Puneeth Rajkumar 11ನೇ ದಿನ ಪುಣ್ಯಸ್ಮರಣೆ ಕಾರ್ಯ ನೆರವೇರಿಸಿದ ಕುಟುಂಬ: ಅಪ್ಪು ಅಮರಶ್ರೀ ಅಂದ್ರು ಶಿವಣ್ಣ

ಸಮಾಧಿ ಸ್ಥಳಕ್ಕೆ ಆಗಮಿಸಿದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳು ಆಗಮಿಸಿ ನಮನ ಸಲ್ಲಿಸಿದರು. 11ನೇ ದಿನ ಕಾರ್ಯ ಹಿನ್ನೆಲೆ ಅಪ್ಪು ಅವರಿಗೆ ಇಷ್ಚವಾದ ಆಹಾರವನ್ನು ಪೂಜೆಗೆ ಇರಿಸಲಾಗಿತ್ತು.

ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್

  • Share this:
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಗಲಿ ಇಂದಿಗೆ 11ನೇ ದಿನ. ಈ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ (Kantheerava Studio) ಆಗಮಿಸಿದ ದೊಡ್ಮನೆ ಕುಟುಂಬ ಅಪ್ಪು (Appu) ಸಮಾಧಿಗೆ ಪೂಜೆ ಸಲ್ಲಿಸಿದರು. ಸಮಾಧಿ ಸ್ಥಳಕ್ಕೆ ಆಗಮಿಸಿದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳು ಆಗಮಿಸಿ ನಮನ ಸಲ್ಲಿಸಿದರು. 11ನೇ ದಿನ ಕಾರ್ಯ ಹಿನ್ನೆಲೆ ಅಪ್ಪು ಅವರಿಗೆ ಇಷ್ಚವಾದ ಆಹಾರವನ್ನು ಪೂಜೆಗೆ ಇರಿಸಲಾಗಿತ್ತು. ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್ (Shivarajkumar), ಇವತ್ತು ಬೆಳಗ್ಗೆ ಅಪ್ಪುಗೆ ಈ ಎಲ್ಲ ಕಾರ್ಯ ಮಾಡಬೇಕಾ ಅಂತ ಬಂದಾಗ ತುಂಬಾ ನೋವಾಯ್ತು. ಅಭಿಮಾನಿಗಳಲ್ಲಿಯೇ ಆತನನ್ನು ಕಾಣುತ್ತಿದ್ದೇವೆ,ಯಾರು ಸಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು.

ಚಿಕ್ಕ ವಯಸ್ಸಿನಿಂದಲೂ ಅಪ್ಪು ಬೆಳವಣಿಗೆಯನ್ನು ನೋಡಿಕೊಂಡು ಬಂದಿದ್ದೇನೆ. ಇನ್ನು ಅಭಿಮಾನಿಗಳು ಅಪ್ಪುನನ್ನು ಆರಾಧಿಸುತ್ತಿದ್ದರು. ಅವರ ನೋವು ಏನು ಎಂಬವುದು ಎಂದು ನಮಗೆ ಅರ್ಥವಾಗುತ್ತದೆ. ಶೀಘ್ರದಲ್ಲೇ ಪೊಲೀಸರು ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋಳಗೆ ಪ್ರವೇಶಿಸಲು ಅನುಮತಿ ನೀಡಲಿದ್ದಾರೆ. ನಾಳೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ತಿಥಿ ಕಾರ್ಯದ ಅಂಗವಾಗಿ ಅನ್ನ ಸಂತರ್ಪಣೆ , ಮನೆಯಲ್ಲಿಯೂ ಪೂಜೆ ಸಲ್ಲಿಸಲಾಗುತ್ತದೆ ಎಂದರು.

ಇದನ್ನೂ ಓದಿ: Puneeth Rajkumar: `ಪರಮಾತ್ಮ‘ನ ಪುಣ್ಯಸ್ಮರಣೆ, ನೋವಿನಲ್ಲೂ ಪರೀಕ್ಷೆ ಬರೆಯಲಿರೋ ಅಪ್ಪು ಪುತ್ರಿ ವಂದಿತಾ!

ಇದೇ ವೇಳೆ ಪುನೀತ್ ಅವರಿಗೆ ಪದ್ಮಶ್ರೀ ನೀಡಬೇಕೆಂಬ ಅಭಿಮಾನಿಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಅಪ್ಪು ಎಲ್ಲರ ಹೃದಯದಲ್ಲಿ ಶ್ರೀ ಆಗಿರುತ್ತಾನೆ. ಅವನು ಅಮರಶ್ರೀ ಎಂದು ಹೇಳಿದರು. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳಿಗೆ ಪುಲಾವ್ ಮತ್ತು ಕೇಸರಿಬಾತ್ ವಿತರಿಸಲಾಯ್ತು. 11ನೇ ಕಾರ್ಯ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು, ನಟ ಮುರಳಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿಂತೆ ಅತ್ಯಾಪ್ತರು ಉಪಸ್ಥಿತರಿದ್ದರು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಮೊದಲ ಪ್ರತಿಕ್ರಿಯೆ

ಅಪ್ಪು ನಿಧನ ಬಳಿಕ ಮೊದಲ ಬಾರಿಗೆ ಪತ್ನಿ ಅಶ್ವಿನಿ ಪತ್ರದ ಮೂಲಕ ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರಿಗೆ ಧನ್ಯವಾದ ತಿಳಿಸಿ ಪತ್ರ ಕಳುಹಿಸಿದ್ದಾರೆ. ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕಿತ್ತು. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿ, ಮೆರವಣಿಗೆ ಹಾಗೂ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ನಿಯೋಜಿಸಿ, ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ಧಕ್ಕೆ ಆಗದಂತೆ ನೋಡಿಕೊಂಡಿದ್ದೀರಿ ಎಂದು ಬರೆದಿದ್ದಾರೆ.

ಇದನ್ನೂ ಓದಿ:  Puneeth Rajkumar : ಇಂದು ಅಪ್ಪು ಪುಣ್ಯತಿಥಿ: ಮಧ್ಯಾಹ್ನ 12ರವೆಗೆ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗಿಲ್ಲ ಅವಕಾಶ

ನಮ್ಮ ಇಡೀ ಕುಟುಂಬ ಹಾಗೂ ಎಲ್ಲ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ಎಲ್ಲ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪತ್ರ ಮುಖೇನ ಅಶ್ವಿನಿ ಪುನೀತ್ ರಾಜ್​​ಕುಮಾರ್ ಧನ್ಯವಾದ ಹೇಳಿದ್ದಾರೆ.

ಚಿತ್ರಮಂದಿರಗಳಲ್ಲಿ ಶ್ರದ್ದಾಂಜಲಿ

ಕನ್ನಡ ಚಿತ್ರರಂಗ (Kannada Film Industry) ಸಹ ನ.16ರಂದು ದೊಡ್ಡ ಮಟ್ಟದಲ್ಲಿ ಗೌರವ ಸಲ್ಲಿಸಲು ನಿರ್ಧರಿಸಿದೆ. ಭಾನುವಾರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ (Theaters) ಏಕಕಾಲಕ್ಕೆ ನೆಚ್ಚಿನ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಂಗಳೂರಿನ ಮಲ್ಟಿಪ್ಲೆಕ್ಸ್​​ ಗಳು ಸೇರಿದಂತೆ ಪ್ರತಿ ಜಿಲ್ಲೆಗಳ ಥಿಯೇಟರ್​ ಗಳ ಮಾಲೀಕರು, ಅಭಿಮಾನಿಗಳು (Theatre Owners and Fans) ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಜೆ ೬ ಗಂಟೆಗೆ ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ರಾಜ್ಯಾದ್ಯಂತ 650 ಥಿಯೇಟರ್ ಗಳಲ್ಲಿ ಏಕಕಾಲದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದೆ. ಥಿಯೇಟರ್​​ಗಳ ಮಾಲೀಕರು, ಸಿಬ್ಬಂದಿ ಹಾಗೂ ಅಭಿಮಾನಿಗಳು ಭಾಗಿಯಾಗಿ ಮೇಣದೀಪ, ಮೊಬೈಲ್​​ ಲೈಟ್​​ ಹಚ್ಚಿ 2 ನಿಮಿಷದ ಮೌನಾಚರಣೆ ನಡೆಸಿ   ಗೌರವ ಸಲ್ಲಿಸಿದ್ದಾರೆ. ಬೆಂಗಳೂರಿನ ವೀರೇಶ್ ಥಿಯೇಟರ್ ನಲ್ಲಿ ಅಭಿಮಾನಿಗಳು ಅಪ್ಪು ಅಪ್ಪು ಘೋಷಣೆ ಮುಗಿಲು ಮುಟ್ಟುವಂತಿತ್ತು.
Published by:Mahmadrafik K
First published: