Puneeth Rajkumar: ಅರಮನೆ ಮೈದಾನದಲ್ಲಿ ‘ಪುನೀತ ನಮನ‘, ಕಾರ್ಯಕ್ರಮಕ್ಕೆ ಯಾರೆಲ್ಲ ಬರ್ತಿದ್ದಾರೆ?

ಗಾಯಿತ್ರಿ ವಿಹಾರ್ ಸಾಗರ್ ಹಾಲ್ ಅಲ್ಲಿ 2000 ಆಸನಗಳ ಸಿದ್ಧತೆ ಮಾಡಲಾಗಿದೆ. ಇದರಲ್ಲಿ 750 ವಿವಿಐಪಿ, 200 ಮಂದಿಗೆ ಕೂರಲು ಸೋಫಾ, 1250 ವಿಐಪಿ ಆಸನಗಳ ಸಿದ್ಧತೆ ಮಾಡಲಾಗಿದೆ. ವೇದಿಕೆ ಮೇಲೆ ಸಂಪೂರ್ಣ LED ವ್ಯವಸ್ಥೆ ಇರಲಿದೆ. 750 ವಿವಿಐಪಿ ಆಸನಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ

ಪುನೀತ ನಮನ

ಪುನೀತ ನಮನ

  • Share this:
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ ನಮನ (Puneetha Namana) ಕಾರ್ಯಕ್ರಮನ್ನು ಅರಮನೆ ಮೈದಾನದಲ್ಲಿ (Palace Ground) ಆಯೋಜಿಸಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಡಿನ ಮೂಲಕ ಅಪ್ಪುಗೆ ಗೀತ ನಮನ ಸಲ್ಲಿಸಲಾಗುತ್ತೆ. ಈ ಗೀತೆಯನ್ನು ಗಾಯಕ ವಿಜಯ್ ಪ್ರಕಾಶ್ (Singer Vijay Prakash) ಹಾಡಲಿದ್ದಾರೆ. ಅಪ್ಪು ಅವರ ಸಿನಿಮಾ ಜರ್ನಿ ಮತ್ತು ಸಾಮಾಜಿಕ ಎರಡೂ ವಿಚಾರಗಳನ್ನ ಸೇರಿಸಿ ಹಾಡು ರಚಿಸಲಾಗಿದೆ. ನಂತರ  ಹಲವು ಗಾಯಕ,ಗಾಯಕಿಯರು ವೇದಿಕೆ ಮೇಲೆ ಅಪ್ಪು ಹಾಡುಗಳ ಹಾಡುವ ಮೂಲಕ ನಮನ ಸಲ್ಲಿಸಲಿದ್ದಾರೆ.

ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಚಂದನವನದ ಸುಮಾರು 150ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಲಿದ್ದಾರೆ ಎಂದು ಚಲನಚಿತ್ರ ಮಂಡಳಿ ಹೇಳಿದೆ. ತೆಲುಗು, ತಮಿಳು, ಮಲೆಯಾಳಂ,ಹಿಂದಿ ಚಿತ್ರರಂಗದ ಹಲವು ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಸ್ಮರಿಸಿ, ನಮಿಸುವ ಕಾರ್ಯಕ್ರಮ

ಗಾಯತ್ರಿ ವಿಹಾರಕ್ಕೆ ಆಗಮಿಸಿ ಪುನೀತ ನಮನ' ಕಾರ್ಯಕ್ರಮದ ಸಿದ್ಧತೆಯನ್ನು ಸಂಗೀತ ನಿರ್ದೇಶಕ ಗುರುಕಿರಣ್ ವೀಕ್ಷಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಗುರುಕಿರಣ್, ಇದು ಮನರಂಜನಾ ಕಾರ್ಯಕ್ರಮವಲ್ಲ. ಪುನೀತ್ ನಮನ ಅಪ್ಪು ಅವರನ್ನ ಸ್ಮರಿಸಿ, ನಮಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಇದನ್ನೂ ಓದಿ:  Power Star Puneeth Rajkumar; ಬರ್ತ್ ಡೇ ಪಾರ್ಟಿಯಲ್ಲಿ ಅಪ್ಪು ಆರೋಗ್ಯ ಹೇಗಿತ್ತು? Guru Kiran ಹೇಳಿದ್ದೇನು?

ಅಪ್ಪು  ಅವರ ಸಿನಿಮಾಗಳ ಆಯ್ದ ಕೆಲ ಗೀತೆಗಳನ್ನ ಹಾಡಲಾಗುತ್ತದೆ. ಅಪ್ಪು ಸಂಪೂರ್ಣ ಕುಟುಂಬ ಇವತ್ತಿನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತದೆ. ದಕ್ಷಿಣ ಭಾರತದ ಎಲ್ಲರಿಗೂ ಆಹ್ವಾನ ಕಳುಹಿಸಲಾಗಿದೆ. ಯಾರ್ಯಾರು ಬರ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಕಾರ್ಯಕ್ರಮದ ಒಂದು ಪಾರ್ಟ್ ನಾನು ಲೀಡ್ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಶಿವಮಣಿ, ಪಟ್ನಾಯಕ್ ಆಗಮನ

ಸುಮಾರು 40 - 50 MIP ಅಪ್ಪು ಬಗ್ಗೆ ತಮ್ಮ ನೆನಪನ್ನ ಹಂಚಿಕೊಳ್ಳುತ್ತಾರೆ. ಪುನೀತ್ ನಮನ ಮನರಂಜನಾ ಕಾರ್ಯಕ್ರಮ ಅಲ್ಲ, ನೆನಪು ಮೆಲಕು ಹಾಕುವ ಕಾರ್ಯಕ್ರಮ. ವಾದ್ಯಗಾರ ಶಿವಮಣಿ, ಸಂಗೀತ  ನಿರ್ದೇಶಕ R. P ಪಟ್ನಾಯಕ್ ಬರುತ್ತಿದ್ದಾರೆ. ಪಟ್ನಾಯಕ್ ಒಂದು ಹಾಡನ್ನ ಹಾಡಲಿದ್ದಾರೆ ಎಂದು ಗುರುಕಿರಣ್ ಮಾಹಿತಿ ನೀಡಿದರು.

2,000 ಆಸನಗಳ ಸಿದ್ಧತೆ

ಗಾಯಿತ್ರಿ ವಿಹಾರ್ ಸಾಗರ್ ಹಾಲ್ ಅಲ್ಲಿ 2000 ಆಸನಗಳ ಸಿದ್ಧತೆ ಮಾಡಲಾಗಿದೆ. ಇದರಲ್ಲಿ 750 ವಿವಿಐಪಿ, 200 ಮಂದಿಗೆ ಕೂರಲು ಸೋಫಾ, 1250 ವಿಐಪಿ ಆಸನಗಳ ಸಿದ್ಧತೆ ಮಾಡಲಾಗಿದೆ. ವೇದಿಕೆ ಮೇಲೆ ಸಂಪೂರ್ಣ LED ವ್ಯವಸ್ಥೆ ಇರಲಿದೆ. 750 ವಿವಿಐಪಿ ಆಸನಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಈಗಾಗಲೇ ವಾಣಿಜ್ಯ ಮಂಡಳಿ 2000 ಪಾಸ್ ಗಳ ವಿತರಣೆ ಮಾಡಿದೆ.

ಇದನ್ನೂ ಓದಿ:  RIP Puneeth Rajkumar; ಬೆಟ್ಟದ ಹೂ ಬಾಡುವ ಬಗ್ಗೆ ಭವಿಷ್ಯ ನುಡಿದಿದ್ದ ಅಜ್ಜಯ್ಯ; ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದ ಶ್ರೀಗಳು!

ಮೂರು ಪ್ರವೇಶ ದ್ವಾರ

ಗಾಯಿತ್ರಿ ವಿಹಾರದ ಸಾಗರ್ ಹಾಲ್ ಗೆ ಮೂರು ಪ್ರವೇಶ ದ್ವಾರ ಕಲ್ಪಿಸಲಾಗಿದೆ. MPI, VVIP, VIP ಗಳಿಗೆ ಮೂರು ದ್ವಾರಗಳನ್ನು ನಿರ್ಮಿಸಲಾಗಿದೆ. 150ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆ ನೇಮಿಸಲಾಗಿದೆ. ಪಾಸ್ ಪಡೆವರಿಗೆ ಕಾರ್ಯಕ್ರಮಕ್ಕೆ ಪ್ರವೇಶ ಸಿಗಲಿದೆ.ವಿಮಾನ ನಿಲ್ದಾಣದಲ್ಲಿ ಬಂದೋಬಸ್ತ್

ಪುನೀತ ನಮನ ಕಾರ್ಯಕ್ರಮಕ್ಕೆ ಮುಂಬೈ, ಹೈದರಾಬಾದ್ ಮತ್ತು ಚೆನೈನಿಂದ ಬೆಂಗಳೂರಿಗೆ ಸಿನಿ ದಿಗ್ಗಜರು ಆಗಮಿಸುತ್ತಿರುವ  ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತ  ಕ್ರಮವಾಗಿ 20ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಮಧ್ಯಾಹ್ನಾ 12 ಗಂಟೆ ನಂತರ ನಟ-ನಟಿಯರು ಬೆಂಗಳೂರಿಗೆ ಬರಲಿದ್ದಾರೆ.

ಅಭಿಮಾನಿಗಳಿಗಾಗಿ ಮತ್ತೊಂದು ಕಾರ್ಯಕ್ರಮ

ತಮಿಳು ನಟ ವಿಶಾಲ್, ಅಲಿ ಬರುತ್ತಿದ್ದಾರೆ.  ತೆಲುಗು ನಟ ನಾಗಾರ್ಜುನ ಬರುವುದಾಗಿ ಭರವಸೆ ನೀಡಿದ್ದಾರೆ. ಕಮಲ ಹಸನ್ ಅವರು ಶೂಟಿಂಗ್ ಗಾಗಿ ವಿದೇಶದಲ್ಲಿದ್ದಾರೆ ೨೪ರಂದು ವಾಪಸ್ ಆಗುತ್ತಿದ್ದು ತಕ್ಷಣ ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇದು ಚಿತ್ರರಂಗದ ಕಾರ್ಯಕ್ರಮ ಹೀಗಾಗಿ ಸಾರ್ವಜನಿಕರಿಗೆ ಬರಲು ಅವಕಾಶ ಇಲ್ಲ. ಹಾಗಂತ ನಿರಾಸೆಗೊಳ್ಳಬೇಕಿಲ್ಲ. ಯಾಕಂದ್ರೆ ಕರ್ನಾಟಕದ ಮಧ್ಯ ಭಾಗದಲ್ಲಿ ಅಭಿಮಾನಿಗಳಿಗೆಂದೇ ಕಾರ್ಯಕ್ರಮ ಮಾಡಲಿದ್ದೇವೆ ನ್ಯೂಸ್ ೧೮ ಕನ್ನಡ ವಾಹಿನಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎ. ಗಣೇಶ್ ಹೇಳಿದ್ದಾರೆ.
Published by:Mahmadrafik K
First published: