• Home
 • »
 • News
 • »
 • state
 • »
 • Davanagere: ದೇವರ ಮೂರ್ತಿ ತಲೆ ಮೇಲೆ ಕಾಲಿಟ್ಟು ಪೂಜೆ! ಅರ್ಚಕನ ವಿರುದ್ಧ ಭುಗಿಲೆದ್ದ ಆಕ್ರೋಶ

Davanagere: ದೇವರ ಮೂರ್ತಿ ತಲೆ ಮೇಲೆ ಕಾಲಿಟ್ಟು ಪೂಜೆ! ಅರ್ಚಕನ ವಿರುದ್ಧ ಭುಗಿಲೆದ್ದ ಆಕ್ರೋಶ

ದೇವರ ಮೇಲೆ ಕಾಲಿಟ್ಟ ಅರ್ಚಕ

ದೇವರ ಮೇಲೆ ಕಾಲಿಟ್ಟ ಅರ್ಚಕ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕರು ದೇವರ ವಿಗ್ರಹದ ತಲೆ ಮೇಲೆ ಕಾಲಿಟ್ಟು ವಿಚಿತ್ರವಾಗಿ ಪೂಜೆ ಮಾಡಿ ಭಕ್ತರು ಹಾಗೂ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

ದಾವಣಗೆರೆ: ದೇವರ ಪೂಜೆ (Pooja)  ಅಂದ್ರೆ ಜನರು ಬಹಳ ನಿಯಮ- ನಿಷ್ಠೆಯಿಂದ ಮಾಡುತ್ತಾರೆ. ಇನ್ನು ದೇವಸ್ಥಾನಗಳಲ್ಲಿ (Temple) ಅರ್ಚಕರು ಅಭಿಷೇಕ ಪೂಜೆಯನ್ನು ಶಿಸ್ತು, ಶ್ರದ್ಧೆಯಿಂದ ಮಾಡೋದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಅರ್ಚಕರು (Priests) ದೇವರ ತಲೆ ಮೇಲೆ ಕಾಲಿಟ್ಟು ಅಭಿಷೇಕ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅರ್ಚಕರು ದೇವರ ತಲೆ ಮೇಲೆ ಕಾಲಿಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. 


ದಾವಣಗೆರೆಯಲ್ಲಿ ಅರ್ಚಕನ ವಿಚಿತ್ರ ಪೂಜೆ


ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕರು ದೇವರ ವಿಗ್ರಹದ ತಲೆ ಮೇಲೆ ಕಾಲಿಟ್ಟು ವಿಚಿತ್ರವಾಗಿ ಪೂಜೆ ಮಾಡಿ ಭಕ್ತರು ಹಾಗೂ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​


ಈ ಅರ್ಚಕ ಮಹೇಶ್ವರಯ್ಯ, ಆಂಜನೇಯ ಸ್ವಾಮಿಯ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಾರೆ. ಅರ್ಚಕನ ಪೂಜೆ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಅರ್ಚಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


ದೇವರ ಮೇಲೆ ಕಾಲಿಟ್ಟ ಅರ್ಚಕ


ಅರ್ಚಕನ ವಿರುದ್ಧ ಆಕ್ರೋಶ


ದೇವರು ಅಂದ್ರೆ ನಮ್ಮ ಜನರಲ್ಲಿ ಭಯ-ಭಕ್ತಿ ಇದೆ. ಶ್ರದ್ಧೆಯಿಂದ ದೇವರಿಗೆ ನಮಿಸುತ್ತಾರೆ. ಅರ್ಚಕರು ಸಹ ಶ್ರದ್ಧೆ ದೇವರಿಗೆ ನಡೆದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬರು ಅರ್ಚಕರು ಆಂಜನೇಯ ಮೂರ್ತಿ ತಲೆ ಮೇಲೆ ಕಾಲಿಟ್ಟು  ವಿಚಿತ್ರವಾಗಿ ಪೂಜೆ ಮಾಡಿದ್ದಾರೆ. ಅರ್ಚಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ


ಬಳ್ಳಾರಿಯ ಕೃಷ್ಣಾನಗರ ಕ್ಯಾಂಪನ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Abhaya Anjaneya Swamy Temple)  ಮಾಜಿ ಸಚಿವ ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ ಮಾಡಿದ್ದಾರೆ. ಇಂದು (ಅ.22) ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರೆಡ್ಡಿ ಅಭಿಮಾನಿ ಆಲಪಾಟಿ ಶ್ರೀನಿವಾಸನಿಂದ ಲೋಕ ಕಲ್ಯಾಣಾರ್ಥ ಗಣಪತಿ ಹೋಮ ಮತ್ತು ತುಲಾಭಾರ ಆಯೋಜನೆ ಮಾಡಲಾಗಿತ್ತು. ರೆಡ್ಡಿ ದಂಪತಿ ಹೋಮ ಹಾಗೂ ಪೂಜೆಯಲ್ಲಿ ಎರಡು ತಾಸು ಪಾಲ್ಗೊಂಡರು. ಬಳಿಕ ಜನಾರ್ದನ ರೆಡ್ಡಿಗೆ (Janardhana Reddy) ನಾಣ್ಯದ ತುಲಾಭಾರ ಮಾಡಲಾಯ್ತು.


ಶನಿವಾರ ಲೋಕ ಕಲ್ಯಾಣಾರ್ಥ ದೇವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತುಲಾಭಾರ ಆಯೋಜಿಸಲಾಗಿತ್ತು. ಜನಾರ್ದನ ರೆಡ್ಡಿ ಅವರ ಅಭಿಮಾನಿ, ರೈತ ಆಲಪಾಟಿ ಶ್ರೀನಿವಾಸ ಕಾರ್ಯಕ್ರಮ ಆಯೋಜಿಸಿದ್ದರು. ಎರಡು ತಾಸು ನೆರವೇರಿದ ಹೋಮದಲ್ಲಿ ಜನಾರ್ದನ ರೆಡ್ಡಿ ದಂಪತಿ ಭಾಗಿಯಾದರು.


ಇದನ್ನೂ ಓದಿ:  Jokumaraswamy: ನಿಮ್ಮ ಕಷ್ಟಗಳನ್ನ ಡೈರೆಕ್ಟ್ ಆಗಿ ದೇವರಿಗೇ ತಿಳಿಸೋನೀತ!


ತಿರುಪತಿ ತಿರುಮಲ ದೇವಾಯಕ್ಕೆ ದೇಣಿಗೆ  


ಚೆನ್ನೈ ಮೂಲದ ಮುಸ್ಲಿಂ ದಂಪತಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಸುಬೀನಾ ಬಾನು ಮತ್ತು ಅವರ ಪತಿ ಅಬ್ದುಲ್ ಘನಿ ಇಷ್ಟು ದೊಡ್ಡ ಮೊತ್ತದ ದೇಣಿಗೆ ನೀಡಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅಲ್ಲದೇ ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ದಂಪತಿ ₹ 87 ಲಕ್ಷ ಮೌಲ್ಯದ ಪೀಠೋಪಕರಣ ಹಾಗೂ ಪಾತ್ರೆಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಇಷ್ಟಲ್ಲದೇ ಇದೇ ಮುಸ್ಲಿಂ ದಂಪತಿ ಎಸ್‌ವಿ ಅನ್ನ ಪ್ರಸಾದ ಟ್ರಸ್ಟ್‌ಗೆ ₹ 15 ಲಕ್ಷದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಹ ಹಸ್ತಾಂತರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.


 ಇದನ್ನೂ ಓದಿ:  Dalit Family: ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ದಂಡ; ಪ್ರಕರಣ ದಾಖಲು


ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮ ರೆಡ್ಡಿ ಅವರು ದೇಣಿಗೆಯನ್ನು ಔಪಚಾರಿಕವಾಗಿ ಸ್ವೀಕರಿಸಿದ್ದಾರೆ. ಈ ಮುಸ್ಲಿಂ ಕುಟುಂಬವು ರೆಡ್ಡಿ ಅವರಿಗೆ ಚೆಕ್ ಅನ್ನು ಹಸ್ತಾಂತರಿಸಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿಯವರು ಧನ್ಯವಾದ ಅರ್ಪಿಸಿದ್ದಾಗಿ ಮಾಧ್ಯಮದ ವರದಿ ತಿಳಿಸಿದೆ.

Published by:ಪಾವನ ಎಚ್ ಎಸ್
First published: