ಬಿಜೆಪಿ ಗೆಲುವಿಗೆ ಪುಲ್ವಾಮಾದಂಥ ಘಟನೆಗಳೇ ಕಾರಣ; ಸೋಲಿಗೆ ಎಂಬಿ ಪಾಟೀಲ್ ಸಮರ್ಥನೆ

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಎಸ್​ಎಂ ಕೃಷ್ಣ ಅವರನ್ನು ರೆಬೆಲ್​ ನಾಯಕ ರಮೇಶ್​ ಜಾರಕಿಹೊಳಿ ಭಾನುವಾರ ಭೇಟಿ ಮಾಡಿದ್ದರು. ಈ ಬಗ್ಗೆಯೂ ಪಾಟೀಲ್​ ಸ್ಪಷ್ಟನೆ ನೀಡಿದ್ದು, ಇದು ಕೇವಲ ಊಹಾಪೋಹ ಎಂದಿದ್ದಾರೆ.

Rajesh Duggumane | news18
Updated:May 27, 2019, 2:37 PM IST
ಬಿಜೆಪಿ ಗೆಲುವಿಗೆ ಪುಲ್ವಾಮಾದಂಥ ಘಟನೆಗಳೇ ಕಾರಣ; ಸೋಲಿಗೆ ಎಂಬಿ ಪಾಟೀಲ್ ಸಮರ್ಥನೆ
ಮಾಜಿ ಸಚಿವ ಎಂ.ಬಿ. ಪಾಟೀಲ್​
  • News18
  • Last Updated: May 27, 2019, 2:37 PM IST
  • Share this:
ಬೆಂಗಳೂರು (ಮೇ 27): ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಪುಲ್ವಾಮಾದಂಥ ಘಟನೆಗಳು ಬಿಜೆಪಿಗೆ ಸಹಕಾರಿಯಾಯಿತು ಎಂದು ಗೃಹ ಸಚಿವ ಎಂಬಿ ಪಾಟೀಲ್​ ಹೇಳಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್​​ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಎಂಬಿ ಪಾಟೀಲ್​, “ಲೋಕಸಭೆ, ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ. ನಮ್ಮ ಸೋಲಿಗೆ ಕಾರಣ ಯಾವುದೇ ಇರಬಹುದು. ಜನರ ತೀರ್ಪನ್ನ ನಾವು ಒಪ್ಪಿಕೊಳ್ಳಲೇಬೇಕು. ಈಗ ನಾವು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಸೋಲಿನಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಎಸ್​ಎಂ ಕೃಷ್ಣ ಅವರನ್ನು ರೆಬೆಲ್​ ನಾಯಕ ರಮೇಶ್​ ಜಾರಕಿಹೊಳಿ ಭಾನುವಾರ ಭೇಟಿ ಮಾಡಿದ್ದರು. ಈ ಬಗ್ಗೆಯೂ ಪಾಟೀಲ್​ ಸ್ಪಷ್ಟನೆ ನೀಡಿದ್ದಾರೆ. “ಎಸ್ಎಂ ಕೃಷ್ಣ ನಮ್ಮ ನಾಯಕರಾಗಿದ್ದರು. ರಾಜಕೀಯ ಹೊರತಾಗಿ ಈ ಭೇಟಿ ನಡೆದಿದೆ. ನನಗೂ ಎಸ್​​ಎಂ ಕೃಷ್ಣ ಕರೆ ಮಾಡಿ ಮಾತನಾಡಿದ್ದರು. ಬಿಜೆಪಿ ನಾಯಕರು ನನ್ನನ್ನ ಭೇಟಿ ಮಾಡಿದ್ದರು. ಹಾಗಂತ ಅವರು ಕಾಂಗ್ರೆಸ್​ಗೆ ಬರುತ್ತಾರೆ ಎನ್ನುವ ಅರ್ಥವೇ,” ಎಂದು ಪ್ರಶ್ನಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.ಇದನ್ನೂ ಓದಿ: ಲಿಂಗಾಯತ ಧರ್ಮ ವಿವಾದ: ಫೋನ್​ನಲ್ಲಿ ಎಂಬಿ ಪಾಟೀಲ್ ಗರಂ; ಡಿಕೆಶಿ ಬಗ್ಗೆ ಕೆರಳಿದರಾ ಗೃಹ ಸಚಿವ?

ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್​ ಹೀನಾಯವಾಗಿ ಸೋತಿತ್ತು. ಇದರ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಈ ಬೆಳವಣಿಗೆ ನಡೆದರೆ ಡಿಕೆ ಶಿವಕುಮಾರ್​ ಅಥವಾ ಎಂಬಿ ಪಾಟೀಲ್​ ಅಧ್ಯಕ್ಷ ಸ್ಥಾನ ತುಂಬಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಎಂಬಿ ಪಾಟೀಲ್​ ಮಾತನಾಡಿದ್ದಾರೆ.

“ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಊಹಾಪೋಹದ ಸುದ್ದಿಗಳಿಗೆ ಉತ್ತರ ಕೊಡುವುದಿಲ್ಲ. ಈ ಹಿಂದೆಯೂ ನನಗೆ ಕೆಪಿಸಿಸಿ ಅಧ್ಯಕ್ಷನಾಗಲು ಅವಕಾಶ ಬಂದಿತ್ತು. ಆದರೆ, ನಿರಾಕರಿಸಿದ್ದೆ. ಈಗ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ ಅಂದಮೇಲೆ ನಾನು ಆ ಸ್ಥಾನಕ್ಕೇರುವ ಮಾತೇ ಇಲ್ಲ,” ಎಂದು ಎಂಬಿ ಪಾಟೀಲ್​ ಸ್ಪಷ್ಟನೆಯ ಮಾತು.ಇದನ್ನೂ ಓದಿ: ವಿಜಯಪುರದಲ್ಲಿ ಎಂಬಿ ಪಾಟೀಲ್​ ಬೆಂಬಲಿಗರಿಂದ ಪ್ರತಿಭಟನೆ

First published:May 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading