• Home
  • »
  • News
  • »
  • state
  • »
  • Puneeth Rajkumar: ನಮ್ ದೇವ್ರನ್ನ ಆ ದೇವ್ರೇ ಕಸಕೊಂಡಾನ: ಚಿತ್ರಮಂದಿರದಿಂದ ಅಳುತ್ತಲೇ ಹಿಂತಿರುಗಿದ ಅಪ್ಪು ಅಭಿಮಾನಿ!

Puneeth Rajkumar: ನಮ್ ದೇವ್ರನ್ನ ಆ ದೇವ್ರೇ ಕಸಕೊಂಡಾನ: ಚಿತ್ರಮಂದಿರದಿಂದ ಅಳುತ್ತಲೇ ಹಿಂತಿರುಗಿದ ಅಪ್ಪು ಅಭಿಮಾನಿ!

ರಘು ವದ್ದೆ, ಪುನೀತ್ ಅಭಿಮಾನಿ

ರಘು ವದ್ದೆ, ಪುನೀತ್ ಅಭಿಮಾನಿ

Gandghada Gudi Release: ವರ್ಷಕ್ಕೆ ಎರಡು ಚಿತ್ರ ರಿಲೀಸ್ ಆಗ್ತಿದ್ದವು. ಆದ್ರೆ ನಮ್ಮ ದೇವ್ರನ್ನ ಆ ದೇವ್ರೆ ಕಸಕೊಂಡಾನ. ಮತ್ತೆ ಮತ್ತೆ ನಮ್ ದೇವ್ರನ್ನ ನೋಡೋಕೆ ಆಗಲ್ಲ ಅಂತ ಕಣ್ಣೀರು ಹಾಕುತ್ತಾ ಪುನೀತ್ ಅಭಿಮಾನಿ ಚಿತ್ರವನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾರೆ. ಅಪ್ಪು ಜೊತೆಗಿನ ಒಡನಾಟ ನೆನೆದು ಭಾವುಕನಾಗಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Dharwad, India
  • Share this:

ವರದಿ - ಶಿವರಾಮ ಅಸುಂಡಿ.


ಹುಬ್ಬಳ್ಳಿ(ಅ.28): ಇನ್ನು ನಮ್ ದೇವ್ರನ್ನ ನೋಡೋಕೆ ಆಗಲ್ಲ, ನಮ್ಮ ದೇವ್ರನ್ನ ಆ ದೇವ್ರೇ ಕಸಕೊಂಡಾನ ಎಂದು ಬಾವುಕರಾದ ಅಭಿಮಾನಿಯೋರ್ವ ಪುನೀತ್ ರಾಜಕುಮಾರ್​ರವರ ಗಂಧದಗುಡಿ ಸಿನಿಮಾವನ್ನು ಪೂರ್ತಿ ನೋಡಲಾಗದೆ ಚಿತ್ರಮಂದಿರದಿಂದ ಹೊರ ಬಂದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಅಪ್ಸರಾ, ಪಿವಿಆರ್ ಸೇರಿ ವಿವಿಧ ಚಿತ್ರಮಂದಿರಗಳಲ್ಲಿ ಗಂಧದಗುಡಿ ಪ್ರದರ್ಶನಗೊಳ್ಳುತ್ತಿದೆ. ಅಪ್ಸರಾ ಚಿತ್ರಮಂದಿರದ ಬಳಿ ಗಂಧದ ಗುಡಿಗೆ ಭರ್ಜರಿ ಸ್ವಾಗತ ಕೋರಿದ ಪುನೀತ್ ಅಪ್ಪಟ ಅಭಿಮಾನಿ ರಘು ವದ್ದೆ, ನಂತರ ಚಿತ್ರಮಂದಿರದ ಒಳಗೆ ಹೋಗಿ ತೆರೆ ಮುಂದೆಯೇ ನಿಂತು ಪುಷ್ಪಾರ್ಪಣೆ ಮಾಡಿದ್ದಾರೆ.


ಅಪ್ಪು ಎಂಟ್ರಿ ಕೊಟ್ಟ ನಂತರ ಭಾವುಕರಾದ ರಘು, ಚಿತ್ರ ವೀಕ್ಷಿಸದೇ ಅರ್ಧದಿಂದಲೇ ಹೊರ ನಡೆದಿದ್ದಾರೆ. ನಂತರ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ನಮ್ಮ ಪುನೀತ್ ಈಗ ದೇವರು ಆಗಿಬಿಟ್ಟಿದ್ದಾರೆ. ಬೇರೆ ನಟರ ಚಿತ್ರಗಳನ್ನು ನಾವು ಮತ್ತೆ ಮತ್ತೆ ನೋಡಬಹುದು. ಆದರೆ ನಮ್ಮ ಪುನೀತ್​ರವರ ಚಿತ್ರಗಳು ಇಲ್ಲಿಗೇ ಕೊನೆಯಾಗುತ್ತೆ. ವರ್ಷಕ್ಕೆ ಎರಡು ಚಿತ್ರಗಳು ರಿಲೀಸ್ ಆಗುತ್ತಿದ್ದವು. ಆದರೆ ನಮ್ಮ ಅಪ್ಪುವನ್ನು ಆ ದೇವರು ಕಿತ್ತುಕೊಂಡಿದ್ದಾನೆ. ಹೀಗಾಗಿ ಅಪ್ಪು ಇನ್ನು ಮುಂದೆ ಬರೀ ಕನಸು ಮಾತ್ರ. ಅವರನ್ನು ನೋಡೋಕೆ ಆಗಲ್ಲ, ಮಾತನಾಡಿಸಲೂ ಆಗಲ್ಲ ಎಂದಿದ್ದಾರೆ.


ಇದನ್ನೂ ಓದಿ: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂಬ ಫ್ಯಾನ್ಸ್


ಗಂಧದ ಗುಡಿಚಿತ್ರೀಕರಣದ ವೇಳೆ ಅವರ ಜೊತೆಗೆ ಇದ್ದ ಕ್ಷಣಗಳನ್ನು ರಘು ಸ್ಮರಿಸಿಕೊಂಡಿದ್ದಾರೆ. ಅಪ್ಪು ನಮ್ಮನ್ನು ಅಗಲಿದ್ದರೂ ಇನ್ನೂ ಕಾಡುತ್ತಿದ್ದಾರೆ. ಹಾಗಾಗಿ ತೆರೆ ಮೇಲೆ ನೋಡೋಕೆ ಆಗ್ತಿಲ್ಲ. ಇದರ ಶೂಟಿಂಗ್ ವೇಳೆ ನಾನೂ ಅವರ ಜೊತೆ ಇದ್ದೆ. ಜೋಯ್ಡಾದಲ್ಲಿ 10 ದಿನ ಅವರ ಜೊತೆಗಿದ್ದೆ. ಪ್ರೀತಿಯಿಂದ ಅಪ್ಪಿ ಮಾತಾಡ್ತಿದ್ದ ಅಪ್ಪು ನಮ್ಮ ಜೊತೆಗಿಲ್ಲ. ಅದನ್ನು ಅರಗಿಸಿಕೊಳ್ಳೋಕೆ ನಮಗೆ ಆಗ್ತಿಲ್ಲ. ಅಪ್ಪು ನಮ್ಮನ್ನೆಲ್ಲಾ ಬಿಟ್ ಹೋದ್ರು ಎಂದು ರಘು ವದ್ದೆ ಕಣ್ಣೀರು ಹಾಕಿದ್ದಾರೆ.


ಅಪ್ಪು ಶರ್ಟ್ ಹಾಕಿಕೊಂಡಿದ್ದ ರಘು


ಗಂಧದಗುಡಿ ರಿಲೀಸ್ ಹಿನ್ನೆಲೆಯಲ್ಲಿ ಪುನೀತ್ ಅಭಿನಯದ ಎಲ್ಲ ಚಿತ್ರಗಳ ಪೋಸ್ಟರ್ ಗಳನ್ನು ಹಾಕಿದ್ದ ಶರ್ಟ್ ಧರಿಸಿ ರಘು ವದ್ದೆ ಗಮನ ಸೆಳೆದರು. ಬೆಳಿಗ್ಗೆಯೇ ಚಿತ್ರ ಮಂದಿರದ ಬಳಿ ಬಂದು ವಿಜಯೋತ್ಸವದ ಸಿದ್ಧತೆಯಿಂದ ಹಿಡಿದು ಎಲ್ಲ ಚಟುವಟಿಕೆಗಳನ್ನು ಬಿರುಸಿನಿಂದ ಮಾಡಿದರು. ಅಪ್ಸರಾ ಚಿತ್ರಮಂದಿರದ ಬಳಿ ತನ್ನ ಬೆಂಬಲಿಗರ ಜೊತೆಗೂಡಿ ವಿಜಯೋತ್ಸವ ಆಚರಿಸಿದರು. ಪುನೀತ್ ಅಭಿನಯದ ಅಪ್ಪು, ನಟಸಾರ್ವಭೌಮ ಚಿತ್ರದಿಂದ ಹಿಡಿದು ಬಹುತೇಕ ಎಲ್ಲ ಚಿತ್ರಗಳ ಪೋಸ್ಟರ್ ಗಳನ್ನು ಮುದ್ರಿಸಿದ್ದ ಶರ್ಟ್ ಹಾಕಿಕೊಂಡು ಅಭಿಮಾನ ಮೆರೆದರು.


Puneeth Rajkumar Gandhada Gudi Film Review
ನಮ್ಮ ನಾಡಿನ ಅನ್ಯ ಲೋಕಕ್ಕೆ ಅಪ್ಪು ಪಯಣ


ಶ್ರವಣ ದೋಷ ಯಂತ್ರ ವಿತರಣೆ


ರಘು ವದ್ದೆ ಅಭಿಮಾನ ಕೇವಲ ವಿಜಯೋತ್ಸವಕ್ಕೆ ಸೀಮಿತವಾಗಿಲ್ಲ. ಪ್ರತಿ ಬಾರಿ ಪುನೀತ್ ಚಿತ್ರ ರಿಲೀಸ್ ಆದಾಗಲೂ ಜನರಿಗೆ ಅನುಕೂಲವಾಗುವಂತಹ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಕಳೆದ ಬಾರಿ ಜೇಮ್ಸ್ ಚಿತ್ರ ರಿಲೀಸ್ ವೇಳೆ ವಿಕಲಚೇತರನಿಗೆ ಕೃತಕ ಕಾಲು ವಿತರಿಸಿದ್ದರು. ನೂರಕ್ಕೂ ಹೆಚ್ಚು ಜನರಿಗೆ ಕೃತಕ ಕಾಲು ವಿತರಿಸಿ, ಅವರಿಗೆ ತಮ್ಮ ಖರ್ಚಿನಲ್ಲಿಯೇ ಚಿತ್ರ ವೀಕ್ಷಣೆಗೂ ಅವಕಾಶ ಕಲ್ಪಿಸಿದ್ದರು. ಹೊರ ಬಂದ ನಂತರ ಬಿರಿಯಾನಿ ಊಟವನ್ನೂ ಹಾಕಿಸಿದ್ದರು. ಇದೀಗ ಗಂಧದಗುಡಿ ರಿಲೀಸ್ ವೇಳೆ ಶ್ರವಣ ದೋಷ ಇರುವವರಿಗೆ ಶ್ರವಣ ಯಂತ್ರ ವಿತರಿಸಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ಶ್ರವಣ ಯಂತ್ರ ವಿತರಿಸಿ ತಮ್ಮ ಅಭಿಮಾನ ತೋರಿಸಿದ್ದಾರೆ.


ಇದನ್ನೂ ಓದಿ: Bamboo Cracker: ಬಿದಿರಿನಿಂದ ತಯಾರಾಯ್ತು ಪಟಾಕಿ! ಉತ್ತರ ಕನ್ನಡ ಕೃಷಿಕನ ಸಂಶೋಧನೆ


ಪಟಾಕಿ ಸಿಡಿದು ಮಗುವಿಗೆ ಗಾಯ


ಗಂಧದಗುಡಿ ಸಾಕ್ಷ್ಯಚಿತ್ರ ಬಿಡುಗಡೆಯ‌ ಸಂಭ್ರಮಾಚರಣೆಯಲ್ಲಿ ಅವಘಡವೊಂದು ಸಂಭವಿಸಿದೆ. ಪಟಾಕಿ ಸಿಡಿದು ಮಗುವಿಗೆ ಗಾಯವಾಗಿರೋ ಘಟನೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದ ಬಳಿ ನಡೆದಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಮಗವಿನ ಬಲಗೈಗೆ ಗಾಯವಾಗಿದೆ. ಪಟಾಕಿ ಸಿಡಿಯುತ್ತಿದ್ದಂತೆ ತಂದೆ ತಾಯಿ ಸ್ಥಳಕ್ಕೆ ಆಗಮಿಸಿದ್ದಾರೆ. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

Published by:Precilla Olivia Dias
First published: