• Home
  • »
  • News
  • »
  • state
  • »
  • Puneeth Rajkumar: ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತು ಸಾಧನೆ ಕಥೆ! ಸಿಎಂ ಬೊಮ್ಮಾಯಿಗೆ ಪುನೀತ್​ ಅಭಿಮಾನಿಗಳಿಂದ ಮನವಿ

Puneeth Rajkumar: ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತು ಸಾಧನೆ ಕಥೆ! ಸಿಎಂ ಬೊಮ್ಮಾಯಿಗೆ ಪುನೀತ್​ ಅಭಿಮಾನಿಗಳಿಂದ ಮನವಿ

ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್ ಕುಮಾರ್ ರವರ ಜೀವನ ಹಾಗೂ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಅಪ್ಪು ಅಭಿಮಾನಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಕೊಟ್ಟಿದ್ದಾರೆ

  • News18 Kannada
  • Last Updated :
  • Karnataka, India
  • Share this:

ಇಂದು ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ (Power Star Puneeth Rajkumar)​ ಪುಣ್ಯಸ್ಮರಣೆಯಿದ್ದು, ಕಂಠೀರವ ಸ್ಟುಡಿಯೋ ಬಳಿ ಜನಸಾಗರ ಹರಿದು ಬಂದಿದೆ. ಅಭಿಮಾನಿಗಳು ಅಪ್ಪು ಸಮಾಧಿ ಬಳಿ ಬರುತ್ತಿದ್ದಾರೆ. ಪವರ್​ ಸ್ಟಾರ್ ​(Power Star) ಪುನೀತ್​ ರಾಜ್​ಕುಮಾರ್​ ಇನ್ನೂ ನಮ್ಮ ಜೊತೆಯೆ ಇದ್ದಾರೆ. ಅಭಿಮಾನಿಗಳ ಹೃದಯ ಸಿಂಹಾಸನವೇರಿ ಕೂತಿದ್ದಾರೆ. ಕಳೆದ ವರ್ಷ ಈ ದಿನದಂದು ರಾಜ್ಯಕ್ಕೆ ಬರಸಿಡಿಲು ಬಡಿದಿತ್ತು. ದೈಹಿಕವಾಗಿ ದೂರವಾಗಿದ್ದರು, ಮಾನಸಿಕವಾಗಿ ನಮ್ಮ ಜೊತೆಯಲ್ಲೇ ಇದ್ದಾರೆ ಪುನೀತ್ ರಾಜ್​ಕುಮಾರ್ (Puneeth Rajkumar)​​. ಅಪ್ಪು (Appu) ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಗರವೇ ಅಪ್ಪು ಸಮಾಧಿಗೆ ಹರಿದು ಬರ್ತಿದೆ.


ಅಣ್ಣಾವ್ರ ಕುಟುಂಬಸ್ಥರಿಂದ ಅಪ್ಪು ಸಮಾಧಿಗೆ ಪೂಜೆ


ಅಪ್ಪು ಸಮಾಧಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಸಮಾಧಿ ಪೂರ್ತಿ ಹಸಿರು ಶ್ವೇತಾಂಬರಿ ವರ್ಣದ ಹೂಗಳಿಂದ ಸಿಂಗಾರಕೊಂಡಿದೆ. ಇನ್ನೂ ಅಪ್ಪು ಸಮಾಧಿ ಬಳಿ  ನಿನ್ನೆ ರಾತ್ರಿಯಿಂದಲೇ 24 ಗಂಟೆಗಳ ಸಂಗೀತ ನಮನ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್ ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ. ಇನ್ನೂ ಅಣ್ಣಾವ್ರ ಕುಟುಂಬಸ್ಥರು ಅಪ್ಪು ಸಮಾಧಿಗೆ ಭೇಟ ನೀಡಿ ಪೂಜೆ ಸಲ್ಲಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅಲ್ಲಿ ನೆರೆದಿರುವ ಅಭಿಮಾನಿಗಳನ್ನು ಕಂಡು ಭಾವುಕರಾದರು.


ಪಠ್ಯ ಪುಸ್ತಕದಲ್ಲಿ ಅಪ್ಪು ಪಾಠ?


ಪುನೀತ್ ರಾಜ್ ಕುಮಾರ್ ರವರ ಜೀವನ ಹಾಗೂ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಅಪ್ಪು ಅಭಿಮಾನಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಪತ್ರದಲ್ಲಿ ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತೆ ಸಾಧನೆ ಕಥೆಯನ್ನು ಸೇರಿಸಲು ಮನವಿ ಮಾಡಿದ್ದಾರೆ. ಈಗಾಗಲೇ 6ನೇ ತರಗತಿ ಪಠ್ಯ ದಲ್ಲಿ ಡಾ. ರಾಜ್ ಕುಮಾರ್ ಜೀವನ ಸಾಧನೆ ಪಠ್ಯ ಸೇರಿಸಲಾಗಿದೆ. ಅದೆ ರೀತಿ ನಟ ಪುನೀತ್ ರಾಜ್ ಕುಮಾರ್ ಜೀವನ ಸಾಧನೆ ಕಥೆ ಸೇರಿಸಲು ಅಪ್ಪು ಅಭಿಮಾನಿಗಳು ಮನವಿ ಮಾಡಿದ್ದಾರೆ.


ಅಭಿಮಾನಿಗಳ ಮನವಿ ಪತ್ರ


ಇದನ್ನೂ ಓದಿ: 'ರಾಜರತ್ನ' ಮರೆಯಾಗಿ ಕಳೆದೇ ಹೋಯ್ತು 1 ವರ್ಷ! ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ


ಆರ್ ಟಿ‌ ನಗರದ ನಿವಾಸದ ಬಳಿ ಸಿಎಂ ಬೊಮ್ಮಾಯಿಗೆ ಅಪ್ಪು ಅಭಿಮಾನಿಗಳ ಮನವಿ ಟಿ ನರಸೀಪುರದ ಮುಡುಕು ತೊರೆಯ ಅಪ್ಪು ಅಭಿಮಾನಿಗಳಿಂದ ಮನವಿ ಮಾಡಿದ್ದಾರೆ. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯಗೂ ಮನವಿ ಮಾಡಿರುವ ಅಭಿಮಾನಿಗಳು.


ಉಸಿರೇ ನನ್ನ ಉಸಿರೇ ನೀನಮ್ಮ ಅಂತ ಹಾಡಿದ ಶಿವಣ್ಣ!


ಇನ್ನೂ ಕಂಠೀರವ ಸ್ಟುಡಿಯೋದಲ್ಲಿ ನಿನ್ನೆ ರಾತ್ರಿಯಿಂದ 24 ಗಂಟೆಗಳ ಕಾಲ ನಿರಂತರ ಗೀತ ನಮನ ಸಂಗೀತ ಕಾರ್ಯಕ್ರಮ  ನಡೆಯುತ್ತಿದೆ. ಅಪ್ಪು ಸಮಾಧಿಗೆ ಪೂಜೆ ಮಾಡಿದ ಬಳಿಕ ಶಿವಣ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಉಸಿರೇ ನನ್ನ ಉಸಿರೇ ನೀನಮ್ಮ ಅಂತ ಶಿವಣ್ಣ ಹಾಡಿದರು. ಜೊತೆಗೆ ಬೇಡುವೇನು ವರವನ್ನು ಎಂಬ ಹಾಡು ಹೇಳಿ ಭಾವುಕರಾದರು.


ಇದನ್ನೂ ಓದಿ: ದುಬೈನಲ್ಲಿ ಒಬ್ಬರೇ ನಿಂತಿದ್ದ ಅನುಶ್ರೀ ಅವರನ್ನು ಊಟಕ್ಕೆ ಕರೆದೊಯ್ದಿದ್ದರು ಅಪ್ಪು


ಅಪ್ಪು ನೆನೆದು ರಾಘಣ್ಣ ಭಾವುಕ!


ಅಪ್ಪು ಸಮಾಧಿ ಬಳಿ ಅನ್ನ ಸಂತರ್ಪಣ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ರಾಘವೇಂದ್ರ ‌ರಾಜ್ ಕುಮಾರ್  'ಬೆಳಿಗ್ಗೆ ಸಂಗೀತ ಕಾರ್ಯಕ್ರಮ ಕೇಳಿದೆ,  ಕಾರ್ಯಕ್ರಮ ನೋಡಿ ಖುಷಿ ಆಯ್ತು. ಅಪ್ಪು ಅಗಲಿ ಇಂದಿಗೆ ಒಂದು ವರ್ಷ ಆಯ್ತು, ಅಭಿಮಾನಿಗಳು ತೋರಿಸ್ತಿರೋ ಪ್ರೀತಿ ನೋಡಿ ಖುಷಿ ಆಯ್ತು, ಪುನೀತ್ ಸ್ಮಾರಕ‌ ಆಗಬೇಕು ಎಂಬ ಕೋರಿಕೆ‌ಯಿದೆ. ಈ‌ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ಹೇಳಿದರು.

Published by:ವಾಸುದೇವ್ ಎಂ
First published: