Power Star Puneeth Rajkumar; 6 ವರ್ಷದವರಿದ್ದಾಗ ಸ್ಟಾರ್ ನಟಿಯನ್ನು ಮದ್ವೆ ಆಗೋದಾಗಿ ಹೇಳಿದ್ರು ಪುನೀತ್ ರಾಜ್ಕುಮಾರ್
ತಾಯಿ ಪಾರ್ವತಮ್ಮ (Parvathamma Rajkumar) ಜೊತೆ ಸ್ಟುಡಿಯೋಗೆ ಹೋಗುತ್ತಿದ್ದರು. ಅಂದು ತಂದೆ ಜೊತೆ ನಟಿಸುತ್ತಿದ್ದ ಸ್ಟಾರ್ ನಟಿಯೊಬ್ಬರನ್ನು ಮದುವೆ ಆಗೋದಾಗಿ ಹೇಳಿದ್ದರು. ಅಂದು ನಡೆದ ಘಟನೆಯನ್ನು ನಟಿಯೇ ಮೆಲಕು ಹಾಕಿಕೊಂಡು ನಕ್ಕಿದ್ದರು. ಅದು ನನಗೆ ಮೊದಲ ಬಂದ ಪ್ರಪೋಸ್ ಎಂದು ಅಪ್ಪು (Appu) ತುಂಟತನವನ್ನು ಹೇಳಿದ್ದರು.
ಬೆಂಗಳೂರು: ನಟ ಸಾರ್ವಭೌಮ ಡಾ.ರಾಜಕುಮಾರ್ (Dr Rajkumar) ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ (Power Star Puneeth Rajkumar). ಹಾಗಾಗಿ ತಂದೆಯ ಜೊತೆ ಶೂಟಿಂಗ್ ಸೆಟ್ (Cinema Shooting) ಗೆ ತೆರಳುತ್ತಿದ್ದರು. ತಾಯಿ ಪಾರ್ವತಮ್ಮ (Parvathamma Rajkumar) ಜೊತೆ ಸ್ಟುಡಿಯೋಗೆ ಹೋಗುತ್ತಿದ್ದ. ಅಂದು ತಂದೆ ಜೊತೆ ನಟಿಸುತ್ತಿದ್ದ ಸ್ಟಾರ್ ನಟಿಯೊಬ್ಬರನ್ನು ಮದುವೆ ಆಗೋದಾಗಿ ಹೇಳಿದ್ದರು. ಅಂದು ನಡೆದ ಘಟನೆಯನ್ನು ನಟಿಯೇ ಮೆಲಕು ಹಾಕಿಕೊಂಡು ನಕ್ಕಿದ್ದರು. ಅದು ನನಗೆ ಮೊದಲ ಬಂದ ಪ್ರಪೋಸ್ ಎಂದು ಅಪ್ಪು (Appu) ತುಂಟತನವನ್ನು ಹೇಳಿದ್ದರು. ಆ ಸ್ಟಾರ್ ನಟಿ ಬೇರೆ ಯಾರೂ ಅಲ್ಲ ನಟಿ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)
ಅಪ್ಪು ಜೊತೆ ಆಟವಾಡುತ್ತಿದ್ದ ಸುಮಲತಾ
ಪುನೀತ್ ಅಂದು ಆರು ವರ್ಷದ ಬಾಲಕ. ಅವತ್ತು ರಾಜಕುಮಾರ್ ಅಭಿನಯದ ಚಿತ್ರಕ್ಕೆ ಸುಮಲತಾ ನಟಿಯಾಗಿದ್ದರು. ಅಂದು ಇಂದಿನಂತೆ ಶೂಟಿಂಗ್ ಸ್ಥಳಗಳಲ್ಲಿ ಅಷ್ಟೊಂದು ವ್ಯವಸ್ಥೆಗಳು ಇರುತ್ತಿರಲಿಲ್ಲ. ಆ ಸಮಯದಲ್ಲಿ ಸುಮಲತಾ ಅಲ್ಲಿಯೇ ಖಾಲಿ ಸಮಯದಲ್ಲಿ ಅಲ್ಲಿಯೇ ಇರುತ್ತಿದ್ದರು. ಸುಮಲತಾ ಅವರಿಗೂ ರವಿಚಂದ್ರ ಸಿನಿಮಾದಲ್ಲಿ ನಟಿಸುವಾಗ ಇನ್ನೂ 16 ವಯಸ್ಸು. ಹಾಗಾಗಿ ಅಂದು ಅಮ್ಮನ ಕಿರುಬೆರಳು ಹಿಡಿದು ಚಿತ್ರೀಕರಣಕ್ಕೆ ಬರುತ್ತಿದ್ದ ಪುನೀತ್ ಜೊತೆ ಸುಮಲತಾ ಆಟ ಆಡುತ್ತಾ ಸಮಯ ಕಳೆಯುತ್ತಿದ್ದರು. ಆದ್ರೆ ಜೊತೆಯಲ್ಲಿ ಆಟ ಆಡುತ್ತಿದ್ದ ಅಪ್ಪು, ನಿಮ್ಮನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದರು.
ಈ ವಿಷಯವನ್ನು ಸುಮಲತಾ ಅಂಬರೀಶ್ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್ ವಿಶೇಷ ಅತಿಥಿಯಾಗಿ ಬಂದಿದ್ದರು. ಅಂದು ವಿಡಿಯೋದ ಮೂಲಕ ಸುಮಲತಾರಿಗೆ ಸಂದೇಶ ಕಳುಹಿಸಿದ್ದ ಪುನೀತ್ ಸಹ ರವಿಚಂದ್ರ ಚಿತ್ರೀಕರಣ ವೇಳೆಯ ನೆನಪುಗಳನ್ನು ಹೇಳಿದ್ದರು.
ಪುನೀತ್ ಕಾಲೆಳೆಯುತ್ತಿದ್ದ ಅಂಬರೀಶ್
ಇನ್ನು ಸುಮಲತಾ ಅವರನ್ನು ಮದುವೆಯಾದ ಬಳಿಕ ಅಂಬರೀಶ್ ತಮ್ಮದೇ ಶೈಲಿಯಲ್ಲಿ ಪುನೀತ್ ಅವರ ಕಾಲೆಳೆಯುತ್ತಿದ್ದರು. ಯಾಕೋ ನನ್ನ ಹೆಂಡ್ತಿಗೆ ಲೈನ್ ಹಾಕ್ತಿದ್ದೀಯಾ ಎಂದು ಹೇಳಿ ತಮಾಷೆ ಮಾಡುತ್ತಿದ್ದರು. ಮಗನೇ ನೀನು ಆವಾಗಲೇ ನನ್ನ ಹೆಂಡತಿಯನ್ನು ಮದುವೆ ಆಗ್ತೀನಿ ಹೇಳಿದವನು ನೀನು ಎಂದು ಅಂಬರೀಶ್ ಹೇಳುತ್ತಿದ್ದರು .
ಮಲ್ಲೇಶ್ವರಂನ ಖ್ಯಾತ ಫಿಸಿಯೋಥೆರಪಿ ಕ್ಲಿನಿಕ್ ‘ಲಾ ಯಾತ್ರಾ’ ಗೆ ಅಪ್ಪು ಬೆನ್ನು ನೋವಿನ ಚಿಕಿತ್ಸೆಗೆ ಹೋಗುತ್ತಿದ್ದರಂತೆ. ಕೇವಲ 3 ವಾರಗಳ ಹಿಂದಷ್ಟೇ ಬೆನ್ನು ಮತ್ತು ಮೀನಖಂಡದ ಮಸಲ್ ಕ್ಯಾಚ್ ಆಗಿದೆ ಎಂದು ಅಲ್ಲಿನ ವೈದ್ಯ ಡಾ ಪಳನಿವೇಲ್ ರನ್ನು ಭೇಟಿ ಮಾಡಿದ್ದರಂತೆ ಅಪ್ಪು. ಅವರಿಗೆ ಎರಡು ಸೆಶನ್ ಫಿಸಿಯೋ ಮತ್ತು ಮಸಾಜ್ ಮಾಡಿ ನೋವಿನಿಂದ ಮುಕ್ತಿ ನೀಡಿದ್ದರು ಇಲ್ಲಿನ ತಜ್ಞರ ತಂಡ. ಆದ್ರೆ ಯುವರತ್ನ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಖುದ್ದು ಪುನೀತ್ ಡಾ ಪಳನಿವೇಲ್ಗೆ ತಿಳಿಸಿದ್ದರಂತೆ. ಈ ಮಾತನ್ನು ಖುದ್ದು ಡಾ ಪಳನಿವೇಲ್ ನ್ಯೂಸ್ 18 ಕನ್ನಡ ಜೊತೆ ಹಂಚಿಕೊಂಡಿದ್ದಾರೆ.
ರಾಜ್ ಕುಟುಂಬದಲ್ಲಿ ದು:ಖದ ವಾತವರಣ ಆವರಿಸಿದೆ. ಅಭಿಮಾನಿಗಳ ಕಣ್ಣಲ್ಲಿ ಕಣ್ಣೀರು ಹರಿದು ಬರುತ್ತಿದೆ. ನೆಚ್ಚಿಕೊಂಡ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲಾಗದಂತಿದೆ. ಅಪ್ಪು ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ನಾಯಕನಾಗಿ ಎಂಟ್ರಿ ಕೊಟ್ಟ ಡಾ ರಾಜ್ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಚಿರ ನಿದ್ರೆಗೆ ಜಾರಿದ್ದಾರೆ ಎಂಬುದು ಸ್ಯಾಂಡಲ್ವುಡ್ಗೆ ದೊಡ್ಡ ಆಘಾತ ಉಂಟುಮಾಡಿದೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ