• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ankola: 'ಈ ಬಾಲಕಿ, ಈ ಬಾಲಕನ ಅರ್ಧಾಂಗಿ ಆಗ್ಬೇಕು'-ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ವಿವಾಹಿತೆಯನ್ನೇ ಮದುವೆಯಾಗ್ತಿನಿ ಎಂದ ಪೂಜಾರಿ!

Ankola: 'ಈ ಬಾಲಕಿ, ಈ ಬಾಲಕನ ಅರ್ಧಾಂಗಿ ಆಗ್ಬೇಕು'-ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ವಿವಾಹಿತೆಯನ್ನೇ ಮದುವೆಯಾಗ್ತಿನಿ ಎಂದ ಪೂಜಾರಿ!

ಅಂಕೋಲಾದ ಅಂಬಾರಕೊಡ್ಲದಲ್ಲಿ ವಿಚಿತ್ರ ಘಟನೆ

ಅಂಕೋಲಾದ ಅಂಬಾರಕೊಡ್ಲದಲ್ಲಿ ವಿಚಿತ್ರ ಘಟನೆ

ಕಾಂತಾರ ಸ್ಟೈಲ್ನಲ್ಲಿ ಈ ಬಾಲಕಿಯನ್ನ ಈ ಬಾಲಕ ಮದುಗೆಯಾಗುತ್ತಾನೆ ಎಂದು ಹೇಳಿದ ದೈವ ನರ್ತಕ ಪಾತ್ರಿ, ಈವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ ಎಂದು ಹೇಳಿದ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಕಾರವಾರ: ನಟ ರಿಷಬ್ ಶೆಟ್ಟಿ (Actor Reishab Shetty) ಅಭಿನಯದ ಕಾಂತಾರ ಸಿನಿಮಾ (Kantara Cinema) ನಾಡಿನ ಮನೆ ಮನೆಗೂ ತಲುಪಿದೆ. ಸಿನಿಮಾ ರಿಲೀಸ್ ಆದ ಬಳಿಕ ಜನರು ದೈವಗಳ (Daiva) ಮೊರೆ ಹೋಗುತ್ತಿದ್ದಾರೆ. ಕರಾವಳಿ ಭಾಗಕ್ಕೆ (Coastal Karnataka) ಬರುತ್ತಿರುವ ಪ್ರವಾಸಿಗರು ಕೋಲ ನೋಡಲು ಉತ್ಸುಕರಾಗಿದ್ದಾರೆ. ಈ ನಡುವೆ ಉತ್ತರ ಕನ್ನಡದ ಅಂಕೋಲಾದಲ್ಲೊಂದು (Ankola, Uttara Kannada) ವಿಶೇಷ ಘಟನೆ ನಡೆದಿದ್ದು, ದೇವರು ಹೇಳಿದಂತೆ ಪೂಜಾರಿ ಜೊತೆ ಭಕ್ತೆಯ ಮದುವೆ ನಡೆಸಲಾಗಿದೆ . ಆದರೆ ಕೆಲವರು ಲಾಭವಾಗಿ ಮಾಡಿಕೊಂಡು ದೈವದ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಮಹಿಳೆಯನ್ನು ಮದುವೆಯಾಗಲು ನರ್ತಕನೋರ್ವ ದೈವದ ಹೆಸರು ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.


ಏನಿದು ಘಟನೆ?


ಅಂಕೋಲಾ ಅಂಬಾರಕೊಡ್ಲ ಎಂಬ ಸ್ಥಳದಲ್ಲಿ ದೈವ ನರ್ತಕ ಪಾತ್ರಿ ಮಹಿಳೆಗೆ ಮೋಸ ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಂಬಾರಕೊಡ್ಲದಲ್ಲಿ ದೇವಸ್ಥಾನ ನಿರ್ಮಿಸಿ ಕಾಳಿ, ದುರ್ಗೆ, ಅರ್ಧನಾರೀಶ್ವರ ದೈವ ಮೈಮೇಲೆ ಬರುತ್ತದೆ ಎಂದು ಜನರನ್ನು ನಂಬಿಸಿದ್ದಾನೆ.




ಇದನ್ನು ನಂಬಿದ ಬೆಳಗಾವಿ ಮೂಲದ ಮಹಿಳೆಯೋರ್ವರು ಕಷ್ಟ ಪರಿಹಾರಕ್ಕಾಗಿ ದೈವ ನರ್ತಕ ಬಳಿ ಬಂದಿದ್ದರು. ದೈವದ ಹೆಸರಿನಲ್ಲಿ ಅಭಯವಿತ್ತ ನರ್ತಕ ನಿನ್ನನ್ನು ಮದುವೆ ಆಗುತ್ತೇನೆ ಎಂದು ನಂಬಿಸಿದ್ದಾನೆ. ಮಹಿಳೆಗೆ ಮದುವೆಯಾಗಿದ್ದು, ಗಂಡನಿಂದ ದೂರವಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ನರ್ತಕ ಸಹ ಪತ್ನಿಯಿಂದ ದೂರವಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Kantara: ದೈವ ನರ್ತಕರ ಮೇಲೆ ದೇವರು ಬರೋದು ಸುಳ್ಳು! ಅವರಿಗೆ ಮಾಸಾಶನ ನೀಡಬಾರದು ಎಂದ ಮಾಜಿ ಸಚಿವೆ!


ವಿಡಿಯೋ ವೈರಲ್


ಕಾಂತಾರ ಸ್ಟೈಲ್ನಲ್ಲಿ ಈ ಬಾಲಕಿಯನ್ನ ಈ ಬಾಲಕ ಮದುಗೆಯಾಗುತ್ತೇನೆ ಎಂದು ಹೇಳಿದ ದೈವ ನರ್ತಕ ಪಾತ್ರಿ, ಈವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ ಎಂದು ಹೇಳಿದ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ.


ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ ಇದು ಸತ್ಯ ಸತ್ಯ. ದೇವತಾ ಕಾರ್ಯದಲ್ಲಿ ಪಂಚೆಯನ್ನುಟ್ಟು ಮೈ ಮೇಲೆ ಅರಿಶಿನ ಚೆಲ್ಲಿಕೊಳ್ಳುತ್ತಾ, ಕಾಂತಾರ ಸ್ಟೈಲ್ನಲ್ಲಿ ಓ... ಎಂದು ಕೂಗುವ ವಿಡಿಯೋ ಹರಿದಾಡುತ್ತಿದೆ.


ಇದನ್ನೂ ಓದಿ: Actor Chetan: ನಟ ಚೇತನ್ ವಿರುದ್ಧ ದೈವನರ್ತಕರ ಆಕ್ರೋಶ, ಪಂಜುರ್ಲಿ ಮೊರೆ ಹೋಗಲು ನಿರ್ಧಾರ


ನೀನೇ ನನ್ನ ಅರ್ಧಾಂಗಿ!


ಕಳೆದ ಜನವರಿ 14 ರಂದು ಘಟನೆ ನಡೆದಿದ್ದು, ದೇವತಾ ಕಾರ್ಯದಲ್ಲಿ ಪಂಚೆಯನ್ನುಟ್ಟು ಮೈ ಮೇಲೆ ಅರಿಶಿನ ಚೆಲ್ಲಿಕೊಳ್ಳುತ್ತಾ ಕೂಗುತ್ತಿರುವ ಪೂಜಾರಿ ಚಂದ್ರಹಾಸ ನಾಯ್ಕನ ಮೇಲೆ ಕಾಳಿದೇವಿ ಬಂದಾಗ ಮದುವೆ ಬಗ್ಗೆ ಮಹಿಳೆ ಅಪ್ಪಣೆ ಕೇಳಿದ್ದರಂತೆ.


ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಪೂಜಾರಿ ನರ್ತನ ಮಾಡಿದ್ದಾರೆ. ಈ ವೇಳೆ ಪೂಜಾರಿ ಜೊತೆಯೇ ಮದುವೆ ಆಗಬೇಕೆಂದು ದೇವರು ಹೇಳಿತ್ತಂತೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ ಇದು ಸತ್ಯ ಸತ್ಯ ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಬಹುದು. ಇದರಂತೆ 2 ದಿನದಲ್ಲಿ ಈ ಪೂಜಾರಿಯೇ ತಾಳಿ ಕಟ್ಟಬೇಕೆಂದ ದೇವರು ದೇವರ ಆಜ್ಞೆಯಂತೆ, ಕಳೆದ ಎರಡ್ಮೂರು ದಿನಗಳ ಹಿಂದೆ ಮದುವೆ ನಡೆದಿದೆ ಎನ್ನಲಾಗಿದೆ.

Published by:Sumanth SN
First published: