• Home
  • »
  • News
  • »
  • state
  • »
  • Pulwama Attack: ಹುತಾತ್ಮರ ಕುಟುಂಬದ ನೆರವಿಗೆ ಮುಂದಾದ ಸೆಲೆಬ್ರಿಟಿಗಳು..!

Pulwama Attack: ಹುತಾತ್ಮರ ಕುಟುಂಬದ ನೆರವಿಗೆ ಮುಂದಾದ ಸೆಲೆಬ್ರಿಟಿಗಳು..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಎಲ್ಲೆಡೆಯಿಂದ ನೆರವಿನ ಹೊಳೆ ಹರಿದು ಬರುತ್ತಿದೆ. ಭಾರತೀಯ ಸಿನಿ ರಂಗವೂ ಸಾವನ್ನಪ್ಪಿದ ಯೋಧರಿಗೆ ಆರ್ಥಿಕ ನೆರವಿಗೆ ದಾವಿಸಿದೆ.

  • News18
  • 2-MIN READ
  • Last Updated :
  • Share this:

ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಸಿಆರ್​ಪಿಎಫ್​ ಯೋಧರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿಯಿಂದಾಗಿ 40ಕ್ಕೂ ಹೆಚ್ಚು ಮಂದಿ ಹುತ್ಮಾತರಾಗಿದ್ದಾರೆ. ಉಗ್ರರ ಈ ಕೃತ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Happy Birthday DBoss: ದರ್ಶನ್​ ಹುಟ್ಟುಹಬ್ಬಕ್ಕೆ ಹಾಡುಗಳನ್ನು ಉಡುಗೊರೆಯಾಗಿ ನಿಡಿರುವ ಡಿಬಾಸ್​ ಅಭಿಮಾನಿಗಳು

ಈಗಾಗಲೇ ಸಾಕಷ್ಟು ಮಂದಿ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗುತ್ತಿದ್ದು, ತಮ್ಮ ಕೈಲಾದ್ದನ್ನು ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಈ ವಾರವಷ್ಟೆ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿರುವ 'ಕೆಮಿಸ್ರ್ಟಿ ಆಫ್ ಕರಿಯಪ್ಪ' ಚಿತ್ರತಂಡ, ಮೃತ ಯೋಧ ಗುರು ಕುಟುಂಬಕ್ಕೆ ನೆರವಾಗಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನದ ಸಂಪೂರ್ಣ ಗಳಿಕೆಯನ್ನು ಗುರು ಕುಟುಂಬಕ್ಕೆ ನೀಡಲು ಚಿತ್ರತಂಡ ನಿರ್ಧರಿಸಿದೆ.

'ಬಿಗ್ ಬಾಸ್ ಸೀಸನ್​ 3'ರ ಖ್ಯಾತಿಯ ನಟ ಭುವನ್ ಪೊಣ್ಣನ್ನ ಹುತಾತ್ಮ ಗುರು ಕುಟುಂಬದವರಿಗೆ ಒಂದು ಲಕ್ಷ ನೀಡಿದ್ದು, ಅವರಿಗೆ ಸಾಂತ್ವನ ಹೇಳಿದ್ದಾರೆ.

ಇನ್ನೂ ಬಾಲಿವುಡ್​ ಸಿನಿಮಾ 'ಉರಿ- ಸರ್ಜಿಕಲ್​ ದ ಸ್ಟ್ರೈಕ್​' ಸಿನಿಮಾ ತಂಡ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಲು ಒಂದು ಕೋಟಿ ನೀಡಲು ನಿರ್ಧರಿಸಿದೆ. ಆರ್​ ಎಸ್​ ವಿ ಪ್ರೊಡಕ್ಷನ್ಸ್​ ಮುಖ್ಯಸ್ಥ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

 ಇನ್ನೂ ಬಾಲಿವುಡ್​ ನಟರೂ ಸಹ ಹುತಾತ್ಮ ಯೋಧರಿಗೆ ಆರ್ಥಿಕವಾಗಿ ನೆರವಾಗಲು ಮುಂದಾಗಿದ್ದಾರೆ. ನಟ ಅಮಿತಾಭ್​ 2 ಕೋಟಿ, ಗಾಯಕ ಹಾಗೂ ನಟ ದಿಲ್​ಜಿತ್​ ದೋಸಾಂಜ್​ 3 ಲಕ್ಷ  ಸಿದ್ದಿ ವಿನಾಯಕ ದೇವಲಾಯದ ಟ್ರಸ್ಟ್​ 51 ಲಕ್ಷ, ನೀಡಿದರೆ,  ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್​ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಟ್ವೀಟ್​ ಮಾಡಿದ್ದಾರೆ.​

 


ನಟ ಸಲ್ಮಾನ್​ ಸಹ ಬೀಯಿಂಗ್​ ಹ್ಯೂಮನ್​ ವತಿಯಿಂದ ಯೋಧರ ನೆರವಿಗೆ ಬಂದಿದ್ದಾರೆ.

 
ಮಂಡ್ಯದ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಮಂಡ್ಯದ ದೊಡ್ಡ ಅರಸನಕೆರೆಯಲ್ಲಿ ಅರ್ಧ ಏಕರೆ ಜಮೀನು ನೀಡುವುದಾಗಿ ನಟಿ ಸುಮಲತಾ ತಿಳಿಸಿದ್ದಾರೆ.ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಯಾರು ಎಷ್ಟೇ ಸಾಂತ್ವನ ಹೇಳಿದರು, ಆರ್ಥಿಕ ನೆರವಾದರೂ ಅವರ ದುಃಖವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.

First published: