೇವೆ ಎಂದು ಹೇಳುತ್ತಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾವುಕರಾದ್ರು.


ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಅಶ್ವಿನಿ


ಪುನೀತ್ ರಾಜ್​ಕುಮಾರ್ ಅವರಿಗೆ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ. ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಹೇಳಿದ್ದಾರೆ.


ಇದನ್ನೂ ಓದಿ: Puneeth Rajkumar: ನಗು ಮುಖದಲ್ಲೇ ಇಡೀ ರಾಜ್ಯ ಗೆದ್ದ ರಾಜ ಅಪ್ಪು, ಗೆಳೆಯನ ನೆನೆದು Jr NTR ಭಾವುಕ!


ಅಪ್ಪು ಎಂದಿಗೂ ಅಮರ


ಪುನೀತ್ ರಾಜ್‌ಕುಮಾರ್ ಎಲ್ಲಿಯೂ ಹೋಗಿಲ್ಲ. ಅಪ್ಪು ದೇವರ ಮಗು ಎಂದು ಸೂಪರ್​ ಸ್ಟಾರ್​ ರಜನಿಕಾಂತ್​ ಹೇಳಿದ್ದಾರೆ. ಆ ದೇವರ ಮಗು ನಮ್ಮ ಜೊತೆ ಬಂದು, ಸ್ವಲ್ಪ ದಿನ ಆಟ ಆಡಿ, ತನ್ನ ಲೀಲೆಯನ್ನು ತೋರಿ ಮತ್ತೆ ದೇವರ ಬಳಿಯೇ ಹೋಗಿದೆ. ಆತ ಎಲ್ಲಿಯೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾನೆ. ಆ ತನ್ನ ಸಿನಿಮಾದ ಮೂಲಕ, ತನ್ನ ಸಮಾಜ ಸೇವೆ ಮೂಲಕ ಅಮರರಾಗಿ ಇರುತ್ತಾನೆ ಅಂತ ರಜನಿ ಶ್ಲಾಘಿಸಿದರು.

Published by:ಪಾವನ ಎಚ್ ಎಸ್
First published: